ಕನ್ನಡ, ತೆಲುಗಿನಲ್ಲಿ “ಗದಾಧಾರಿ ಹನುಮಾನ್” ಚಿತ್ರ ಬಿಡುಗಡೆಗೆ ಸಿದ್ದತೆ
ತಾರಾಕಾಸುರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ವೈಭವ್, “ಗದಾಧಾರಿ ಹನುಮಾನ್” ಚಿತ್ರದ ಮೂಲಕ ರವಿಕಿರಣ್ ಎಂದು ಹೆಸರು ಬದಲಾಯಿಸಿಕೊಂಡು ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಆಂಜನೇಯ ದೇವಸ್ಥಾನದಲ್ಲಿ “ಗದಾಧಾರಿ ಹನುಮಾನ್” ಟೀಸರ್ ಅನ್ನು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಬಿಡುಗಡೆ ಮಾಡಿ ಶುಭ ಹಾರೈಸಿದರು, ಈ ವೇಳೆ ಮಾಜಿ ಅಧ್ಯಕ್ಷ ಎನ್,ಎಂ ಸುರೇಶ್, ಪದಾಧಿಕಾರಿಗಳಾದ ಶಿಲ್ಪಾ ಶ್ರೀನಿವಾಸ್, ಎನ್ .ಕುಮಾರ್ ಮತ್ತಿತರರು ಈ ವೇಳೆ ಹಾಜರಿದ್ದರು
ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರ ಪುತ್ರ ರವಿಕಿರಣ್ ಅಭಿನಯದ ಚಿತ್ರವನ್ನು ಪ್ರೋತ್ಸಾಹಿಸಲು ವಾಣಿಜ್ಯ ಮಂಡಳಿಯ ಪ್ರಮುಖರು ಹಾಜರಿದ್ದು ನವ ಪ್ರತಿಭೆಯ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು,.
ಚಿತ್ರದ ಟೀಸರ್ ಫ್ಯಾಂಟಸಿ ಮಾದರಿಯಲ್ಲಿ ತಯಾರಾಗಿದ್ದು ಕುತೂಹಲ ಕೆರಳಿಸಿದೆ. ದುಬಾರಿ ವೆಚ್ಚದ ಗ್ರಾಫಿಕ್ಸ್ ವಿಎಫ್ ಎಕ್ಸ್ ಹಾಗೂ ಸೌಂಡ್ ಎಫೆಕ್ಟ್ಸ್ ಮೇಕಿಂಗ್ ನಿಂದ ಕುತೂಹಲ ಕೆರಳಿಸಿದೆ
ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜೊತೆಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಹಿತ್ ಕೊಲ್ಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ

ಗದಾಧಾರಿ ಹನುಮಾನ್ ಸಾಹಸಮಯ, ಹಾರರ್ ಥ್ರಿಲ್ಲರ್, ದೈವತ್ವ ಹಾಗೂ ರಾಕ್ಷಸತ್ವದ ಕಥಾಹಂದರವಿದೆ. ರವಿಕಿರಣ್‍ಗೆ ಜೋಡಿಯಾಗಿ ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಇವರೊಟ್ಟಿಗೆ ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ನಟಿಸಿದ್ದಾರೆ.
ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಗ್ರಣ ಈ ಚಿತ್ರಕ್ಕಿದೆ. ಸಿ.ಎನ್ ಕಿಶೋರ್ ಸಂಕಲನ ಮಾಡಿದ್ದಾರೆ. ಟೈಗರ್ ಶಿವು ಸಾಹಸ ಸಂಯೋಜನೆ ಮಾಡಿದ್ದಾರೆ.
ಬೆಂಗಳೂರು,ಹಂಪಿ, ಗಂಗಾವತಿ,ಅಂಜನಾದ್ರಿ,ಕಿತ್ತೂರು,ಹೊನ್ನಾಪುರ ಸೇರಿದಂತೆಬಹುತೇಕ ಕರ್ನಾಟಕದಲ್ಲೇ ಈ ಚಿತ್ರದ ಚಿತ್ರೀಕರಣವಾಗಿರೋದು ವಿಶೇಷ.


