ಸಣ್ಣ ಸಣ್ಣ ನಿರ್ಮಾಪಕರಿಗೆ ಹೊಸ ದಾರಿ ತೋರಿಸುವ ಉದ್ದೇಶ ನಮ್ಮದು: ಕೆ.ಎಸ್ ರಾಮ್ ಜಿ

ಕಿರುತೆರೆಯ ಯಶಸ್ವಿ ನಿರ್ಮಾಪಕ, ನಿರ್ದೇಶಕ ಕೆ,ಎಸ್ ರಾಮ್ ಜಿ ನಿರ್ಮಾಣದ ಚೊಚ್ಚಲ ಚಿತ್ರ “ಹೆಜ್ಜಾರು” ಊಹೆಗೂ ಮೀರಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸಹಜವಾಗಿ ನಿರ್ದೇಶಕ ಹರ್ಷಪ್ರಿಯಾ, ನಾಯಕ ಭರತ್ ಆಳ್ವ, ನಾಯಕಿ ಶ್ವೇತಾ ಸೇರಿದಂತೆ ಇಡೀ ತಂಡ ಮುಖದಲ್ಲಿ ಮಂದಹಾಸ ಮನೆ ಮಾಡಿದೆ.
ಚಿತ್ರಕ್ಕೆ ಮಾದ್ಯಮದಿಂದ ಸಿಕ್ಕ ಪ್ರತಿಕ್ರಿಯಿಂದ ನನ್ನಲ್ಲಿ ಮಾಧ್ಯಮದ ಬಗ್ಗೆ ಈ ಮುಂಚೆ ಮೂಡಿದ್ದ ಎಲ್ಲಾ ಭಾವನೆ ದೂರ ಮಾಡಿದೆ. ಜೊತೆಗೆ ಮಾದ್ಯಮದ ಬಗ್ಗೆ ಮತ್ತಷ್ಟು ಪ್ರೀತಿ ಗೌರವ ಹೆಚ್ಚಾಗಿದೆ. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಬಂದರೆ ಮಾದ್ಯಮದ ಮಂದಿ ಮತ್ತು ಪ್ರೇಕ್ಷಕರು ಕೈ ಬಿಡುವುದಿಲ್ಲ ಎನ್ನುವುದು ಸಾಬೀತಾಗಿದೆ ಎಂದರು ನಿರ್ಮಾಪಕ ಕೆ.ಎಸ್ ರಾಮ್ ಜೀ.

“ಹೆಜ್ಜಾರು” ಚಿತ್ರದ ಯಶಸ್ಸು ಮಾಧ್ಯಮದ ಮುಂದೆ ಹಂಚಿಕೊಳ್ಳಲು ತಮ್ಮದೇ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ರಾಮ್ ಜಿ, ಮೊದಲ ಚಿತ್ರದ ಮೊದಲ ಯಶಸ್ಸಿನ ಗೋಷ್ಠಿಯಲ್ಲಿ ಸಿನಿಮಾ ಸಕ್ಸಸ್ ಬಗ್ಗೆ ಮುಕ್ತವಾಗಿ ಮಾತು ಹಂಚಿಕೊಂಡರು
ಸಿನಿಮಾ ಮಾಡಿ ಅದನ್ನು ಬಿಡುಗಡೆ ಮಾಡುವುದೇ ದೊಡ್ಡ ಸಕ್ಸಸ್ ಅದರಲ್ಲಿ ಜನರಿಗೆ ತಲುಪಿಸುವುದು ಇನ್ನೂ ದೊಡ್ಡ ಸಕ್ಸಸ್. ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ, ಜನರಿಗೂ ತಲುಪಿ ಅವರಿಂದ ಸಿಗುತ್ತಿರುವ ಪ್ರತಿಕ್ರಿಯೆ ನೋಡಿದರೆ ನಮ್ಮ ಪ್ರಯತ್ನ ಸಾರ್ಥಕ ಅನ್ನಿಸಿದೆ. ಅಜ್ಜಿ ತಾತ ಸೇರಿ ಎಲ್ಲಾ ವಯೋಮಾನದ ಮಂದಿಗೆ ಚಿತ್ರ ಇಷ್ಟ ಆಗಿದೆ ಎಂದರು
ಮೊದಲ ಸಿನಿಮಾ ಆಗಿದ್ದರಿಂದ ವಿತರಣೆಯನ್ನೂ ನಮ್ಮದೇ ಸಂಸ್ಥೆಯಿಂದ ಮಾಡಿದ್ದೇವೆ. ಕೆಲವು ಬಿಡುಗಡೆ ಮಾಡಲು ಮುಂದೆ ಬಂದಿದ್ದರು. ಚಿತ್ರ ನಿರ್ಮಾಣ ಆರಂಭಿಸಿರುವ ಹಿನ್ನೆಲೆಯಲ್ಲಿ ವಿತರಣೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮತ್ತು ಕಲಿಯಲು ಉತ್ತಮ ಅವಕಾಶ ಹೀಗಾಗಿ ನಮ್ಮದೇ ಸಂಸ್ಥೆಯಿಂದ ಹೆಜ್ಜಾರು ಚಿತ್ರ ಬಿಡುಗಡೆ ಮಾಡಿದೆ. ಇದರಿಂದ ಯಾವ ಯಾವ ಭಾಗದಲ್ಲಿ ವ್ಯವಹಾರ ಆಗುತ್ತದೆ. ಏನೆಲ್ಲಾ ಕಷ್ಟ-ಸುಖ ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ನನ್ನ ಉದ್ದೇಶವಾಗಿತ್ತು. ಆ ಕೆಲಸ ಮಾಡಿದ್ದೇನೆ

ಹೊಸ ನಿರ್ಮಾಪಕರಿಗೆ, ಹಾಗು ಸಣ್ಣ-ಸಣ್ಣ ಚಿತ್ರಗಳ ನಿರ್ಮಾಪಕರಿಗೆ ವಿತರಣೆ ಅಂದರೆ ದೊಡ್ಡ ಸಮಸ್ಯೆ, ಅಂತಹ ಸಮಸ್ಯೆಯನ್ನು ಎದುರಿಸಲು ಮತ್ತು ಕಷ್ಟಕರವಾಗಿರುವ ವಿತರಣೆ ಮಾಡುವ ಕೆಲಸವನ್ನು ಸುಲಭ ಎನ್ನುವುದನ್ನು ನಿರೂಪಿಸುವುದೂ ಕೂಡ ನಮ್ಮ ಸಂಸ್ಥೆಯಿಂದ ಹೆಜ್ಜಾರು ಚಿತ್ರ ಬಿಡುಗಡೆ ಮಾಡಿದೆ, ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಖುಷಿ ಆಗಿದೆ ಎಂದರು
ನಮ್ಮ ಸಂಸ್ಥೆಯಿಂದ ವರ್ಷಕ್ಕೆ ಕನಿಷ್ಠ ನಾಲ್ಕು ಸಿನಿಮಾ ನಿರ್ಮಾಣ ಮಾಡುವ ಗುರಿ ಇದೆ. ಜೊತೆಗೆ ಹೊಸ ನಿರ್ಮಾಪಕರಿಗೆ ವಿತರಣೆಯನ್ನು ನಮ್ಮ ಸಂಸ್ಥೆಯಿಂದ ಮಾಡಿಕೊಡುವ ಉದ್ದೇಶವೂ ಇದೆ. ಈ ಮೂಲಕ ಹೊಸಬರಿಗೆ ಹೊಸ ದಾರಿ ತೋರಿಸಿಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಸಣ್ಣ, ಸಣ್ಣ ನಿರ್ಮಾಪಕರು ಭಯ ಪಡಬೇಕಾಗಿಲ್ಲ ಎನ್ನುವುದನ್ನು ನನ್ನ ಉದ್ದೇಶ ಎಂದರು
ಹೊಸಬರಿಗೆ ವಿತರಣೆ ಮಾಡಿಕೊಡಲಾಗುವುದು, ಜೊತೆಗೆ ಅವರಿಗೆ ವಿತರಣೆಯ ಮಾರ್ಗವನ್ನೂ ತೋರಿಸಿಕೊಟ್ಟು ಅವರಿಗೆ ಚಿತ್ರ ಬಿಡುಗಡೆ ಸುಲಭ ಮಾಡುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ಮಾಹಿತಿ ಹಂಚಿಕೊಂಡರು
ಹೆಜ್ಜಾರು ಸದ್ಯ 74 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರ ಉತ್ತಮ ಪ್ರದರ್ಶನ ಕಂಡಿದೆ ಇದು ಖುಷಿಯ ಸಂಗತಿ. ಈ ಗೆಲುವಿಗೆ ಇಡೀ ತಂಡ ಕಾರಣ ಎಂದರು

ಮಲೆಯಾಳಂಗೆ ರಿಮೇಕ್
ಹೆಜ್ಜಾರು ಚಿತ್ರ ಮಲೆಯಾಳಂಗೆ ರಿಮೇಕ್ ಆಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಲೇ ಅಲ್ಲಿನ ಮಂದಿ ಚಿತ್ರ ನೋಡಿ ಮಾತುಕತೆ ಮಾಡಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ. ಜೊತೆಗೆ ಬೇರೆ ಬೇರೆ ಭಾಷೆಗೂ ಚಿತ್ರ ರಿಮೇಕ್ ಆಗಬಹುದು ಎಂದರು ಕೆ.ಎಸ್ ರಾಮ್ ಜೀ
ಇನ್ನು ಎಲ್ಲಾ ವಾಹಿನಿಯ ಜೊತೆ ಉತ್ತಮ ಬಾಂಧವ್ಯ ಇರುವ ಹಿನ್ನೆಲೆಯಲ್ಲಿ ಟಿವಿ ಹಕ್ಕು ಮಾರಾಟದ ವಿಷಯ ಸುಗಮವಾಗಲಿದೆ. ಚಿತ್ರಕ್ಕಾಗಿ ದುಡಿದ ಎಲ್ಲರನ್ನು ಸ್ಮರಿಸುವುದು ನಮ್ಮ ಕೆಲಸ ಎಂದು ಕೃತಜ್ಞತೆ ಸಲ್ಲಿಸಿದರು.