ವಿಮಾನ ಅಪಘಾತ ನಟ ದೃವಸರ್ಜಾ, ಮಾರ್ಟಿನ್ ಚಿತ್ರತಂಡ ಪಾರು: ಪುನರ್ಜನ್ಮ ಎಂದ ದೃವ ಸರ್ಜಾ

“ಮಾರ್ಟಿನ್” ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ನಟ ದೃವ ಸರ್ಜಾ ಮತ್ತು ನಿರ್ದೇಶಕ ಎಪಿ ಅರ್ಜುನ್ ಸೇರಿದಂತೆ ಇಡೀ ಚಿತ್ರತಂಡ ಪಾರಾಗಿ ನೆಮ್ಮದಿಯ ನಿಟ್ಟಿಸಿರುವ ಬಿಟ್ಟಿದೆ.
ಇಂಡಿಗೋ ವಿಮಾನದಲ್ಲಿ ಸಮಯದಲ್ಲಿ ಪೈಲೆಟ್ ಸಮಯ ಪ್ರಜ್ಞೆಯಿಂದ ಕ್ಷಣಮಾತ್ರದಲ್ಲಿ ವಿಮಾನ ಅಪಘಾತ ತಪ್ಪಿದೆ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಮಾರ್ಟಿನ್ ಚಿತ್ರತಂಡ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ದೃವ ಸರ್ಜಾ, ಈ ರೀತಿಯ ಘಟನೆ ಹಿಂದೆ ಎಂದೂ ಆಗಿರಲಿಲ್ಲ. ದೇವರ ಆಶೀರ್ವಾ, ಅಭಿಮಾನಿಗಳ ಹಾರೈಕೆ ಮತ್ತು ಗುರು ಹಿರಿಯರ ಬೆಂಬಲದಿಂದ ದೊಡ್ಡ ದುರಂತವೊಂದು ತಪ್ಪಿದೆ ಎಂದಿದ್ದಾರೆ.
ಮೊದಲ ಬಾರಿಗೆ ಸಾವನ್ನು ಎದುರಿಸಿದ್ದೇನೆ. ನನ್ನ ತಂದೆ-ತಾಯಿ ಅಭಿಮಾನಿಗಳಾದ ವಿಐಪಿ,ಸ್ವರ್ಗದಲ್ಲಿ ಅಣ್ಣ ಚಿರು, ಅಶೀರ್ವಾದದಿಂದ ಅಪಘಾದಿಂದ ಪಾರಾಗಿದ್ದೇನೆ ಎಂದು ತಿಳಿಸಿದ್ದಾರೆ.
ವಿಮಾನ ಅಪಘಾತದ ಮುನ್ಸೂಚನೆ ಸಿಕ್ಕ ಬಳಿಕ ವಿಮಾನದಲ್ಲಿದ್ದ ಪ್ರತಿಯೊಬ್ಬ ಪ್ರಯಾಣಿಕ ಜೋರಾಗಿ ಪ್ರಾರ್ಥಿಸುತ್ತಿದ್ದು ಕೇಳಿ ಮತ್ತಷ್ಟು ಉಸಿರು ಬಿಗಿ ಹಿಡಿಯುವಂತೆ ಮಾಡಿತು. ಜೀವ ಕೈಯಲ್ಲಿಡಿದು ಎಲ್ಲರೂ ಸುಕ್ಷಿತವಾಗಿ ಭೂಮಿಗೆ ಇಳಿಯುತ್ತಿದ್ದಂತೆ ಎಲ್ಲರೂ ನಿಟ್ಟಿಸಿರು ಬಿಟ್ಟೆವು ಎಂದರು.

ನೆರೆದಿದ್ದ ಜನರು ಮತ್ತು ಪ್ರಯಾಣಿಕರು, ಮತ್ತು ಜನ ಸಮೂಹದ ಕಣ್ಣಲ್ಲಿ ಸಂತೋಷದ ಕಣ್ಣೀರು ಮತ್ತು ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಪ್ರೀತಿ ಪಾತ್ರರನ್ನು ನೆನೆದು ನಿಟ್ಟಿಸಿರುವ ಬಿಟ್ಟರು.ಈ ಪುನರ್‍ಜನ್ಮ ಸಿಕ್ಕಿದ್ದಾಗಿ ದೇವರಿಗೆ ಧನ್ಯವಾದ ಹೇಳುತ್ತೇನೆ ಜೈ ಆಂಜನೇಯ ಎಂದು ಅವರು ತಿಳಿಸಿದ್ಧಾರೆ.
ವಿಮಾನದಲ್ಲಿ ನಿರ್ದೇಶಕ ಎಪಿ ಅರ್ಜುನ್, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ನಾಯಕಿ ಸೇರಿದಂತೆ ಇಡೀ ಚಿತ್ರತಂಡ ಇತ್ತು. ಎಲ್ಲರೂ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ