ಸೀತಾ ಹುಟ್ಟಹಬ್ಬಕ್ಕೆ ಪೋಸ್ಟರ್ ಬಿಡುಗಡೆ
ಶುರುವಾದಾಗಿನಿಂದ ಸದ್ದು ಮಾಡುತ್ತಾ ಸುದ್ದಿಯಾಗುತ್ತಿರುವ ಅದ್ದೂರಿ ಸಿನಿಮಾ ’ಆದಿಪುರುಷ್’ ಚಿತ್ರತಂಡವು ಹೊಸ ವಿಷಯವನ್ನು ತಿಳಿಸಿದೆ.
ಕಥೆಯಲ್ಲಿ ಬರುವ ಜಾನಕಿ ಹುಟ್ಟುಹಬ್ಬದ ಸಲುವಾಗಿ, ಪಾತ್ರಧಾರಿ ನಾಯಕಿ ಕೃತಿಸನೂನ್ ಪೋಸ್ಟರ್ ಹಾಗೂ ’ರಾಮ್ ಸಿಯಾ ರಾಮ್’ ಆಡಿಯೋ ಟೀಸರ್‌ನ್ನು ಹೊರಬಿಡಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿರುವುದು ತಂಡಕ್ಕೆ ಖುಷಿ ತಂದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ’ಟಿ’ ಸೀರೀಸ್‌ನ ಭೂಷಣ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ವಾಲ್ಮಿಕಿ ಬರೆದ ರಾಮಾಯಣದ ಅಂಶಗಳನ್ನು ಚಿತ್ರದಲ್ಲಿ ಬಳಸಲಾಗಿದೆ.
ತಾರಾಗಣದಲ್ಲಿ ಪ್ರಭಾಸ್, ಕೃತಿಸನೂನ್, ಸೈಫ್‍ಆಲಿಖಾನ್ ಮತ್ತು ಸನ್ನಿಸಿಂಗ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ದೇವದತ್ತನಾಗೆ, ವತ್ಸಲ್‍ಸೇತ್, ಸೋನಾಲ್‍ಚೌಹಾಣ್ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಸಂಗೀತ ಅಜಯ್-ಅತುಲ್, ಛಾಯಾಗ್ರಹಣ ಕಾರ್ತಿಕ್‌ಪಳನಿ, ಸಂಕಲನ ಅಪೂರ್ವಮೋತಿವಾಲೆಸಹಾಯ್-ಆಶಿಷ್‌ಮಾತ್ರ. ಅಂದಹಾಗೆ ಸಿನಿಮಾವು ಜೂನ್ 16ರಂದು ವಿಶ್ವದಾದ್ಯಂತ ಹಿಂದಿ, ತೆಲುಗು, ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ೩ಡಿ ಮಾದರಿಯಲ್ಲಿ ತೆರೆಗೆ ಬರುತ್ತಿದೆ.