ಪರಿಶುದ್ಧ ಪ್ರೀತಿ, ತ್ಯಾಗ, ಸಂಬಂಧದ “ಮರ್ಫಿ” ಅಕ್ಟೋಬರ್ 18 ರಂದು ಬಿಡುಗಡೆ

ಪ್ರಭು ಮಂಡಕೂರು, ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ನಟನೆಯ ” ಮರ್ಫಿ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 18 ರಂದು ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು.
ನವರಾತ್ರಿಯ ವೇಳೆ ನಟಿಯರಾದ ಪ್ರಿಯಾಂಕಾ ಉಪೇಂದ್ರ, ರಾಗಿಣಿ ದ್ವಿವೇದಿ, ಮೇಘನಾ ಗಾಂವಕರ್, ಅಮೃತಾ ಅಯ್ಯಂಗಾರ್, ಧನ್ಯ ರಾಮ್‍ಕುಮಾರ್, ಖುಷಿರವಿ , ಸಪ್ತಮಿ ಗೌಡ , ಅಂಕಿತಾ ಅಮರ್, ರೀಷ್ಮಾ ನಾಣಯ್ಯ ಸೇರಿದಂತೆ 9 ತಾರೆಯರು ಆಗಮಿಸಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭಹಾರೈಸಿದರು.

ಸಾಮಾನ್ಯವಾಗಿ ಒಬ್ಬರು ಇಲ್ಲವೆ ಇಬ್ಬರು ನಾಯಕಿಯರನ್ನು ಒಂದೇ ವೇದಿಕೆಗೆ ಕರೆಸುವುದು ಅಪರೂಪ ಅಂತಹುದರಲ್ಲಿ “ಮರ್ಫಿ” ಚಿತ್ರ ತಂಡ ಬರೋಬ್ಬರಿ 9 ನಾಯಕಿಯರನ್ನು ಕರೆಸಿ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಅದರಲ್ಲಿ ಬಹುತೇಕರು ಚಿತ್ರ ನೋಡಿ ಚಿತ್ರಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಂದಿದ್ದರು ಎನ್ನುವುದು ಮತ್ತೊಂದು ವಿಶೇಷ.
ನಟಿಯರನ್ನು ಮುದ್ದಾದ ಬೊಂಬೆಗಳು ಎಂದು ಕರೆಯುತ್ತಾರೆ ಆದರೆ, 9 ನಟಿಯರು ಚಿತ್ರದ ಬಗ್ಗೆ ಮಾತನಾಡಿದ ಪರಿ, ಹಂಚಿಕೊಂಡ ವಿಷಯಗಳು ಒಬ್ಬರಿಗಿಂತ ಒಬ್ಬರು ಅರ್ಥಪೂರ್ಣವಾಗಿ ಮಾತನಾಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದವರು.
ರಾಮ್ಕೋ ಸೋಮಣ್ಣ ಮತ್ತು ಬಿಎಸ್‍ಪಿ ವರ್ಮಾ ನಿರ್ಮಾಣದ ಚಿತ್ರಕ್ಕೆ ಬಿಎಸ್‍ಪಿ ವರ್ಮಾ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಲ್ಲಿ ಪ್ರಭು ಮಂಡಕೂರು, ರೋಶಿನಿ ಪ್ರಕಾಶ್, ಇಳಾ ವೀರಮಲ್ಲ, ದತ್ತಣ್ಣ, ಮಹಂತೇಶ್ ಹಿರೇಮಠ ಸೇರಿದಂತೆ ಹಲವು ಕಲಾವಿರು ಚಿತ್ರದಲ್ಲಿ ನಟಿಸಿದ್ದಾರೆ.
ನಿರ್ದೇಶಕ ಬಿಎಸ್‍ಪಿ ವರ್ಮಾ ಮಾತನಾಡಿ, ಮಾನವೀಯ ಸಂಬಂಧ, ಪ್ರೀತಿ,ತ್ಯಾಗದ ಕುರಿತ ಕಥಾ ಹಂದರ ಹೊಂದಿರುವ ಚಿತ್ರ. ಹಲವಾರು ವೈಫಲ್ಯಗಳ ನಂತರ ಈ ಚಿತ್ರ ಮಾಡಲಾಗಿದೆ, ಮಾನವೀಯ ಸಂಬಂಧಗಳನ್ನು ಚಿತ್ರದ ಮೂಲಕ ತೋರಿಸಲಾಗಿದ್ದು ಎಲ್ಲರಿಗೂ ಇಷ್ಟವಾಗಲಿದೆ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು.
ನಟ ಪ್ರಭು ಮಂಡಕೂರು, ಚಿತ್ರೀಕರಣ ಆರಂಭದಿಂದ ಬಿಡುಗಡೆ ತನಕ ಕಳೆದ ನಾಲ್ಕು ವರ್ಷಗಳಲ್ಲಿ ಅನೇಕ ಅಡೆ ತಡೆ ಎದುರಿಸಿ ಬಿಡುಗಡೆ ಹಂತಕ್ಕೆ ಬಂದಿದ್ದೇವೆ. ಬಹಳಷ್ಟು ಸಿನಿಮಾದಲ್ಲಿ ನಟಿಸಿದ್ದೇನೆ. ಮರ್ಫಿ ಚಿತ್ರವನ್ನು ಆಶೀರ್ವದಿಸಲು 9 ನಟಿಯರು ಬಂದಿದ್ದಾರೆ. ಎಷ್ಟು ಚಿತ್ರಗಳಿಗೆ ಇಂತಹ ಅವಕಾಶ ಸಿಗಲಿದೆ. ನಿರ್ದೇಶಕ ಬಿಎಸ್‍ಪಿ ವರ್ಮಾ ಅವರ ಜೊತೆ ಅನೇಕ ಭಾರಿ ಚಿತ್ರ ಚೆನ್ನಾಗಿ ಬರಲಿ ಎನ್ನುವ ಉದ್ದೇಶದಿಂದ ಜಗಳ ಮಾಡಿದ್ದೇವೆ. ಅದು ಚಿತ್ರಕ್ಕಾಗಿ ಮಾತ್ರ. ಜೀವನದಲ್ಲಿ ನಿಮಗೆ ಹತ್ತಿರವಾದವರು ಭೂಮಿಯ ಮೇಲೆ ಇಲ್ಲದಿದ್ದರೆ ಊಹೆ ಮಾಡಿಕೊಳ್ಳುವುದಾದರೆ ನಿಮ್ಮ ಬಗ್ಗೆ ಹೇಗೆ ರಿಯಾಕ್ಟ್ ಎನ್ನುವುದು ಮರ್ಫಿ ಎಂದು ಮಾಹಿತಿ ನೀಡಿದರು.
ನಟಿ ರೋಶಿನಿ ಪ್ರಕಾಶ್ ಮಾತನಾಡಿ,ನಟ ಪ್ರಭು ಮತ್ತು ನಿರ್ದೇಶಕ ವರ್ಮಾ ಅವರ ಶ್ರಮದ ಫಲವಾಗಿ ಚಿತ್ರ ತೆರೆಗೆ ಬರುತ್ತಿದೆ, ನಟಿ ಇಳಾ ನಾಲ್ಕು ವರ್ಷ ಇಡೀ ಚಿತ್ರಕ್ಕಾಗಿ ಸಮಯ ಮೀಸಲಿಟ್ಟಿದ್ದಾರೆ, ಕಾಸ್ಟೂಮ್ ಡಿಸೈನ್ ಒಂದೆಡೆಯಾದರೆ ನಟಿಯಾಗಿಯೂ ಕಾಣಿಸಿಕೊಂಡಿದ್ದಾರೆ .ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ನಟಿ ಇಳಾ ಅವರಿಂದ ಕಲಿಯಬೇಕು. ಚಿತ್ರದಲ್ಲಿ ಸಿನಿಮಾ ನೋಡಿದಾಗ ಒಳ್ಳೆಯ ರೂಪ ಪಡೆದುಕೊಂಡಿದೆ, ಎಲ್ಲರ ಸಹಕಾರ ಮತ್ತು ಆಶೀರ್ವಾದ ಬೇಕು ಎಂದು ಕೇಳಿಕೊಂಡರು.
ನಟಿ ಇಳಾ ಮಾತನಾಡಿ, ಚಿತ್ರದ ಜೊತೆ ಬೆಳೆದಿದ್ದೇನೆ, ಕಲಿತಿದ್ದೇನೆ ಎನ್ನುತ್ತಿದ್ದಂತೆ ವೇದಿಕೆ ಮೇಲೆ ಕಣ್ಣೀರು ಹಾಕಿದರು, ಈ ವೇಲೆ ನಟ ಪ್ರಭು ಸೇರಿದಂತೆ ಕಲಾವಿದರು ಸಮಾಧಾನ ಮಾಡಿದರು
ನಿರ್ಮಾಪಕ ರಾಮ್ಕೋ ಸೋಮಣ್ಣ ಮಾತನಾಡಿ ಇದು ಮೂರನೇ ಚಿತ್ರ, ಸ್ವಲ್ಪ ತಡವಾಗಿ ಆದರೆ ಚಿತ್ರ ಅದ್ಬುತವಾಗಿ ಮುಡಿ ಬಂದಿದೆ. ಎಲ್ಲರ ಸಹಕಾರ ಮತ್ತು ಬೆಂಬಲ ಇರಲಿ ಎಂದು ಕೇಳಿಕೊಂಡರು.
ಹಿರಿಯ ಕಲಾವಿದ ದತ್ತಣ್ಣ ಮಾತನಾಡಿ, ಮರ್ಫಿ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟರ್ ಸಿನಿಮಾ ಆಗಲಿದೆ, ನಟ ಪ್ರಭು, ನಟಿಯರಾದ ರೋಶಿನಿ ಪ್ರಕಾಶ್, ಇಳಾ ವೀರಮಲ್ಲ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ, ಯುವ ಕಲಾವಿದರ ಜೊತೆ ನಟಿಸಿದ್ದು ಒಳ್ಳೆಯ ಅನುಭವ ಎಂದರು
ಸಹಕಲಾವಿದ ಮಹಂತೇಶ್ ಹಿರೇಮಠ ಸೇರಿದಂತೆ ಇಡೀ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು.