“ಉಗ್ರಾವತಾರ” ದಲ್ಲಿ ನಟಿ ಪ್ರಿಯಾಂಕ : ಪತ್ನಿಯ ಗ್ಲಾಮರ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದ ನಟ ಉಪೇಂದ್ರ
ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ಹಿರಿಯ ನಟಿ ಪ್ರಿಯಾಂಕಾಉಪೇಂದ್ರ ಆಕ್ಷನ್‍ಕ್ವೀನ್ ಆಗಿ ಕಾಣಿಸಿಕೊಂಡಿರುವ ” ಉಗ್ರಾವತಾರ ” ಚಿತ್ರ ನವಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಈಹಿನ್ನೆಲೆಯಲ್ಲಿ ಚಿತ್ರದ ಹಾಡು ಪ್ರದರ್ಶನ ಮತ್ತು ಟ್ರೈಲರ್ ಬಿಡುಗಡೆ ಇತ್ತು, ಅಂದಹಾಗೆ ಉಗ್ರವತಾರ ಚಿತ್ರ ಕನ್ನಡ , ತೆಲುಗು, ತಮಿಳು ,ಮಲೆಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಟ್ರೈಲರ್ ಬಿಡುಗಡೆ ಮಾಡಿದ ನಟ ಉಪೇಂದ್ರ. ಮಾತನಾಡಿ, ಪತ್ನಿ ಪ್ರಿಯಾಂಕ ಇಷ್ಟೊಂದು ಆಕ್ಷನ್ ಮಾಡುತ್ತಾರೆ ಅಂದುಕೊಂಡಿರಲ್ಲಿ, ಅದ್ಬುತವಾಗಿ ಮಾಡಿದ್ದಾರೆ. ಚಿತ್ರ ನಾನು ನೋಡಿದ್ದೇನೆ. ನಿರ್ದೇಶಕರು ಒಳ್ಳೆಯ ಕತೆ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಿಯಾಂಕ ಉಪೇಂದ್ರ ಸೇರಿ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಬೇಕು ಎಂದರು.
ಪೊಲೀಸ್ ಪಾತ್ರ ಎನ್ನುತ್ತಿದ್ದಂತೆ ಪ್ರಿಯಾಂಕ ನಟಿಸಲು ಒಪ್ಪಿಕೊಂಡರು ಆದರೆ ಆಕ್ಷನ್ ಸೀನ್ ಮಾಡಿ ಮನೆಗೆ ಬಂದಾಗ ಮೈಮೇಲೆ ತರಚಿದ ಮಾರ್ಕ್ ತೋರಿಸುತ್ತಿದ್ದರು, ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ತುಂಬಾ ಗ್ಲಾಮರ್ ಆಗಿ ನಿರ್ದೇಶಕರು ತೋರಿಸಿದ್ದಾರೆ, ನಾನು ನಿರ್ದೇಶಕರಾಗಿದ್ದರೆ ಕಪ್ಪಗೆ ತೋರಿಸುತ್ತಿದ್ದೆ, ಪ್ರಿಯಾಂಕ ಅವರದು ಕಡಿಮೆಯಾಗದ ಗ್ಲಾಮರ್. ಕಷ್ಟಪಟ್ಟಿದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದರು
ಪ್ರಿಯಾಂಕಾ ಪ್ರಿಯಾಂಕಾ ಮಾತನಾಡಿ, ಆಕ್ಷನ್ ಸನ್ನಿವೇಶ ಮಾಡುವಾಗ ಅದರ ಕಷ್ಡ ಗೊತ್ತಾಯಿತು. ಪ್ರತಿ ಸಿನಿಮಾದಲ್ಲಿ ಆಕ್ಷನ್ ಮಾಡುವ ನಟರಿಗೆ ಮತ್ತು ಸಾಹಸ ನಿರ್ದೇಶಕರು ಮತ್ತು ಅವರ ತಂಡಕ್ಕೆ ತಲೆ ಬಾಗಿ ನಮಸ್ಕರಿಸುವೆ . ಚಿತ್ರದಲ್ಲಿ ಸುರಕ್ಷಾ ಅಪ್ ಸೇರಿಂದತೆ ಮಹಿಳೆಯರ ಸುರಕ್ಷೆತೆಯ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದರು.
ನಿರ್ದೇಶಕ. ಗುರುಮೂರ್ತಿ ಮಾತನಾಡಿ, ಸಾಮಾಜಿಕ ಕಳಕಳಿ ಇರುವ ಸಿನಿಮಾ, ಹೆಣ್ಣು ಮತ್ತು ಭೂ ತಾಯಿಗೆ ಶರಣಾಗಿರಬೇಕು. ಚಿತ್ರದಲ್ಲಿ ಪ್ರಿಯಾಂಕಾ ಮೇಡಂ ಆಕ್ಷನ್ ಮಾಡಿದ್ದು ಗಮನ ಸೆಳೆದಿದ್ದಾರೆ. ನಾಲ್ಕು ಭಾಷೆಯಲ್ಲಿ ಚಿತ್ರದ ಡಬ್ಬಿಂಗ್ ಮಾಡಿದ್ದೇವೆ. ಸಮಾಜದಲ್ಲಿ ನಡೆಯುವ ಘಟನೆ ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.ಬೇರೆಯ ಹೆಣ್ಣು ಮಕ್ಕಳನ್ನು ತಾಯಿ ತಂಗಿ ರೂಪದಲ್ಲಿ ನೋಡಿ ಎನ್ನುವುದು ತೋರಿಸಲಾಗುತ್ತಿದೆ. 5ಆಕ್ಷನ್ ಸನ್ನಿವೇಶಗಳಿವೆ. ಇನ್ಸ್‍ಪೆಕ್ಟರ್ ಪಾತ್ರ ಎನ್ನುತ್ತಿದ್ದಂತೆ ನಾವು ಮಾಡುತ್ತೇನೆ ಎಂದರು
ನಿರ್ಮಾಪಕ ಎಸ್.ಜಿಸತೀಶ್ ಮಾತನಾಡಿ, ನವಂಬರ್‍ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ, ಟೀಮ್ ವರ್ಕ್‍ಆಗಿ ಕೆಲಸ ಮಾಡಿದ್ದೇವೆ. ಪ್ರಿಯಾಂಕ ಅವರು ಮೊದಲ ಬಾರಿಗೆ ಆಕ್ಷನ್ ಮಾಡಿದ್ದಾರೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ಸಂಗೀತ ನಿರ್ದೆಶಕ ಕೃಷ್ಣ ಬಸ್ರೂರು ಮಾತನಾಡಿ, ಹೇಂಗೆ ಬರ್ತಾಳೆ ಹಾಡನ್ನು ಕಿನ್ನಾಳ್ ರಾಜ್ ಬರೆದಿದ್ದು ಹಾಡು ಹಿಟ್ ಆಗಿದೆ ಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿ ಮೂಡಿ ಬಂದಿವೆ ಎಂದರು.
ಪ್ರವೀಣ್ ಸೂರ್ಯ ಮಾತನಾಡಿ, ನಿರ್ದೇಶಕರು ಉಗ್ರಾವತಾರ ಚಿತ್ರದಲ್ಲಿ ಒಳ್ಳೆಯ ಪಾತ್ರ ನೀಡಿದ್ದಾರೆ. ಪ್ರಿಯಾಂಕಾ ಮೇಡಂ ಜೊತೆ ಆಕ್ಷನ್ ಸನ್ನಿವೇಶ ಚೆನ್ನಾಗಿ ಮೂಡಿ ಬಂದಿದೆ. ಅವರಿಗೆ ಪಂಚ್ ಮಾಡಬೇಕಿತ್ತು ಮಾಡು ಅಂದ್ರು ನನಗೆ ಭಯ ಆಗ್ತಾ ಇತ್ತು. ನವಂಬರ್ ನಲ್ಲಿ ಬಿಡುಗಡೆ ಆಗ್ತಾ ಇದೆ ಸಹಕಾರವಿರಲಿ ಎಂದರು
ಕಲಾವಿದರಾದ ರೋಬೋ ಗಣೇಶ್ , ಅಂಕಿತಾ ಜಯರಾಮ್ ,ದರ್ಶನ್ ಸುರ್ಯ , ಲಕ್ಷ್ಯ ಶೆಟ್ಟಿ, ಪೂಜಾ ಕೋಟ್ಟೂರು, ಕಾರ್ಯಯನ್, ಲೀಲಾ ಮೋಹನ್, ಚರಣ್ ,ಛಾಯಾಗ್ರಾಹಕ ನಂದಕುಮಾರ್ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ವಿತರಕ ಮರಿಸ್ವಾಮಿ ಮಾತನಾಡಿ ನವಂಬರ್‍ನಲ್ಲಿ ಬಿಡುಗಡೆ ಮಾಡಲಾಗುವುದು ಸದ್ಯದಲ್ಲಿಯೇ ದಿನಾಂಕ ಪ್ರಕಟಿಸಲಾಗುವುದು ಎಂದು ಹೇಳಿದರು.