"Santhosha Sangeeta" Trailer Released: The movie will hit the screens soon

“ಸಂತೋಷ ಸಂಗೀತ” ಚಿತ್ರದ ಟ್ರೈಲರ್ ಬಿಡುಗಡೆ : ಸದ್ಯದಲ್ಲೇ ಸಿನಿಮಾ ತೆರೆಗೆ - CineNewsKannada.com

“ಸಂತೋಷ ಸಂಗೀತ” ಚಿತ್ರದ ಟ್ರೈಲರ್ ಬಿಡುಗಡೆ : ಸದ್ಯದಲ್ಲೇ ಸಿನಿಮಾ ತೆರೆಗೆ

ಲಾಕ್ ಡೌನ್ ಸಮಯದಲ್ಲಿ ಬರೆದ ಲವ್ , ಕಾಮಿಡಿ, ಸಸ್ಪೆನ್ಸ್ ಹೀಗೆ ಹಲವು ಅಂಶಗಳನ್ನು ಮುಂದಿಟ್ಟುಕೊಂಡು ನಿರ್ಮಾಣ ಮಾಡಿರುವ “ಸಂತೋಷ ಸಂಗೀತ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ನಟಿಸಿರುವ “ಸಂತೋಷ ಸಂಗೀತ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.

ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿ ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದರು. ಲಹರಿ ವೇಲು ಅವರು ಆಗಮಿಸಿದ್ದರು ಈ ಚಿತ್ರ ‘ಯು’ಪ್ರಮಾಣ ಪತ್ರ ಪಡೆದಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಈ ವೇಳೆ ಮಾತನಾಡಿದ ನಿರ್ದೇಶಕ ಸಿದ್ದು ಮಾತನಾಡಿ “ಸಂತೋಷ ಸಂಗೀತ” ಚಿತ್ರ ನಿಲ್ಲಲು ನಾಲ್ಕು ಕಾಲು ತುಂಬಾ ಅವಶ್ಯಕತೆ ಇದ್ದು, ತಯಾರಿ, ನಟನೆ, ಎರಡು ಕಾಲದರೆ, ಜನರಿಗೆ ತಲುಪಿಸುವ ಮಾಧ್ಯಮ ಮತ್ತು ವೀಕ್ಷಕರ ಪ್ರೀತಿ ಇನ್ನೆರಡು ಕಾಲು ಆಗಿರುತ್ತದೆ. ಈ ನಾಲ್ಕು ಕಾಲು ನಿಂತರೆ ಸಿನಿಮಾ ನಿಲ್ಲುತ್ತದೆ ಎಂದರು.

ಸಿನಿಮಾ ಪ್ರೇಮಿ. ಒಳ್ಳೆಯ ಸಿನಿಮಾ ನೋಡಿ, ನಾನು ರೀತಿ ಸಿನಿಮಾ ಮಾಡಬೇಕೆಂದು ಕನಸ್ಸು ಕಂಡವನು. ಆ ಕನಸು ಈಗ ನನಸ್ಸಾಗಿದೆ. ಎಲ್ಲರ ಸಹಕಾರದಿಂದ “ಸಂತೋಷ ಸಂಗೀತ” ಸಿನಿಮಾವನ್ನು ನಾನೇ ನಿರ್ಮಾಣ ಮಾಡಿ ನಿರ್ದೇಶಿಸಿದ್ದೇನೆ.

ಚಿತ್ರದಲ್ಲಿದೆ. ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ಈ ಚಿತ್ರದ ನಾಯಕ,ನಾಯಕಿಯಾಗಿ ನಟಿಸಿದ್ದಾರೆ. ದೊಡ್ಡಣ್ಣ, ಅವಿನಾಶ್, ಲಯ ಕೋಕಿಲ, ಕವನ, ಅಮಿತ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ, ಮಡೆನೂರು ಮನು, ಹನೀಶ್, ನಕ್ಷತ್ರ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದರು.

ನಾಯಕ ಅರ್ನವ್ ವಿನ್ಯಾಸ್ ಮಾತನಾಡಿ 2017 ರಲ್ಲಿ ತೆರೆಕಂಡ” ಹೊಂಬಣ್ಣ” ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ನಾನು ಆನಂತರ “ಪ್ರೇಮಂ” ಚಿತ್ರದಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಉದ್ಯಮಿಯ ಪಾತ್ರ. ನಿಜಜೀವನದಲ್ಲೂ ಪತಿ ಪತ್ನಿಯರಾಗಿರುವ ನಾನು ಹಾಗೂ ರಾಣಿ ವರದ್ , ತೆರೆಯ ಮೇಲೂ ಪತಿ ಪತ್ನಿಯರಾಗೇ ಕಾಣಿಸಿಕೊಂಡಿರುವುದು ವಿಶೇಷ ಎಂದರು .

ನಾಯಕಿ ರಾಣಿ ವರದ್ ಮಾತನಾಡಿ ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ತಿಳಿಸಿದರೆ ಮತ್ತೊಬ್ಬ ನಟಿ ನಕ್ಷತ್ರ ಇವರಿಬ್ಬರ ನಡುವೆ ಬರುವ ಹೆಣ್ಣಿನ ಪಾತ್ರ ನನ್ನದು ಎಂದು ತಿಳಿಸಿದರು.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಸೂರ್ಯ ಮುಂತಾದವರು “ಸಂತೋಷ ಸಂಗೀತ” ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin