Rachita Ram-Srinagar Kitty starrer 'Sanju Weds Geetha 2' to release on Friday

ರಚಿತಾ ರಾಮ್- ಶ್ರೀನಗರ ಕಿಟ್ಟಿ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಶುಕ್ರವಾರ ತೆರೆಗೆ - CineNewsKannada.com

ರಚಿತಾ ರಾಮ್- ಶ್ರೀನಗರ ಕಿಟ್ಟಿ ಅಭಿನಯದ ‘ಸಂಜು ವೆಡ್ಸ್ ಗೀತಾ 2’ ಶುಕ್ರವಾರ ತೆರೆಗೆ

ನವಿರಾದ ಪ್ರೇಮಕಥೆಯ ಜತೆಗೆ ಶಿಡ್ಲಘಟ್ಟದ ರೇಷ್ಮೆ ಬೆಳೆಗಾರನೊಬ್ಬ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಾಗರದಾಚೆಯ ಸ್ವಿಟ್ಜರ್ ಲ್ಯಾಂಡ್ ವರೆಗೆ ಹೋಗುವ ಕಂಟೆಂಟ್ ಇಟ್ಟುಕೊಂಡು ನಾಗಶೇಖರ್ ಅವರು ನಿರ್ದೇಶಿಸಿರುವ ಚಿತ್ರ ಸಂಜು ವೆಡ್ಸ್ ಗೀತಾ-2 ಜ.17ರ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶ್ರೀನಗರ ಕಿಟ್ಟಿ ಅವರ ಜತೆ ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಟೀಸರ್ ಸೋಮವಸರ ಸಂಜೆ ರಿಲೀಸಾಯಿತು. ಸಾಹಿತಿ, ಸಂಗೀತ ನಿರ್ದೇಶಕ ಡಾ.ವಿ.ನಾಗೇಂದ್ರಪ್ರಸಾದ್ ಈ ಟೀಸರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ

ಡಾ.ನಾಗೇಂದ್ರ ಪ್ರಸಾದ್ ಮಾತನಾಡಿ ನಾನು ಕೂಡ ನೇಕಾರರ ಕುಟುಂಬದಿಂದ ಬಂದವನು. ಕಷ್ಟ ಏನೆಂಬುದು ನನಗೆ ಗೊತ್ತು. ಈ ಚಿತ್ರದಲ್ಲಿ ಕೂಡ ನೇಕಾರನೊಬ್ಬನ ಸಾಧನೆಯ ಕಥೆಯಿದೆ. ಸಿನಿಮಾದ ಹೈಲೈಟೇ ವಿಶ್ಯುಯೆಲ್ ಟ್ರೀಟ್ ಮೆಂಟ್. ಸತ್ಯ ಹೆಗ್ಡೆ ಅದ್ಭುತವಾದ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಹಿಂದಿನ ಸಂಜು ಗೀತಾ ಚಿತ್ರಕ್ಕೆ ನಾನು ಹಾಡು ಬರೆದಿದ್ದೆ. ಈಗ ಕವಿರಾಜ್ ಬರೆದಿದ್ದಾರೆ. ಒಳ್ಳೇದಾಗಲಿ ಎಂದು ಹೇಳಿದರು.

ಚಿತ್ರದ ವಿತರಕ ಗೋಕುಲ್ ರಾಜ್ ಮಾತನಾಡಿ ಸಿನಿಮಾದ ಮೇಕಿಂಗ್, ಕಂಟೆಂಟ್ ತುಂಬಾ ಚೆನ್ನಾಗಿದೆ. ಒಂದುವಾರ ಮುಂದಕ್ಕೆ ಹೋಗಿದ್ದು ಅನುಕೂಲವೇ ಆಗಿದೆ. 60 ರಿಂದ 70 ಸಿಂಗಲ್ ಸ್ಕ್ರೀನ್, 40 ರಿಂದ 50 ಮಲ್ಟಿಪ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಮಾತನಾಡಿ ಇಂದು ನನ್ನ ಗುರುಗಳಾದ ನಾಗೇಂದ್ರ ಪ್ರಸಾದ್ ಅವರು ಬಂದಿರುವುದು ಒಳ್ಳೆಯ ಸೂಚನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಶ್ರೇಯಾ ಘೋಷಾಲ್ ಕೈಲಿ ಹಾಡಿಸಬೇಕೆಂದಿದ್ದ ಸಾಂಗನ್ನು ಸಂಗೀತಾ ತುಂಬಾ ಚೆನ್ನಾಗಿಯೇ ಹಾಡಿದ್ದಾರೆ ಎಂದು ಹೇಳಿದರು.

ನಿರ್ದೇಶಕ ನಾಗಶೇಖರ್ ಮಾತನಾಡಿ ಈವಾರ ಕರ್ನಾಟಕದಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶಗಳಲ್ಲಿ ಮುಂದಿನವಾರ ರಿಲೀಸ್ ಮಾಡ್ತಿದ್ದೇವೆ. ಶ್ರೇಯಾ ಕೈಲಿ ಹಾಡಿಸಲು ನಾನೂ ಟ್ರೈ ಮಾಡಿದೆ. ಅವರಿಗೆ ಇಂಟರೆಸ್ಟ್ ಇಲ್ಲ ಅಂತ ಗೊತ್ತಾದಾಗ, ಟ್ರ್ಯಾಕ್ ಹಾಡಿದ ಸಂಗೀತಾರ ಧ್ವನಿಯನ್ನೇ ಫೈನಲ್ ಮಾಡಿದೆವು.ಆಗೋದೆಲ್ಲ ಒಳ್ಳೆದಕ್ಕೆ ಅಂತಾರೆಲ್ಲ ಹಾಗೆ ಈವಾರ ನಮಗೆ ಇನ್ನೂ ಒಳ್ಳೊಳ್ಳೆ ಥೇಟರ್ ಸಿಗ್ತಾ ಇದೆ ಎಂದರು.
ನಿರ್ಮಾಪಕ ಚಲವಾದಿ ಕುಮಾರ್ ಮಾತನಾಡಿ ಒಳ್ಳೇ ಸಿನಿಮಾ ಮಾಡಿದ್ದೇವೆ. ಎಲ್ಲರೂ ಸಪೆÇೀರ್ಟ್ ಮಾಡಿ ಎಂದು ಕೇಳಿಕೊಂಡರು.

ಶ್ರೀನಗರ ಕಿಟ್ಟಿ ಮಾತನಾಡಿ ಈ ಮುಂಚೆ ಟ್ರೈಲರ್ ಮಾಡುವ ಪ್ಲಾನ್ ಇದ್ದಿಲ್ಲ. ಒಂದು ನಿಮಿಷದ ಟ್ರೈಲರ್ ಕಟ್ ಮಾಡಿದ್ದೇವೆ. ನಾಗೇಂದ್ರ ಪ್ರಸಾದ್ ಅವರು ಲಾಂಚ್ ಮಾಡಿದ್ದಾರೆ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin