ರಾಘವೇಂದ್ರ ಟೀಸರ್, ಧೀರನ್ ಬಿಡುಗಡೆ
ಈ ಹಿಂದೆ ಹುಲಿದುರ್ಗ ಎಂಬ ಚಿತ್ರ ಮಾಡಿದ್ದ ನಾಯಕ ಸುಪ್ರೀತ್ ಹಾಗೂ ನಿರ್ದೇಶಕ ವಿಕ್ರಮ್ ಯಶೋಧರ ಜೋಡಿ ಈಗ ಮತ್ತೊಂದು ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರಾಘವೇಂದ್ರ ಹೆಸರಿನ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನೆರವೇರಿತು. ನಟ ಧೀರನ್ ರಾಮ್ ಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಸುಪ್ರೀತ್ ಈ ಚಿತ್ರದ ನಾಯಕನಾಗಿದ್ದು, ಪ್ರತೀಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಟೀಸರ್ ಪ್ರದರ್ಶನದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಕ್ರಮ್ ಇದು ನಾವಿಬ್ಬರೂ ಸೇರಿ ಮಾಡಿರೋ 2ನೇ ಚಿತ್ರ. ಇದೊಂದು ಮೆಸೇಜ್ ಒರಿಯಂಟೆಡ್ ಚಿತ್ರ ಅನ್ನಬಹುದು.
ಒಬ್ಬ ಬಾರ್ ಸಪ್ಲೈಯರ್ ಹಾಗೂ ಅನಕ್ಷರಸ್ಥ ಹುಡುಗಿ ಇಬ್ಬರೂ ಸೇರಿಕೊಂಡು ನಮಗೆ ಬಾರ್ ಬೇಡ, ವಿದ್ಯಾಲಯ ಬೇಕು, ಮದ್ಯಾಲಯ ಬೇಕು ಎಂದು ಹೋರಾಡುತ್ತಾರೆ. ನಮ್ಮೂರಿಗೆ ಏನೇನು ಬೇಕೋ ಅದನ್ನು ನಾವು ದೊಡ್ಡವರೇ ಸೇರಿಕೊಂಡು ಡಿಸೈಡ್ ಮಾಡಿಕೊಂಡರೆ, ಯಾವ ರಾಜಕೀಯ ವ್ಯಕ್ತಿಗಳೂ ಬೇಕಾಗಲ್ಲ. ಅವರಿಬ್ಬರ ಈ ನಿರ್ಧಾರಕ್ಕೆ ಮೊದಲು ಹಳ್ಳಿಯವರಿಂದ ವಿರೋಧವಿದ್ದರೂ, ನಂತರ ಅವರ ಉದ್ದೇಶ ಅರಿತು ಸಹಕಾರ ನೀಡುತ್ತಾರೆ. ಅರಕೆರೆ , ಮಂಡ್ರ), ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದೇವೆ. ಸದ್ಯ ಚಿತ್ರದ ಡಿಐ, ರೀರೆಕಾರ್ಡಿಂಗ್ ನಡೆಯುತ್ತಿದ್ದು, ಫೆಬ್ರವರಿ ಮೊದಲವಾರ ರಿಲೀಸ್ ಮಾಡೋ ಯೋಜನೆಯಿದೆ ಎಂದರು.
ನಂತರ ನಾಯಕ ಸುಪ್ರೀತ್ ಮಾತನಾಡಿ, ನನಗೆ ಮೊದಲಿಂದಲೂ ಸಿನಿಮಾ ಹುಚ್ಚು, ನನ್ನತಂದೆ ನನ್ನಾಸೆಗೆ ಬೆನ್ನೆಲುಬಾಗಿ ನಿಂತರು. ಇದು ನನ್ನ ಎರಡನೇ ಚಿತ್ರ. ಹುಲಿದುರ್ಗ ನಂತರ ಒಂದೊಳ್ಳೇ ಸಿನಿಮಾ ಮಾಡಿದ್ದೇವೆ. ಚಿತ್ರದ 80% ಕಮರ್ಷಿಯಲ್ ಆಗಿದ್ದು, ಉಳಿದ ೨೦% ಮಾತ್ರ ಮೆಸೇಜಿದೆ. ನನಗೆ ಶುಭ ಹಾರೈಸಲು ಯುಎಸ್ ಎ ನಿಂದ ಶೋಭಾ ಅವರು ಬಂದಿದ್ದಾರೆ ಎಂದು ಹೇಳಿದರು.
ನಾಯಕಿ ಪ್ರತೀಕ್ಷಾ ಮಾತನಾಡಿ ಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸಮಾಡಿದ್ದು, ಮೊದಲಬಾರಿಗೆ ತೆರೆಮೇಲೆ ಬರುತ್ತಿದ್ದೇನೆ. ವಾಣಿ ಚಿಕ್ಕವಯಸಿನಲ್ಲೇ ತಾಯಿಯನ್ನು ಕಳೆದುಕೊಂಡವಳು. ತನ್ನ ತಂದೆಗೆ ಹೇಗೆ ಸಪೋರ್ಟಿವ್ ಆಗಿ ನಿಲ್ಲುತ್ತಾಳೆ ಎನ್ನುವುದು ನನ್ನ ಪಾತ್ರದ ಹೈಲೈಟ್ ಎಂದರು.
ಚಿತ್ರದಲ್ಲಿ 4 ಹಾಡುಗಳಿದ್ದು, ಅಲೆಕ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎನ್.ಉಮೇಶ್, ಕ್ಯಾಮೆರಾ ಹಿಡಿದಿದ್ದಾರೆ. ದೀಪಕ್ ಸಿ.ಎಸ್. ಸಂಕಲನ ಮಾಡಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ೨ ಹಾಡು, ನಾಗೇಂದ್ರಪ್ರಸಾದ್, ಸಹನಾಮೂರ್ತಿ ತಲಾ ಒಂದೊಂದು ಹಾಡುಗಳನ್ನು ಬರೆದಿದ್ದಾರೆ.