Ragini-Rajavardhan starrer ``Java'' begins triple riding
ರಾಗಿಣಿ- ರಾಜವರ್ಧನ್ ನಟನೆಯ “ಜಾವಾ” ತ್ರಿಬ್ಬಲ್ ರೈಡಿಂಗ್ ಆರಂಭ“

ನಟ ರಾಜವರ್ಧನ್ ಮತ್ತು ರಾಗಿಣಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ “ ಜಾವಾ” ಚಿತ್ರಕ್ಕೆ ಭರ್ಜರಿ ಫೋಟೋ ಶೂಟ್ ಮಾಡುವ ಮೂಲಕ ತ್ರಿಬ್ಬಲ್ ರೈಡಿಂಗ್ ಆರಂಭಿಸಲಾಗಿದೆ

“ಜಾವಾ’ ಚಿತ್ರದ ಕೆಲಸವನ್ನು ನಿರ್ದೇಶಕ ದೇವಾ ಚಕ್ರವರ್ತಿ ಆರಂಭಿಸಿದ್ಧಾರೆ. ಮ್ಯಾಸೀವ್ ಸ್ಟಾರ್ ರಾಜವರ್ಧನ್ ಮತ್ತು ತುಪ್ಪದ ಬೆಡಗಿ ರಾಗಿಣಿ ಎರಡನೇ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.
ಈ ಮುಂಚೆ ನಟ ರಾಜವರ್ಧನ್ ನಟನೆಯ “ಗಜರಾಮ” ಚಿತ್ರದಲ್ಲಿ ನಟಿ ರಾಗಿಣಿ ಸಾರಾಯಿ ಶೇಷಮ್ಮನಾಗಿ ಕಾಣಿಸಿಕೊಳ್ಳುವ ಮೂಲಕ ಕಿಚ್ಚು ಹಚ್ಚಿದ್ದರು. ಹಾಡಿನಲ್ಲಿ ಇಬ್ಬರೂ ಜೋಡಿ ಹಾಕಿದ ಹೆಜ್ಜೆ ಇದೀಗ ಜಾವಾ ತ್ರಿಬ್ಬಲ್ ರೈಡಿಂಗ್ ತನಕ ಕರೆತಂದಿದೆ.
ಚಿತ್ರಕ್ಕೆ ಬಹುಭಾಷ ಕಲಾವಿದರ ಆಯ್ಕೆ ಆಗಿದೆ. ಇನ್ನೇನು ಚಿತ್ರೀಕರಣ ಆರಂಭವಾಗಲಿದ್ದು ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬ ಮೇ 24 ರಂದು ಇರುವ ಹಿನ್ನೆಲೆಯಲ್ಲಿ ಚಿತ್ರತಂಡ ವಿಶೇಷ ಉಡುಗೊರೆ ನೀಡಲು ಸಜ್ಜಾಗಿದೆ