Raj B Shetty's Lighter Buddha Films sets record for Malayalam movie distribution
ಮಲಯಾಳಂ ಸಿನಿಮಾ ವಿತರಣೆಯಲ್ಲಿ ದಾಖಲೆಯತ್ತ ರಾಜ್ ಬಿ ಶೆಟ್ಟಿ ಲೈಟರ್ ಬುದ್ದ ಫಿಲಂಸ್
ಮಲಯಾಳಂ ‘ ಲೋಕಾ ‘ ಸಿನಿಮಾ ಕರ್ನಾಟಕದಲ್ಲಿ ವಿತರಿಸಿ ಬಹುದೊಡ್ಡ ಯಶಸ್ಸುಗಳಿಸಿದ ಲೈಟರ್ ಬುದ್ದ ಫಿಲಂಸ್ ಈವಾರ ಮತ್ತೊಂದು ‘ಇಕೋ’ ಎನ್ನುವ ಮತ್ತೊಂದು ವರ್ಲ್ಡ್ ಕ್ಲಾಸ್ ಮಲಯಾಳಂ ಸಿನಿಮಾವನ್ನ ಬಿಡುಗಡೆ ಮಾಡಿದೆ.

ಅತ್ಯತ್ತಮ ವಿಮರ್ಶೆಗಳನ್ನ ಗಳಿಸಿರುವ ಇಕೋ ಲೋಕಾ ತರಹನೇ ದೊಡ್ಡ ಯಶಸ್ಸಿನತ್ತ ದಾಪುಗಾಲಿಡ್ತಿದೆ. ವಾರಾಂತ್ಯದಲ್ಲಿ ಕರ್ನಾಟಕದಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ.
ಈ ಮೂಲಕ ಲೈಟರ್ ಬುದ್ದ ಫಿಲಂಸ್ ಈ ವರ್ಷ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಸು ಫ್ರಮ್ ಸೋ ನಿರ್ಮಿಸಿದ ಉದ್ಯಮದಲ್ಲಿ ದಾಖಲೆಯ ಯಶಸ್ಸು ಗಳಿಸಿ, ಲೋಕಾ ವಿತರಿಸಿ ದೊಡ್ಡ ಯಶಸ್ಸು ಕಂಡು, ಈಗ ವರ್ಷಾಂತ್ಯದಲ್ಲಿ ‘ಇಕೋ’ ಚಿತ್ರದೊಂದಿಗೆ 2025ರಲ್ಲಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟ ಶ್ರೇಯಕ್ಕೆ ಪಾತ್ರವಾಗುತ್ತಿದೆ.


