ಗಂಧದ ಗುಡಿಗೆ ನಟಿ ಮಂಜುಭಾಷಿಣಿ ಆಗಮನ: ಕಾರಣ ಏನು ಗೊತ್ತಾ
ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ನಟಿ ಮಂಜುಭಾಷಿಣಿ ಇದೀಗ ನೇರವಾಗಿ ಗಂದಧಗುಡಿಗೆ ಪ್ರವೇಶ ಪಡೆದಿದ್ದಾರೆ.ಅದು ಯಾಕೆ ಎನ್ನುವುದು ಕುತೂಹಲ ಕೆರಳಿಸಿದೆ.
ಅದ್ಭುತ ಕಥಾಹಂದರ, ಆಕರ್ಷಕ ತಾರಾಗಣದಿಂದ ಈಗಾಗಲೇ ಮನೆಮಾತಾಗಿರೊ ಕಲರ್ಸ್ ಕನ್ನಡದ ಧಾರಾವಾಹಿ `ಗಂಧದ ಗುಡಿ’. ಪ್ರತಿ ರಾತ್ರಿ 8 ಕ್ಕೆ ಪ್ರಸಾರವಾಗುತ್ತಿದ್ದು ವಿಶೇಷ ಸಂಚಿಕೆ ಕುತೂಹಲ ಮೂಡಿಸಿದೆ
ಗಂಧದ ಗುಡಿ’ ಮನೆಗೆ ನಟಿ ಮಂಜು ಭಾಷಿಣಿ ಬಂದಿದ್ದಾರೆ, ಅವರು ಬರಲು ಕಾರಣ ಏನು ಎನ್ನುವ ವಿಷಯವನ್ನು ತಿಳಿದುಕೊಳ್ಳುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಿದೆ. ಕಥೆಯಲ್ಲಿ ಹೊಸ ವಿಷಯ ಹೇಳೋಕೆ ಬರಲಿದ್ದಾರೆಯೇ ನಟಿಯಾಗಿ ಹೊಸತೇನೋ ಕಾಣಿಕೆಯಾಗುತ್ತಾರೆ ಅಥವಾ ಹರಿಕಥೆಯೊಂದರ ಕಥೆಗಳನ್ನೇ ಹಂಚಿಕೊಳ್ಳಲಿದ್ದಾರೆಯೇ ಎನ್ನುವ ವಿಷಯಕ್ಕೆ ನಿಖರ ಉತ್ತರಕ್ಕಾಗಿ ಪ್ರೇಕ್ಷಕರು ಇಂದಿನ ಗಂಧದ ಗುಡಿ ಸಂಚಿಕೆಗೆ ಕಾಯಬೇಕಾಗುತ್ತದೆ.
ಬಿಗ್ ಬಾಸ್’ ನಂತರ ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯಲ್ಲಿ ಕಾಣಿಸಿ ಕೊಳ್ಳುತ್ತಿರೋದು ವಿಶೇಷ.
ಅವರನ್ನು ಯಾವ ಪಾತ್ರದಲ್ಲಿ ನೋಡಲಿದ್ದೀರಿ ಎನ್ನೋದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್ ಆಗಿದೆ

