Music world: Manchu Manoj launches 'Mohan Raga Sangeet'

ಸಂಗೀತ ಲೋಕದತ್ತ ಮಂಚು ಮನೋಜ್ : ‘ಮೋಹನ ರಾಗ ಸಂಗೀತ’ ಆರಂಭ - CineNewsKannada.com

ಸಂಗೀತ ಲೋಕದತ್ತ ಮಂಚು ಮನೋಜ್ : ‘ಮೋಹನ ರಾಗ ಸಂಗೀತ’ ಆರಂಭ

ತೆಲುಗು ನಟ ಮಂಚು ಮನೋಜ್ ಮಿರಾಯ್ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಸೂಪರ್ ಹೀರೋಗಳ ಎದುರು ಸೂಪರ್ ವಿಲನ್ ರೀತಿನೇ ಮಂಚು ಮನೋಜ್ ಅಬ್ಬರಿಸಿದ್ದರು. ಈಗ ಮಂಚು ಮನೋಜ್ ಹೊಸ ಉದ್ಯಮ ಆರಂಭಿಸಿದ್ದು ಹೊಸ ಸಂಗೀತ ಕಂಪನಿ ಆರಂಭಿಸಿದ್ದಾರೆ. ಅದಕ್ಕೆ “ಮೋಹನ ರಾಗ ಸಂಗೀತ” ಎಂದು ಹೆಸರಿಡಲಾಗಿದೆ

ಕೋವಿಡ್ ಸಮಯದಲ್ಲಿ “ಅಂಥಾ ಬಾಗುಂತಮ್ರ” ಗೀತೆಗೆ ಧ್ವನಿಯಾಗಿ ನಟಿಸಿದ್ದರು. ಮಿಸ್ಟರ್ ನೂಕಯ್ಯ ಚಿತ್ರಕ್ಕೆ “ಪಿಸ್ತ ಪಿಸ್ತಾ” ಎಂಬ ಹಾಡಿಗೆ ಸಾಹಿತ್ಯ ಬರೆಯುತ್ತಾರೆ. ನೇನು ಮೀಕು ತೇಲುಸಾ ಸಿನಿಮಾಗೆ “ಯೆನ್ನೋ ಯೆನ್ನೋ” ಮತ್ತು ಮಿಸ್ಟರ್ ನೂಕಯ್ಯ ಚಿತ್ರಕ್ಕೆ “ಪ್ರಣಾಮ್ ಪೆÇೀಯೆ ಬಾಧ” ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಮನೋಜ್ ತಮ್ಮ ವೃತ್ತಿ ಜೀವನದ ಆರಂಭದಿಂದಲೂ ತಂದೆ ಡಾ. ಮಂಚು ಮೋಹನ್ ಬಾಬು, ಸಹೋದರ ಮಂಚು ವಿಷ್ಣು ಮತ್ತು ಸಹೋದರಿ ಲಕ್ಷ್ಮಿ ಮಂಚು ಅವರ ಹಲವಾರು ಚಿತ್ರಗಳಲ್ಲಿ ಸಂಗೀತ ಮತ್ತು ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಹಲವಾರು ಹಾಡುಗಳಲ್ಲಿ ರಾಪ್ ಮಾಡಿದ್ದಾರೆ. ಮಂಚು ಮನೋಜ್, ಹಾಲಿವುಡ್ ಚಿತ್ರ ‘ಬಾಸ್ಮತಿ ಬ್ಲೂಸ್’ ಗೆ ಸಂಗೀತ ಸಂಯೋಜಿಸಲು ಸಂಯೋಜಕ ಅಚು ರಾಜಮಣಿ ಅವರೊಂದಿಗೆ ಸಹಕರಿಸಿದ್ಧಾರೆ

“ಮೋಹನ ರಾಗ ಸಂಗೀತ” ಕಂಪನಿಯೊಂದಿಗೆ, ಮಂಚು ಮನೋಜ್ ಪರಂಪರೆ, ನಾವೀನ್ಯತೆ ಮತ್ತು ಹೃತ್ಪೂರ್ವಕ ಭಾವನೆಗಳನ್ನು ಸಂಯೋಜಿಸುವ ಹೊಸ ಸೃಜನಶೀಲ ಅಧ್ಯಾಯ ಪ್ರಾರಂಭಿಸುತ್ತಾರೆ. ಉದಯೋನ್ಮುಖ ಪ್ರತಿಭೆಗಳನ್ನು ಬೆಂಬಲಿಸುವುದು, ಹೊಸ ಮತ್ತು ಪ್ರಾಯೋಗಿಕ ಧ್ವನಿಗಳನ್ನು ಪೆÇ್ರೀತ್ಸಾಹಿಸುವುದು ಮತ್ತು ಭಾರತೀಯ ಮತ್ತು ಅಂತರರಾಷ್ಟ್ರೀಯ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.

ತೆಲುಗು ಸಂಗೀತವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವತ್ತ ಒಂದು ಪ್ರಮುಖ ಹೆಜ್ಜೆಯನ್ನು ಗುರುತಿಸುವ “ಮೋಹನ ರಾಗ ಸಂಗೀತ”ದೊಂದಿಗಿನ ಅತಿದೊಡ್ಡ ಅಂತರರಾಷ್ಟ್ರೀಯ ಸಹಯೋಗದ ಕುರಿತು ಶೀಘ್ರದಲ್ಲೇ ಹೆಚ್ಚಿನ ವಿವರ ನೀಡಲಿದ್ದಾರೆ ಮಂಚು ಮನೋಜ್.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin