ಪರಭಾಷೆಯತ್ತೆ ಮುಖ ಮಾಡಿದ ನಟ ರಾಜವರ್ಧನ್
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಾಜವರ್ಧನ್‍ಗೆ ಕನ್ನಡದಲ್ಲಿ ಸಿಕ್ಕ ಅವಕಾಶಗಳು ಯಶಸ್ಸು ಸಿಗುತ್ತಿಲ್ಲ,ಒಳ್ಳೆಯ ಅವಕಾಶ ಕೈ ಹಿಡಿಯುತ್ತಿಲ್ಲ.. ಅದೃಷ್ಠ ಹರಸಲು ಪರಭಾಷೆಯತ್ತ ಮುಖ ಮಾಡಿದ್ದಾರೆ. ಹಾಗಾದರೆ ಇನ್ನು ಮುಂದೆ ಸ್ಯಾಂಡಲ್ ವುಡ್ ಚಿತ್ರಗಳಿಗೆ ವಿದಾಯ ಹೇಳ್ತಾರೆ. ಇದಕ್ಕೆ ಕಾಲವೇ ಉತ್ತರ ನೀಡಬೇಕು.

ಆರಡಿ ಹೈಟು… ಸ್ಮಾರ್ಟು ಲುಕ್ಕು.. ಗತ್ತು ಗೈರತ್ತು.. ಎಲ್ಲಾ ಇದ್ರೂ ಆಯ್ಕೆಯ ವಿಚಾರಕ್ಕೂ… ಹಣೆಬರಹವೂ.. ಗೊತ್ತಿಲ್ಲ… ಸತತ ಪ್ರಯತ್ನಗಳಾದ್ರೂ ಫಲಿತಾಂಶ ನಿರೀಕ್ಷೆ ಮುಟ್ಟುತ್ತಿಲ್ಲ..
ಹಾಗಂತ ಸುಮ್ನೆ ಕೂತ್ರೆ ಆಗುತ್ತಾ.. ಚೂರೋ ಪಾರೋ ಗುರುತಿಸುವಿಕೆ ಸಿಕ್ಕಿರೋ ಅಪ್ಪಟ ಕನ್ನಡದ ಈ ಪ್ರತಭಾನ್ವಿತ ನಟನಿಗೆ ಈಗ ತೆಲುಗು, ತಮಿಳು ಮಂದಿ ಸೈಲೆಂಟಾಗಿ ಗಾಳ ಹಾಕಿದ್ದಾರೆ..
ಮಾಸ್ ಕ್ಲಾಸ್ ಹಿಸ್ಟಾರಿಕಲ್ ಎಲ್ಲಾ ಜಾನರ್ ಗಳನ್ನ ಮುಟ್ಟಿದ್ರೂ ರಾಜವರ್ಧನ್ ಅನ್ನೋ ಈ ಅಜಾನುಬಾಹು ನಟನಿಗೆ , ನಿರೀಕ್ಷಿಸಿದ ಫಲಿತಾಂಶ ಸಿಕ್ತಿಲ್ಲ.. ಹೀಗಿರೋವಾಗ್ಲೇ ಅಕ್ಕ ಪಕ್ಕದ ಇಂಡಸ್ಟ್ರಿ ಯವ್ರು ಕಣ್ಣಾಕಿದ್ದಾರೆ. ಚಹರೆ ಪ್ರತಿಭೆ ಎರಡೂ ಹೊತ್ತ ರಾಜವರ್ಧನ್ ಗೆ ದೊಡ್ಡ ನಿರ್ದೇಶಕರಿಂದ, ದೊಡ್ಡ ನಿರ್ಮಾಣ ಸಂಸ್ಥೆಯಿಂದ ಈಗ ಅವಕಾಶಗಳು ಹರಸಿ ಬರ್ತಿವೆ…

ಮೂಲಗಳ ಪ್ರಕಾರ ರಾಜವರ್ಧನ್ ಇಷ್ಟರಲ್ಲೇ ತೆಲುಗು ತಮಿಳಿನಲ್ಲಿ ಮೂಡಿ ಬರಲಿರೋ ಒಂದು ದೊಡ್ಡ ಪ್ರಾಜೆಕ್ಟಲ್ಲಿ ಕಾಣಿಸಿಕೊಳ್ತಿದ್ದಾರಂತೆ..ನೆಗೆಟೀವ್ ರೋಲ್ ಅಂತ ಸಹ ಹೇಳಲಾಗ್ತಿದೆ.ಅದಕ್ಕಾಗಿ ರಾಜವರ್ಧನ್ ದೇಹವನ್ನ ಹುರಿಗೊಳಿಸಿಕೊಳ್ತಿದ್ದಾರಂತೆ.
ಈಗಾಗಲೇ ಚೆನೈ ಹೈದ್ರಾಬಾದ್ ಅಂತ ಓಡಾಡುತ್ತಿರುವ ನಟ ರಾಜವರ್ಧನ್ ಸ್ಯಾಂಡಲ್ ವುಡ್ ಗೆ ಗುಡ್ ಬೈ ಹೇಳಿದರೂ ಅಚ್ಚರಿ ಪಡಬೇಕಾಗಿಲ್ಲ ಎನ್ನಲಾಗುತ್ತಿದೆ.

