ಮಾರ್ಚ್ 7 ರಿಂದ ಮಂಗಳೂರಿನಲ್ಲಿ ಇಂಡಿಯಾ ಪ್ಯಾಡಲ್ ಫೆಸ್ಟಿವಲ್

ಕ್ರಿಶ್ಚಿಯನ್ ಆಂಡರ್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಮತ್ತು ಡಿಫೆಂಡಿಂಗ್ ವುಮೆನ್ಸ್ ಚಾಂಪಿಯನ್ ಆಗಿರುವ ಎಸ್ಪೆರಾಂಜ ಬರ್ರೆರಸ್ ಭಾಗಿಯಾಗಲಿದ್ದಾರೆ.
ಭಾರತವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಚಾಂಪಿಯನ್ ಆಗಿರುವ ಸೇಕರ್ ಪಚ್ಚೈ ವಹಿಸಿಕೊಂಡಿದ್ದಾರೆ. ಇಂಡಿಯಾ ಪ್ಯಾಡಲ್ ಫೆಸ್ಟಿವಲ್‍ನ ಎರಡನೇ ಆವೃತ್ತಿಯು ಮೂರು ದಿನಗಳ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರ ಸರ್ಫ್ ಕ್ಲಬ್, ಸಹಯೋಗದೊಂದಿಗೆ ಆಯೋಜಿಸಿದೆ.
ಇನ್‍ಕ್ರೆಡಿಬಲ್ ಇಂಡಿಯಾ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಸ್ತುತಪಡಿಸಿರುವ ಇವೆಂಟ್ ಅಸೋಸಿಯೇಷನ್ ಆಫ್ ಪ್ಯಾಡಲ್‍ಸರ್ಫ್ ಪ್ರೊಫೆಷನಲ್ಸ್ ವಲ್ರ್ಡ್ ಟೂರ್, ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್‍ಗಾಗಿ ಅಧಿಕೃತ ವಿಶ್ವ ಚಾಂಪಿಯನ್‍ಶಿಪ್ ಟೂರ್‍ನಿಂದ ಮಂಜೂರು ಮಾಡಲ್ಪಟ್ಟಿದೆ. ಈ ಇವೆಂಟ್ ನಲ್ಲಿ SUP ರೇಸಿಂಗ್, ಲೈವ್ ಸಂಗೀತ ಪ್ರದರ್ಶನಗಳು ಮತ್ತು ರೋಮಾಂಚಕ ಸಾಂಸ್ಕೃತಿಕ ಉತ್ಸವಗಳು ಕೂಡ ಇರಲಿದೆ.
ಮಹಿಳಾ ವಿಭಾಗದಲ್ಲಿ ನಾಲ್ಕು ಬಾರಿ ಅಂತರರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಷನ್ ವಿಶ್ವ ಚಾಂಪಿಯನ್ ಆಗಿರುವ ಸ್ಪೇನ್‍ನ ಹಾಲಿ ಚಾಂಪಿಯನ್ ಎಸ್ಪೆರಾನ್ಜಾ ಬ್ಯಾರೆರಸ್ ಈ ಇವೆಂಟ್ ಗೆ ಹಿಂತಿರುಗಲಿದ್ದಾರೆ. ದಕ್ಷಿಣ ಆಫ್ರಿಕಾದ ಉದಯೋನ್ಮುಖ ತಾರೆ ಚಿಯಾರಾ ವೋಸ್ರ್ಟರ್ ಮತ್ತು ಕೊರಿಯಾದ SUP ಚಾಂಪಿಯನ್ ಲಿಮ್ ಸುಜಿಯೋಂಗ್ ಕೂಡ ಭಾಗಿಯಾಗಲಿದ್ದಾರೆ.
ಪುರುಷರ ವಿಭಾಗದಲ್ಲಿ ಸ್ಪೇನ್‍ನ ಆಂಟೋನಿಯೊ ಮೊರಿಲ್ಲೊ ಮತ್ತು ಡೆನ್ಮಾರ್ಕ್‍ನ ಕ್ರಿಶ್ಚಿಯನ್ ಆಂಡರ್ಸನ್ ಅವರಂತಹ ಜಾಗತಿಕ ಅಥ್ಲೀಟ್‍ಗಳು ಪಾಲ್ಗೊಳ್ಳಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ, ವಿಲ್ ಕೀಟ್ಲಿ ಕರಾವಳಿಯ ಸಸಿಹಿತ್ಲು ಬೀಚ್‍ನ ನೀರಿನಲ್ಲಿ ತನ್ನ ಛಾಪು ಮೂಡಿಸಲಿದ್ದಾರೆ