'Raktaksha' mass teaser released: Pramod-Rohit debut

‘ರಕ್ತಾಕ್ಷ’ ಮಾಸ್ ಟೀಸರ್ ರಿಲೀಸ್ :ಪ್ರಮೋದ್-ರೋಹಿತ್ ಚೊಚ್ಚಲ ಪ್ರಯತ್ನ - CineNewsKannada.com

‘ರಕ್ತಾಕ್ಷ’ ಮಾಸ್ ಟೀಸರ್ ರಿಲೀಸ್ :ಪ್ರಮೋದ್-ರೋಹಿತ್ ಚೊಚ್ಚಲ ಪ್ರಯತ್ನ

ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ರಕ್ತಾಕ್ಷ ಸಿನಿಮಾದ ಆಕ್ಷನ್ ಟೀಸರ್ ರಾಯಚೂರಿನ ಲಿಂಗಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಲೀಸ್ ಆಗಿದೆ. ಪಂಚಿಂಗ್ ಡೈಲಾಗ್ ಹೊಡೆಯುತ್ತಾ ನಾಯಕ ರೋಹಿತ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಸಿಕ್ಸ್ ಪ್ಯಾಕ್ ಲುಕ್ ನಲ್ಲಿ ರಗಡ್ ಆಗಿ ಅಬ್ಬರಿಸಿರುವ ಅವರು ಪ್ರಮೋದ್ ಶೆಟ್ಟಿ ಎದುರು ತೊಡೆ ತಟ್ಟಿ ಅಬ್ಬರಿಸಿದ್ದಾರೆ‌. ಕಿಲ್ಲಿಂಗ್ ಲುಕ್ ಮೂಲಕವೇ ಗಮನಸೆಳೆದಿರುವ ರೋಹಿತ್ ಕನ್ನಡ ಚಿತ್ರರಂಗದ ಭರವಸೆ ನಾಯಕ ಎನಿಸಿಕೊಂಡಿದ್ದಾರೆ. ಟೀಸರ್ ಪ್ರಾಮಿಸಿಂಗ್ ಎನಿಸಿದ್ದು, ಧೀರೇಂದ್ರ ಡಾಸ್ ಸಂಗೀತ ಸಖತ್ ಕಿಕ್ ಕೊಡುತ್ತಿದೆ.

ಮಾಡೆಲಿಂಗ್ ಲೋಕದಲ್ಲಿ ಛಾಪು ಮೂಡಿಸಿರುವ ರೋಹಿತ್ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಕ್ತಾಕ್ಷ ಸಿನಿಮಾವನ್ನು ವಾಸುದೇವ ಎಸ್.ಎನ್ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ವಾಸುದೇವ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾವಿದು. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ ‘ರಕ್ತಾಕ್ಷ’ ಸಿನಿಮಾಗೆ ದುಡಿದಿದ್ದಾರೆ.

ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದ್ರ ಡಾಸ್ ಸಂಗೀತ ನೀಡಿದ್ದಾರೆ. ಕೆಜಿಎಫ್ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಪ್ರಭು, ವಿಶ್ವ, ಭದ್ರಿ ನಾರಾಯಣ, ಗುರುದೇವ ನಾಗರಾಜ, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದಶೆಟ್ಟಿ ಅಭಿನಯಿಸಿದ್ದಾರೆ.
ಈಗಾಗಲೇ ವಸಿಷ್ಠ ಸಿಂಹ ಅವರು ಹಾಡಿರುವ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಟೀಸರ್ ಮೂಲಕ ರಕ್ತಾಕ್ಷ ಸಿನಿಮಾ ನಿರೀಕ್ಷೆ ದುಪ್ಪಟ್ಟು ಮಾಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin