ಡಿಂಪಲ್ ಕ್ವೀನ್ “ರಚಿತಾ ರಾಮ್” ಬಣ್ಣದ ಬದುಕಿಗೆ 14 ವರ್ಷದ ಸಂಭ್ರಮ

ಕಿರುತೆರೆಯ “ಅರಸಿ” ಸೀರಿಯಲ್ ಮೂಲಕ ಬಂದ ವಿಂದ್ಯಾ ರಾಮ್ ರಚಿತಾರಾಮ್ ಆಗಿ ಬದಲಾಗೋಕೆ ಕಾರಣವಾಗಿದ್ದು “ಬುಲ್ ಬುಲ್” ಸಿನಿಮಾ. ಹೊಸ ನಟಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದಿದ್ದು ಇಡೀ ಗಾಂಧಿನಗರದಾದ್ಯಂತ ಸುದ್ದಿಯಾಗಿತ್ತು.ಅದೇ ನಟಿ ಮುಂದೆ ಸ್ಯಾಂಡಲ್‍ವುಡ್‍ನ ನಂ 1 ನಟಿಯಾಗಿ ಬುಲ್ ಬುಲ್ ಅಂತಲೇ ಗುರುತಿಸಿಕೊಂಡಿದ್ಧಾರೆ. ಇದೀಗ 14 ವರ್ಷದ ಸಂಭ್ರಮದಲ್ಲಿದ್ದಾರೆ

ಸ್ಯಾಂಡಲ್‍ವುಡ್‍ನಲ್ಲಿ ನಾಯಕಿಯರು ಬಂದು ಬರುತ್ತಾರೆ, ಹೋಗುತ್ತಾರೆ. ಆದರೆ ದಶಕ ಕಳೆದರೂ ಅದೇ ಕ್ರೇಜ್, ಅದೇ ಸೌಂದರ್ಯ ಮತ್ತು ಅದೇ ‘ಡಿಂಪಲ್’ ಜಾದೂ ಉಳಿಸಿಕೊಂಡಿರುವ ನಟಿ ಎಂದರೆ ಬುಲ್ ಬುಲ್ ಬ್ಯೂಟಿ ರಚಿತಾ ರಾಮ್ ಮಾತ್ರ. ಕನ್ನಡ ಚಿತ್ರರಂಗದ ‘ಗುಳಿಗೆನ್ನೆಯ ಚೆಲುವೆ’ ಎಂದೇ ಖ್ಯಾತರಾಗಿದ್ದಾರೆ ರಚಿತಾ ರಾಮ್ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ಅವ್ರ ಬಣ್ಣದ ಬದುಕು ಆರಂಭವಾಗಿ ಇಂದಿಗೆ 14 ವರ್ಷ.

ರಚಿತಾ ರಾಮ್ ಸಿನಿ ಪಯಣ ಶುರುವಾಗಿ ಇಂದಿಗೆ ಭರ್ತಿ 14 ವರ್ಷವಾಗಿದೆ. 14 ವರ್ಷವಾದರೂ ಅದೇ ಚಾರ್ಮ್, ಅದೇ ಗ್ಲಾಮರ್ , ಅದೇ ಡಿಮ್ಯಾಂಡ್ ಇದ್ದು ರಚ್ಚುಗೆ ಇವತ್ತಿಗೂ ಡಿಮ್ಯಾಂಡಪೆÇ್ಪೀ ಡಿಮ್ಯಾಂಡ್ ಅನ್ನೋ ಹಾಗಾಗಿದೆ.

ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ , ರಮೇಶ್ ಅರವಿಂದ್ ಹೀಗೆ ಎಲ್ಲ ಸ್ಟಾರ್ ಗಳ ಜೊತೆಗೆ ನಟಿಸಿ ಸೈ ಅನ್ನಿಸಿಕೊಂಡಿರೋ ರಚ್ಚು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಲೈವಾ ಸೂಪರ್ ಸ್ಟಾರ್ ರಜಿನಿ ಜೊತೆಗೆ ಕೂಲಿ ಸಿನಿಮಾದಲ್ಲಿಯು ವಿಶೇಷ ಪಾತ್ರದಲ್ಲಿ ನಟಿಸಿ ತಮಿಳು ಸಿನಿಮಂದಿ ಮನಸ್ಸು ಗೆದ್ದಿದ್ದಾರೆ.

ರಚಿತಾ ರಾಮ್ ಗೆ 14 ವರ್ಷದ ಈ ಸಂದರ್ಭದಲ್ಲಿ ಅಭಿಮಾನಿಳೆಲ್ಲರೂ ಶುಭಾಶಯ ತಿಳಿಸ್ತಾ ಇದ್ದು , ಮತ್ತಷ್ಟು ಮಗದಷ್ಟು ಸಿನಿಮಾದಲ್ಲಿ ಡಿಂಪಲ್ ಕ್ವೀನ್ ನಟಿಸಲಿ ಕನ್ನಡದ ನಟಿ ಮತ್ತಷ್ಟು ಪರಭಾಷೆಯ ಸಿನಿಮಾಗಳಲ್ಲಿ ಮಿಂಚಲಿ. ಸದ್ಯ ರಚಿತಾ ರಾಮ್, ಧ್ರುವ ಜೊತೆ ಕ್ರಿಮಿನಲ್, ಸತೀಶ್ ನೀನಾಸಂ ಜೊತೆ ಅಯೋಗ್ಯ 2 ನಟಿಸುತ್ತಿದ್ದು, ತಮಿಳಿನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದ್ದು, ತೆಲುಗಿನಲ್ಲಿ ಎರಡು ಸಿನಿಮಾಗಳು ಈ ತಿಂಗಳಲ್ಲಿ ಅನೌನ್ಸ್ ಆಗಲಿದೆ.

Related Posts

ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ಗಾ ಗರಗ’ ಹಾಡು ಬಿಡುಗಡೆ

ನಟ ನಿರೂಪ್ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ಸತ್ಯ ಸನ್ ಆಫ್ ಹರಿಶ್ಚಂದ್ರ’ ಚಿತ್ರದ ಗಾ ಗರಗ’ ಭಾವನಾತ್ಮಕ ಹಾಗೂ ಅರ್ಥಪೂರ್ಣ ಗೀತೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ಬಾಲಿವುಡ್‍ನ ಜನಪ್ರಿಯ ಗಾಯಕ…

57ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಭಾರತೀಯ ಪನೋರಮಾಗೆ ತುಳು ಚಿತ್ರ `ಪಿಲಿ ಚನ್ನೆ’ ಆಯ್ಕೆ

`ನಡುಬೆಟ್ಟು ಅಪ್ಪಣ್ಣ’ ನಂತರ ಅನುಪಮ ಶರಧಿ ನಿರ್ದೇಶನದ ಎರಡನೇ ಚಿತ್ರಕ್ಕೆ ರಾಷ್ಟ್ರಮಟ್ಟದ ಗೌರವ ಒಂದೇ ಚಿತ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಬಹುಮುಖ ಪ್ರತಿಭೆ ಎನ್ನುವ ಹಿರಿಮೆಗೆ ಪಾತ್ರರಾಗಿದ್ಧಾರೆ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ 57ನೇ ಭಾರತೀಯ ಅಂತರಾಷ್ಟ್ರೀಯ ಚಿತ್ರೀತ್ಸೋತ್ಸ ಗೋವಾದಲ್ಲಿ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581