“ಶೀಲ ‘ಚಿತ್ರದ ಟ್ರೈಲರ್ ಬಿಡುಗಡೆ: ಪರಭಾಷೆಯಲ್ಲಿ ನಟಿಸಿದರೂ ಕನ್ನಡವೇ ಕರ್ಮಭೂಮಿ :ರಾಗಿಣಿ
ನಟಿ ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ” ಶೀಲ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ.ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಅನ್ನು ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರಕ್ಕೆ ಬಾಲು ನಾರಾಯಣ್ ಆಕ್ಷನ್ ಕಟ್ ಹೇಳಿದ್ದಾರೆ.
ಈ ವೇಳೆ ಮಾತಿಗಿಳಿದ ನಟಿ ರಾಗಿಣಿ ದ್ವಿವೇದಿ, ಇದೇ ಶುಕ್ರವಾರ ಚಿತ್ರ ತೆರೆಗೆ ಬರಲಿದೆ. ಮಲೆಯಾಳಂನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮರ್ಡರ್ ಮಿಸ್ಟ್ರಿ ಕುತೂಹಲದ ಸುತ್ತ ಸಾಗುವ ಚಿತ್ರ ಎಂದು ಮಾಹಿತಿ ಹಂಚಿಕೊಂಡರು.
ಮಲೆಯಾಳಂನಲ್ಲಿ ಚಿತ್ರ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಿಳೆಯರು ದಿನನಿತ್ಯ ಎದುರಿಸುತ್ತಿರುವ ಸಮಸ್ಯೆಗಳ ಸುತ್ತ ಚಿತ್ರೀಕರಣ ಮಾಡಲಾಗಿದೆ. ಶೀಲ ಬೇಗ ಜನರಿಗೆ ರೀಚ್ ಆಗುತ್ತದೆ ಎನ್ನುವ ಉದ್ದೇಶದಿಂದ ಚಿತ್ರ ಮಾಡಲಾಗಿದೆ. ಹೆಣ್ಣು ದುರ್ಗೆಯೂ ಆಗುತ್ತಾಳೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಲಾಗಿದೆ. ಈ ವಾರ ಚಿತ್ರ 100 ಕ್ಕೂ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರದಲ್ಲಿ ಚಿತ್ರ ನೋಡಿ ಸಹಕಾರ ನೀಡಿ ಎಂದು ಕೇಳಿಕೊಂಡರು.
ಚಿತ್ರ ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶ ನಮ್ಮದು .ಚಿತ್ರ ನೋಡಿ ಸಹಕಾರ ನೀಡಿ,ಪ್ರಿಯಾಂಕ ಸೂಪರ್ ಸ್ಟಾರ್, ಎಲ್ಲರಿಗೂ ಮಾದರಿ ಎಂದು ಮಾಹಿತಿ ನೀಡಿದರು.
ಸಿನಿಮಾ ನೋಡಿದರೆ ಬೇರೆ ಬೇರೆ ಪ್ರಯೋಗ ಮಾಡಲು ಸಹಕಾರಿಯಾಗಲಿದೆ. ಚಿತ್ರದ ಬಹುತೇಕ ಸನ್ನಿವೇಶದಲ್ಲಿ ಚಪ್ಪಲಿ ಇಲ್ಲದೆ ನಟಿಸಿದ್ದೇನೆ. ಎಮೋಷನಲ್ಲಿ ಡ್ರೀಮಿಂಗ್ ,ಕ್ಯಾರೆಕ್ಟರ್, ಸವಾಲಿನಿಂದ ಕೂಡಿತ್ತು. 140 ವರ್ಷ ಹಳಯ ಮನೆಯಲ್ಲಿ ಚಿತ್ರೀಕರಣ ಮಾಡಿದ್ದೇವೆ. ಮಲೆಯಾಳಂ ನಲ್ಲಿ ಮೂರನೇ ಸಿನಿಮಾ ಎಂದರು.
ನಿರ್ಮಾಪಕ ಡಿ.ಎಂ ಪಿಳ್ಳೆ , ನಿರ್ಮಾಪಕ ತೆರೆಯ ಹಿಂದೆಯೇ ಇರಬೇಕು. ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ನೋಡಿ ಎಂದು ಹಾರೈಸಿದರು.
ಪ್ರಿಯಾಂಕ ಉಪೇಂದ್ರ ಮಾತನಾಡಿ, ನಟಿ ರಾಗಿಣಿ ಗ್ಲಾಮರಸ್ ಆಗಿ ಕಾಣ್ತಾರೆ. ಗ್ಲಾಮರಸ್ ಆಗಿ ಕಾಣುತ್ತ ನಟಿಸುವುದು ಸವಾಲಿನ ಕೆಲಸ, ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದು ಹೇಳಿದರು.
ಚಿತ್ರದಲ್ಲಿ ಹಿರಿಯ ಕಲಾವಿದರಾದ ಅವಿನಾಶ್, ಶೋಭ ರಾಜ್, ಮಲೆಯಾಳಂ ನಟ ರಿಯಾಜ್ ಖಾನ್ ಸೇರಿದಂತೆ ಹಿರಿ ಕಿರಿಯ ನಟರು ಚಿತ್ರದಲ್ಲಿದ್ದಾರೆ.