ಕುತೂಹಲ ಹೆಚ್ಚಿಸಿದ ಬ್ಯಾಂಗ್ ಚಿತ್ರದ ಟ್ರೈಲರ್ : ಶಾನ್ವಿ – ರಘು ದೀಕ್ಷಿತ್ ಹೊಸ ಅವತಾರ
ಶಾನ್ವಿ ಶ್ರೀವಾತ್ಸವ್ ಹಾಗು ರುಘು ದೀಕ್ಷಿತ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ” ಬ್ಯಾಂಗ್” ಚಿತ್ರದ ಟ್ರೈಲರ್ ಅನ್ನು ಹಿರಿಯ ಕಲಾವಿದ ದತ್ತಣ್ಣ ಹಾಗು ನಿರ್ಮಾಪಕಿ ಪೂಜಾ ವಂಸತ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
ಟ್ರೈಲರ್ ಕುತೂಹಲ ಕೆರಳಿಸಿದೆ. ಇದರ ಜೊತೆಗೆ ನಟಿ ಶಾನ್ವಿ ಶ್ರೀವಾತ್ಸವ ಮತ್ತು ಸಂಗೀತ ನಿರ್ದೇಶಕ ರಘೂ ದೀಕ್ಷಿತ್ ಬ್ಯಾಂಗ್ ಚಿತ್ರದ ಮೂಲಕ ನಟನಾಗಿ ಕಮಾಲ್ ಮಾಡಲು ಮುಂದಾಗಿದ್ದಾರೆ.
ಈ ವೇಳೆ ದತ್ತಣ್ಣ ಮಾತನಾಡಿ ನಾಯಕಿ ಶಾನ್ವಿ ರಿವಲ್ವಾರ್ ರಾಣಿಯಾಗಿ ಕಾಣಿಸಿಕೊಂಡಿದ್ದಾರೆ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನಿರ್ದೇಶಕ ಗಣೇಶ್ ಪರುಶುರಾಮ್, ಟ್ರೈಲರ್ ಬಿಡುಗಡೆಯಾಗಿರುವುದು ಖುಷಿ ಆಗ್ತಾ ಇದೆ. ತುಂಬಾ ದಿನದ ಕನಸು ನನಸಾಗುವ ಕಾಲ ಬಂದಿದೆ. ಚಿತ್ರ ಇದೇ 18ಕ್ಕೆ ಬಿಡುಗಡೆಯಾಗಲಿದೆ .ಮನರಂಜನೆಯ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಎಂದರು.
ಡಾರ್ಕ್ ಕಾಮಿಡಿ ಆಕ್ಷನ್ ಚಿತ್ರ
ನಟಿ ಶ್ವಾನಿ ಶ್ರೀವಾತ್ಸವ್ ಮಾತನಾಡಿ, ಗ್ಯಾಂಗ್ 11 ವರ್ಷದ ಹಿಂದೆ ನಾನು ಹೊಸಬಳಾಗಿದ್ದೆ. ಬ್ಯಾಂಗ್ ಚಿತ್ರದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ನಾನು ಚಿತ್ರರಂಗಕ್ಕೆ ಬಂದ ಆರಂಭದ ದಿನಗಳು ನೆನಪಾಯಿತು. ಒಂದು ತಿಂಗಳು ಪಾತ್ರಕ್ಕಾಗಿ ಕನ್ವಿನ್ಸ್ ಮಾಡಿದ್ದಾರೆ. ಹೊಸತರ ಪಾತ್ರವಿದೆ. ಮಳೆಯಲ್ಲಿ ಪೈಟ್ ಮಾಡಿದ್ದೇನೆ ಮುಂದೆಯೂ ಪ್ರಯೋಗ ಮಾಡುವೆ ಸಹಕಾರವಿರಲಿ ಎಂದು ಹಾರೈಸಿದರು.
ನಟ ರಘು ದೀಕ್ಷಿತ್ ಮಾತನಾಡಿ ಚಿತ್ರದಲ್ಲಿ ಡ್ಯಾಡಿ ಪಾತ್ರ ಮಾಡಿದ್ದೇನೆ.ಹಾಡು ಹೇಳಿಕೊಂಡಿದ್ದೆ. ಕರೆದುಕೊಂಡು ಬಂದು ನಟನೆ ಮಾಡಿಸಿದ್ದಾರೆ. ಚಿತ್ರ ನೋಡಿ ಜನ ಬೆಂಬಲ ಕೊಡ್ತಾರೆ ಎನ್ನುವ ನಂಬಿಕೆ ಇದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮಳೆಯಲ್ಲಿ ಪೈಟ್ ಸೀನು ಇದ್ದಾಗ ಶಾನ್ವಿ ಅವರನ್ನು ತಳ್ಳಿದ್ದೆ. ಅವರಿಗೆ ಏಟಾಗಿತ್ತು. ಆದರೂ ಅವರು ಏನು ಅಂದುಕೊಳ್ಳದೆ ಸಹಕಾರ ನೀಡಿದರು ಎಂದು ಮೆಚ್ಚುಗೆ ವ್ಯಕ್ತೊಡಿಸಿದರು.
ಆನಂದ್ ಆಡಿಯೋ ಆನಂದ್ ಮಾತನಾಡಿ ಹೊಸ ಮಾದರಿಯ ಚಿತ್ರ. ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು.
ಹಾಡಿಗೆ ದ್ವನಿಯಾಗಿರುವ ಆಲ್ ಓಕೆ, ಚಿತ್ರಮಂದಿರದಲ್ಲಿ ಚಿತ್ರ ನೋಡಿ ಎಂದು ಹಾರೈಸಿದರು.
ಸಂಗೀತ ನಿರ್ದೇಶಕ ಕಮ್ ನಟ ರಿತ್ವಿಕ್ ಮುರುಳೀಧರ್ ಮಾತನಾಡಿ , ಫ್ಯಾಶನ್ ನಿಂದ ದುಡ್ಡು ಹಾಕಿದ ನಿರ್ಮಾಪಕಿಗೆ ಸದಾ ಚಿರಋಣಿ ಎಂದರೆ ಸುನೀಲ್ ಗುಜ್ಜರ್ ಮತ್ತು ನಾಟ್ಯ ರಂಗ ಛಾಯಾಗ್ರಾಹಕ ಉದಯ್ ಲೀಲಾ ಮತ್ತಿತತರು ಮಾಹಿತಿ ಹಂಚಿಕೊಂಡಿದರು.