ಸ್ಟ್ಯಾಂಡಪ್ ಕಾಮಿಡಿಯನ್ ಅವತಾರದಲ್ಲಿ ರಾಂಕ್ ಸ್ಟಾರ್ ಗುರುನಂದನ್
ರಾಂಕ್ ಸರಣಿಯ ಚಿತ್ರಗಳನ್ನು ಒಂದರ ಹಿಂದೆ ಒಂದು ಮಾಡಿದ ಅದರಲ್ಲಿ ಯಶಸ್ಸು ಗಳಿಸಿದ ನಟ ಗುರುನಂದನ್, ಇದೀಗ ರಾಂಕ್ ಸ್ಟಾರ್ ಆಗಿದ್ದಾರೆ. ಇದೀಗ ಇನ್ನೂ ಹೆಸರಿಡದ ಚಿತ್ರದ ಮೂಲಕ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರೊಡಕ್ಷನ್ ನಂಬರ್ 1 ಚಿತ್ರದ ಮೂಲಕ ಗುರುನಂದನ್ ಸ್ಟಾಂಡ್‍ಅಪ್ ಕಾಮಿಡಿಯನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೂಲಕ ಗುರುನಂದನ್ ಮಂಡಿಮನೆ ಟಾಕೀಸ್ ಬ್ಯಾನರ್ ಮೂಲಕ ನಿರ್ಮಾಪಕರಾಗಿಯೂ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ
ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ “ಪ್ರೊಡಕ್ಷನ್ ನಂಬರ್ 1” ಚಿತ್ರಕ್ಕೆ ಅದ್ದೂರಿ ಮಹೂರ್ತ ನಡೆಯಿತು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲ್ಯಾಪ್ ಮಾಡೋ ಮೂಲಕ ಸಿನಿಮಾಗೆ ಚಾಲನೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರವಿಶೇಷ ಕತ್ರ್ಯವಾಧಿüಕಾರಿ ಶ್ರೀವೆಂಕಟೇಶ್ ಹಾಗೂ ಗೋಲ್ಡ್ ಪಿಂಚ್ ಹೋಟೇಲ್ ಉದ್ಯಮಿ ಪ್ರಕಾಶ್ ಶೆಟ್ಟಿಯ ಶುಭ ಹಾರೈಸಿದರು.
ಚಿತ್ರಕ್ಕೆ ಸುಮಂತ್ ಗೌಡ ಚೊಚ್ಚಲ ನಿರ್ದೇಶನವಿದ್ದು ಭೀಮ ಕ್ಯಾಮೆರಾ ಮ್ಯಾನ್ ಶಿವಸೇನಾ ಫಸ್ಟ್ ರಾಂಕ್ ರಾಜು ಖ್ಯಾತಿಯ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸ್ತಿದ್ದಾರೆ. ಶರತ್ ಚಕ್ರವರ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಮುಖ್ಯಭೂಮಿಕೆಯಲ್ಲಿ ಗುರುನಂದನ್ ಜೊತೆಗೆ ನಾಯಕಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣ್ಣಚ್ಚ ನಾಯಕಿಯಾಗಿ ಅಭಿನಯಿಸ್ತಿದ್ದಾರೆ. ಇನ್ನುಳಿದ ತಾರಾಬಳಗದಲ್ಲಿ ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ಪ್ರೊಡಕ್ಷನ್ ನಂಬರ್ 1 ಚಿತ್ರದ ಟೈಟಲ್ ನ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದು, ಮುಹೂರ್ತ ದಿಂದಲೇ ಚಿತ್ರೀಕರಣ ಆರಂಭಮಾಡಿದೆ ಚಿತ್ರತಂಡ.