Ravichandran launches the film "Kavala", which tells the story of a blood-soaked chapter

ರಕ್ತ ಸಿಕ್ತ ಅಧ್ಯಾಯದ ಕಥೆ ಹೇಳುವ “ಕವಳ” ಚಿತ್ರಕ್ಕೆ ರವಿಚಂದ್ರನ್ ಚಾಲನೆ - CineNewsKannada.com

ರಕ್ತ ಸಿಕ್ತ ಅಧ್ಯಾಯದ ಕಥೆ ಹೇಳುವ “ಕವಳ” ಚಿತ್ರಕ್ಕೆ ರವಿಚಂದ್ರನ್ ಚಾಲನೆ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಸಮುತಿರ ಕಣಿ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ “ ಕವಳ” ಚಿತ್ರದ ಪೋಸ್ಟರ್ ಅನ್ನು ಹಿರಿಯ ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಟ ವಿ, ರವಿಚಂದ್ರನ್ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ

ಆರ್ ಎಕ್ಸ್ ಸೂರಿ ಮತ್ತು ಭೈರಾದೇವಿ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಶ್ರೀಜೈ ನಿರ್ದೇಶನ ಮಾಡುತ್ತಿರುವ ಕವಳ ಚಿತ್ರದಲ್ಲಿ ಸಂದೀಪ್ ನಾಗರಾಜ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ

ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ನಿರ್ಮಾಣದ ಕವಳ ಚಿತ್ರದ ಮುಹೂರ್ತ ಸಮಾರಂಭ ನಗರದ ಕಾಡು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕವಳ ಚಿತ್ರಕ್ಕೆ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಶ್ರೀ ಜೈ ಮಾತನಾಡಿ ಕವಳ ಎಂದರೆ ತಾಂಬೂಲ. ಅದನ್ನು ಜಗಿದಾಗ ಬರುವ ಕೆಂಪುಬಣ್ಣವನ್ನು ಚಿತ್ರದಲ್ಲಿ ಹೇಳಿದ್ದೇವೆ. ಒಂದಷ್ಟು ನೈಜಘಟನೆಗಳನ್ನು ಸ್ಪೂರ್ತಿಯಾಗಿಟ್ಟುಕೊಂಡು ಚಿತ್ರದ ಕಥೆ ಹೆಣೆದಿದ್ದೇನೆ. ಒಂದು ಸ್ಟ್ರಾಂಗ್ ರೀಜನ್ ಗೋಸ್ಕರ ಹರಿಯುವ ರಕ್ತಧಾರೆ. ಕವಳನ ಕಥೆ ಸ್ಪೂರ್ತಿಯಾಗಿರಬಹುದು. ಅದರೆ ಇದು ಆತನದೇ ಕಥೆಯಲ್ಲ. ಯುಗಾದಿ ನಂತರ ಆರಂಭಿಸಿ ಕಾಶಿ, ಹೈದರಾಬಾದ್ ಸೇರಿದಂತೆ ಹಲವಾರು ಲೊಕೇಶನ್ ಗಳಲ್ಲಿ ಶೂಟ್ ಮಾಡುವ ಯೋಜನೆಯಿದೆ ಎಂದರು

ತಮಿಳಿನ ನಿರ್ದೇಶಕ ಸಮುದ್ರಖನಿ ಅವರದು ಹೊರರಾಜ್ಯದಿಂದ ಬಂದವರ ಹೇಗೆ ಕನ್ನಡ ಮಾತಾಡುತ್ತಾರೋ ಅದೇ ರೀತಿ ಇರುತ್ತದೆ. ನಿರ್ಮಾಪಕರು ನನ್ನನ್ನು ನಂಬಿ ದೊಡ್ಡ ಮಟ್ಟದ ಬಂಡವಾಳ ಹಾಕುತ್ತಿದ್ದಾರೆ. ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು

ಸಮುದ್ರಖನಿ ಮಾತನಾಡಿ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅವರ ಜತೆ ಎರಡು ಸಿನಿಮಾ ಮಾಡಿದ್ದು ಮರೆಯಲಾಗದ ಅನುಭವ. ಕನ್ನಡ ಸ್ವಲ್ಪ ಬರುತ್ತೆ. ಇದರಲ್ಲಿ ಒಂದು ನೆಗೆಟಿವ್ ಪಾತ್ರ ಮಾಡುತ್ತಿದ್ದೇನೆ ಎಂದರು.

ನಾಯಕ ಸಂದೀಪ್ ನಾಗರಾಜ್ ಮಾತನಾಡಿ ಈ ಪಾತ್ರ ಮಾಡುತ್ತೇನೆ ಎಂದು ನನ್ನ ನಂಬಿ ಇಂಥ ದೊಡ್ಡ ಪಾತ್ರ ಕೊಟ್ಟಿದ್ದಾರೆ. ಚೆನ್ನಾಗಿ ಮಾಡುತ್ತೇನೆ ಎಂದರು.

ನಿರ್ಮಾಪಕ ಲೋಕೇಶ್ ಮಾತನಾಡಿ ಸ್ಟಾರ್ಟಪ್ ಬ್ಯುಸಿನೆಸ್ ಮಾಡುತ್ತಿದ್ದೇನೆ.ಮೊದಲಿಂದಲೂ ಸಿನಿಮಾ ಬಗ್ಗೆ ಒಲವಿತ್ತು ಎಂದರು.

ಮತ್ತೊಬ್ಬ ನಿರ್ಮಾಪಕ ಅಡವಯ್ಯ ಪೂಜಾರ್ ಮಾತನಾಡಿ ಸುಮಾರು 40 ಕಥೆಗಳನ್ನು ಕೇಳಿ ಇದನ್ನು ಫೈನಲ್ ಮಾಡಿದ್ದೇನೆ. ಗೂಗ್ಲಿಯಲ್ಲಿ ಸಂದೀಪ್ ಅಭಿನಯ ನೋಡಿದ್ದೆ. ನಾಯಕನ ಪಾತ್ರಕ್ಕೆ ಅವರೇ ಬೇಕೆಂದು ನಿರ್ದೇಶಕರಿಗೆ ಒತ್ತಾಯಿಸಿದೆ.ಸಮುದ್ರಖನಿ ಅವರ ಒಪ್ಪುತ್ತಾರೆ ಎಂಬ ನಂಬಿಕೆಯಿರಲಿಲ್ಲ ಎಂದು ಹೇಳಿದರು.

ಚಿತ್ರಕ್ಕೆ ಎ.ಕರುಣಾಕರನ್ ಅವರ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ, ಅರ್ಜುನ್ ರಾಜ್, ವಿಕ್ರಮ್ ಮೋರ್ ಸಾಹಸ, ಕಲೈ, ಮುರಳಿ ಅವರ ನೃತ್ಯ, ದೀಪು ಎಸ್.ಕುಮಾರ್ ಸಂಕಲನವಿದೆ. ಕವಳ ಚಿತ್ರದ ಉಳಿದ ಪಾತ್ರಗಳಲ್ಲಿ ಹಿರಿಯ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಈಶ್ವರಿರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್, ಗಿಲ್ಲಿ ನಟ, ಪ್ರಕಾಶ್ ತುಮ್ಮಿನಾಡ್ ಹಾಗೂ ಇತರರು ನಟಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin