Veera Kambala Film Review : Unveiling the heritage of Tulunad people "Veera Kambala"

Veera Kambala Film Review : ತುಳುನಾಡ ಜನರ ಪರಂಪರೆಯ ಅನಾವರಣ “ವೀರ ಕಂಬಳ” - CineNewsKannada.com

Veera Kambala Film Review : ತುಳುನಾಡ ಜನರ ಪರಂಪರೆಯ ಅನಾವರಣ “ವೀರ ಕಂಬಳ”

ಚಿತ್ರ ; ವೀರ ಕಂಬಳ
ನಿರ್ದೇಶನ ; ಎಸ್.ವಿ ರಾಜೇಂದ್ರ ಸಿಂಗ್ ಬಾಬು
ತಾರಾಗಣ; ಆದಿತ್ಯ, ರಾಧಿಕಾ ಚೇತನ್, ಪ್ರಕಾಶ್ ರೈ, ರವಿಶಂಕರ್, ನವೀನ್ ಪಡೀಲು, ಗೋಪಿನಾಥ್ ಭಟ್, ಉಷಾ ಭಂಡಾರಿ, ವೀಣಾ ಪೆÇನ್ನಪ್ಪ ಮತ್ತಿತರರು
ರೇಟಿಂಗ್ : *** 3.5/5

ಕನ್ನಡಲ್ಲಿ ಇತ್ತೀಚೆಗೆ ಹೊಸ ಕಂಟೆಂಟುಗಳು, ಹೊಸ ವಿಷಯಗಳ ಕಥಾ ವಸ್ತುಗಳನ್ನು ಒಳಗೊಂಡ ಚಿತ್ರಗಳು ಜನರ ಮನ ಗೆಲ್ಲುತ್ತಿವೆ.ಅಂತಹ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ “ವೀರ ಕಂಬಳ”.

ತುಳುನಾಡ ಪರಂಪರೆ, ನೂರಾರು ವರ್ಷಗಳ ಇತಿಹಾಸ ಇರುವ ಕಂಬಳ ಕೇವಲ ಕ್ರೀಡೆಯಷ್ಟೇ ಅಲ್ಲ. ಜನರ ಭಾವನೆಯಲ್ಲಿ ಬೆರೆತ ಸಂಸ್ಕೃತಿ, ಮಣ್ಣಿನ ಆಚರಣೆ, ಪೂರ್ವಿಕರ ಕಾಲದಿಂದಲೂ ನಡೆದುಕೊಂಡ ಬಂದ ಕ್ರೀಡೆಯನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಂಚು ಹಾಕುವ ರಾಜಕಾರಣಿಗಳು ಒಂದೆಡೆಯಾದರೆ ಕಂಬಳ ಹೆಸರಲ್ಲಿ ಬೆಟ್ಟಿಂಗ್ ನಡೆಸುವುದನ್ನೇ ಉದ್ಯೋಗ ಮಾಡಿಕೊಂಡ ಜನ.

ಇದರ ನಡುವೆ ಸಂಸ್ಕೃತಿ, ಆಚಾರ, ವಿಚಾರಗಳ ಪಾಲನೆ ಮಾಡುವ ಮೂಲಕ ಸಂಫ್ರದಾಯ ಪಾಲನೆ ಮಾಡಲು ಹೋರಾಟ ನಡೆಸುವ ಮಂದಿ. ಸೇರಿದಂತೆ ಕರಾವಳಿ ಮಣ್ಣಿನ ಸೊಗಡಿನ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು.

ಕರಾವಳಿ ಭಾಗದ ಕಥೆವಳು ಇತ್ತೀಚೆಗೆ ಒಂದರ ಹಿಂದೆ ಬರುತ್ತಿವೆ. ಜೊತೆಗೆ ಸಿನಿಮಾದಲ್ಲಿ ಕರಾವಳಿ ಭಾಷೆ, ಸಂಸ್ಕತಿ, ಆಚಾರ ಸೇರಿದಂತೆ ಹಲವು ವಿಷಯಗಳನ್ನು ತಮ್ಮ ಅನುಭವದ ಆಧಾರದ ಮೇಲೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕರು

ಕಂಬಳದ ಇತಿಹಾಸ ಮತ್ತು ಅದರ ಮಹತ್ವ, ಕಂಬಳಕ್ಕೆ ಬಳಸುವ ಕೋಣಗಳನ್ನು ನೋಡಿಕೊಳ್ಳುವ ಪರಿ,ರಾಜಕೀಯ ಲಾಭಕ್ಕಾಗಿ ಕಂಬಳ ಬಳಕೆ ಮಾಡಿಕೊಂಡ ಜನರ ಕಿತಾಪತಿ, ನ್ಯಾಯಾಲಯದ ಆದೇಶ, ರಾಜ್ಯ ಸರ್ಕಾರ ನೋಡಿರುವ ಅನುಮತಿ ಸೇರಿದಂತೆ ಹಲವು ವಿಷಯವನ್ನು ಮನಮುಟ್ಟುವಂತೆ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.

ಸತ್ಯ (ಆದಿತ್ಯ) ಮನೆತನ ಹತ್ತಾರು ವರ್ಷದಿಂದ ಕಂಬಳ ನಡೆಸಿಕೊಂಡು ಬಂದವರು, ದಾಯಾದಿ ಕಲಹದಲ್ಲಿ ಕಂಬಳ ನಿಂತು ಹಲವು ವರ್ಷಗಳೇ ಉರುಳಿ ಹೋಗುತ್ತವೆ. ಈ ನಡುವೆ ಮನೆಯಲ್ಲಿ ನಡೆಯುವ ಘಟನೆಗಳಿಗೆ ಕಂಬಳ ನಿಲ್ಲಿಸಿದ್ದೇ ಕಾರಣ ಎನ್ನುವ ಸತ್ಯ ಅರಿವಾಗುತ್ತದೆ, ಕಂಬಳ ನಡೆಸಲು ಮುಂದಾಗುವ ಕುಟುಂಬಕ್ಕೆ ಅಡ್ಡಿ ಆತಂಕ ಎದುರಾಗುತ್ತದೆ,

ದುಬೈನಲ್ಲಿರುವ ಸತ್ಯ ಅಣ್ಣನಿಗೆ ಅನಾರೋಗ್ಯ ಎನ್ನುವುದನ್ನು ತಿಳಿದು ನೋಡಲು ಬರುತ್ತಾನೆ,. ಇಲ್ಲಿ ಕಂಬಳ ಆಯೋಜಿಲು ಉದ್ದೇಶಿಸಿದಾಗ ನಡೆಯುವ ಕಿತಾಪತಿ, ಸತ್ಯನ ಮೇಲೆ ದಾಳಿ ನಡೆಸುವ ಸಂಚು, ಅದನ್ನು ಪೊಲೀಸ್ ಕಮೀಷನರ್ (ರಾಧಿಕಾ ಚೇತನ್) ಮುನ್ನಚ್ಚರಿಕೆಯಿಂದ ತಪ್ಪಿಸುತ್ತಾರೆ. ನಿಂತುಹೋಗಿದ್ದ ಕಂಬಳ ಮತ್ತೆ ನಡೆಯುತ್ತದಾ, ಕಂಬಳವನ್ನು ನಿಲ್ಲಿಸಲು ಯಾರು ಏನೆಲ್ಲ ಕಿತಾಪತಿ ಮಾಡಿದರು ಎನ್ನುವುದನ್ನು ತಿಳಿಯಬೇಕಾದರೆ ಚಿತ್ರ ನೋಡಬೇಕು

ಕಂಬಳದ ಆಚರಣೆ ಉಳಿಸಿ ಕಾಪಾಡಿಕೊಂಡು ಹೋಗುವಲ್ಲಿ ವಕೀಲರಾಗಿ ಪ್ರಕಾಶ್ ರೈ ಗಮನ ಸೆಳೆದಿದ್ಧಾರೆ. ಎದುರಾಳಿ ವಕೀಲರಾಗಿ ರವಿಶಂಕರ್ ಕೂಡ ಗಮನ ಸೆಳೆದಿದ್ಧಾರೆ, ನಟ ಆದಿತ್ಯ,ರಾಧಿಕಾ ಚೇತನ್, ನವೀನ್ ಪಡೀಲು, ಗೋಪಿನಾಥ್ ಭಟ್, ಉಷಾ ಭಂಡಾರಿ, ವೀಣಾ ಪೆÇನ್ನಪ್ಪ ಮತ್ತಿತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ

ಧ್ವೇಷ ಬಿಡಿ ಪ್ರೀತಿ ಹಂಚಿ ಎನ್ನುವ ಸಂದೇಶದೊಂದಿಗೆ ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin