Rocking Star Yash's "Toxic" is scheduled to release on March 19th next year.

ರಾಕಿಂಗ್ ಸ್ಟಾರ್ ಯಶ್ ನಟನೆಯ “ಟಾಕ್ಸಿಕ್” ನಿಗಧಿಯಂತೆ ಮುಂದಿನ ವರ್ಷ ಮಾರ್ಚ್ 19ಕ್ಕೆ ಬಿಡುಗಡೆ - CineNewsKannada.com

ರಾಕಿಂಗ್ ಸ್ಟಾರ್ ಯಶ್ ನಟನೆಯ “ಟಾಕ್ಸಿಕ್” ನಿಗಧಿಯಂತೆ ಮುಂದಿನ ವರ್ಷ ಮಾರ್ಚ್ 19ಕ್ಕೆ ಬಿಡುಗಡೆ

ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಟಾಕ್ಸಿಕ್” ಚಿತ್ರ ನಿಗಧಿಯಂತೆ 2026ರ ಮಾರ್ಚ್ 19ರಂದು ಬಿಡುಗಡೆಯಾಗಲಿದೆ, ಈ ಬಗ್ಗೆ ಯಾವುದೇ ಅನುಮಾನ ಮತ್ತು ಗೊಂದಲ ಬೇಡ ಎಂದು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದೆ

ರಾಕಿಂಗ್ ಸ್ಟಾರ್ ಯಶ್ ನಟನೆಯ ಆಕ್ಷನ್-ಡ್ರಾಮಾ “ಟಾಕ್ಸಿಕ್” ಚಿತ್ರ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ನಿಗಧಿಯಂತೆ ಬಿಡುಗಡೆಯಾಗಲಿದೆ, ಚಿತ್ರ ಮುಂದೂಡಿಕೆ ಆಗಲಿದೆ ಎನ್ನುವ ಅನುಮಾನ ಅಭಿಮಾನಿಗಳಿಗೆ ಬೇಡ ಎಂದು ಸ್ಪಷ್ಟನೆ ನೀಡಿದ್ಧಾರೆ

ನಟ ಯಶ್ ಮುಂಬೈನಲ್ಲಿ ರಾಮಾಯಣ ಚಿತ್ರೀಕರಣ ಪ್ರಾರಂಭಿಸಿದಂತೆಯೇ ಏಪ್ರಿಲ್‍ನಲ್ಲಿ ಪೆÇೀಸ್ಟ್-ಪೆÇ್ರಡಕ್ಷನ್ ಮತ್ತು ವಿಎಫ್‍ಎಕ್ಸ್ ಕೆಲಸಗಳು ಪ್ರಾರಂಭವಾಗಿವೆ. ಚಿತ್ರೀಕರಣದ ಅಂತಿಮ ಹಂತದ ಚಿತ್ರೀಕರಣ ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿದೆ ಪ್ರಚಾರ ಕಾರ್ಯ ಜನವರಿಯಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟಪಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ, ಟಾಕ್ಸಿಕ್ ಚಿತ್ರದ ಕೌಂಟ್‍ಡೌನ್ ಪೆÇೀಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಬಿಡುಗಡೆ ಯೋಜನೆ ಧೃಢಪಡಿಸಿದೆ.“ಇನ್ನು 140 ದಿನಗಳು ಉಳಿದಿವೆ ಗುಡಿ ಪಾಡ್ವಾ, ಯುಗಾದಿ ಮತ್ತು ಪ್ರಾದೇಶಿಕ ಹೊಸ ವರ್ಷದ ಆಚರಣೆಗಳೊಂದಿಗೆ ಹೊಂದಿಕೆಯಾಗುವ ಪ್ರಮುಖ ಹಬ್ಬದ ಸಮಯದಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದೆ

ಕೆಜಿಎಫ್ ಸರಣಿಯ ನಂತರ ನಟ ಯಶ್ ಅವರ ಚಿತ್ರ ಬಿಡುಗಡೆಯಾಗುತ್ತಿದೆ.ಗೀತು ಮೋಹನ್‍ದಾಸ್ ನಿರ್ದೇಶಿಸಿದ ಈ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ

ಕೆವಿಎನ್ ಪೆÇ್ರಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ಜಂಟಿಯಾಗಿ ಟಾಕ್ಸಿಕ್ ಚಿತ್ರವನ್ನು ನಿರ್ಮಾಣ ಮಾಡಿದ್ದು ಜಾಗತಿಕವಾಗಿ ಚಿತ್ರ ಸದ್ದು ಮಾಡುತ್ತಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin