ಕೌತುಕದ ವಿಷಯದ ಮೂಲಕ ‘ಸಹ್ಯಾದ್ರಿ’ ಪ್ರಸ್ತುತ ಪಡಿಸಲು ಮುಂದಾದ ರೋಹಿತ್
ದೈವ ಹಾಗೂ ದುಷ್ಟ ಶಕ್ತಿಯ ನಡುವಿನ ಸಂಘರ್ಷ ಆಧರಿಸಿ ಆರ ಮಾಡಿದ್ದ ರೋಹಿತ್ ಈ ಬಾರಿ, “ಸಹ್ಯಾದ್ರಿ” ಚಿತ್ರದ ಮೂಲಕ ಇನ್ನೊಂದು ಕೌತುಕ ವಿಚಾರವನ್ನು ಜನರ ಮುಂದಿಡಲು ಮುಂದಾಗಿದ್ದಾರೆ

“ಸಹ್ಯಾದ್ರಿ” ಚಿತ್ರ ಪಂಚ ಭಾಷೆಯಲ್ಲಿ ಬರಲಿದ್ದು, ಟೈಟಲ್ ಟೀಸರ್ ಮೂಲಕ ಪ್ಯಾನ್ ಇಂಡಿಯಾ ಸಿನ್ಮಾ ಅನ್ನೋದನ್ನ ಸೂಚಿಸಿದ್ದಾರೆ.ಸಹ್ಯಾದ್ರಿ ಚಿತ್ರದ ಕಥಾಹಂದರ ಆಧ್ಯಾತ್ಮಿಕ ದರೋಡೆಕೋರ ಪ್ರಕಾರವಾಗಿದ್ದು, ಮೆದುಳಿನಲ್ಲಿ ಹೆಚ್ಚಿನ ನರಕೋಶಗಳನ್ನು ಹೊಂದಿರುವ ಅಕಾಲಿಕ ಮಗು ವಯಸ್ಸಾದಂತೆ, ಎಲ್ಲಾ ಶಕ್ತಿಯನ್ನು ತಡೆಹಿಡಿಯುವ ವಿಜಯಶಾಲಿಯಾಗುತ್ತದೆ. ಈ ಲೈನ್ ಇಟ್ಟುಕೊಂಡು ಈ ಬಾರು ರೋಹಿತ್ ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ..
ಆರ ಚಿತ್ರದ ಮೂಲಕ ಸಿನಿಮಾದ ವ್ಯಾಪಾರ ವ್ಯವಹಾರ ಸಂಪೂರ್ಣವಾಗಿ ಅರಿತುಕೊಂಡಿರುವ ರೋಹಿತ್ ಮತ್ತು ತಂಡ 2ವರ್ಷಗಳಿಂದ ಎರಡನೇ ಸಿನಿಮಾ ಯೋಜನೆಯನ್ನು ಅಚ್ಚುಕಟ್ಟಾಗಿ ರೂಪಿಸಿದ್ದು, ಈ ಬಾರಿ ಗೆದ್ದೇ ಗೆಲ್ಲುವ ದೊಡ್ಡದಾಗಿ ನಿಲ್ಲುವ ಛಲದಲ್ಲಿ ಸಹ್ಯಾದ್ರಿ ಚಿತ್ರವನ್ನು ಜನರ ಮುಂದಿಡಲು ಸಿದ್ದತೆ ಮಾಡಿಕೊಂಡಿದ್ದಾರೆ

ಮೊದಲಿಗೆ ಸಹ್ಯಾದ್ರಿ ಚಿತ್ರವನ್ನು ಕನ್ನಡದಲ್ಲಿ ಚಿತ್ರಿಸಿ ನಂತರ ಇತರ ಭಾಷೆಗಳಿಗೆ ಡಬ್ ಮಾಡುವ ಉದ್ದೇಶ ರೋಹಿತ್ ಮತ್ತವರ ತಂಡದ ಆಲೋಚನೆ.ಸದ್ಯದಕ್ಕೆ ವಿಭಿನ್ನವಾಗಿ ಅಪ್ಪಟ ಕನ್ನಡದ ಸೊಗಡಲ್ಲಿ ಸಹ್ಯಾದ್ರಿಯ ತಪ್ಪಲಲ್ಲಿ ನಿಂತು ಶೀರ್ಷಕೆ ಅನಾವರಣ ಮಾಡಲಾಗಿದ್ದು ಆರ ರೋಹಿತ್ , ಸದ್ಯದಲ್ಲೇ ಚಿತ್ರದ ಮುಹೂರ್ತ ಮಾಡಿ ಚಿತ್ರೀಕರಣ ಆರಂಭಿಸುವ ಕೆಲಸದಲ್ಲಿದ್ದಾರೆ.
ಮಂಗಳೂರು ಸೇರಿದಂತೆ ಬಹುತೇಕ ಪಶ್ಚಿಮ ಘಟ್ಟಗಳಲ್ಲೇ ಸಹ್ಯಾದ್ರಿ ಚಿತ್ರದ ಚಿತ್ರೀಕರಣ ನಡೆಯಲಿದೆಯಂತೆ.. ಎಲ್ಲಾ ಅಂದುಕೊಂಡಂತೆ ಆದ್ರೆ ಈ ಸಹ್ಯಾದ್ರಿ 2026ರ ಜುಲೈನಲ್ಲಿ ತೆರೆಗೆ ಬರಲಿದೆಯಂತೆ.
ಸಹ್ಯಾದ್ರಿ ಎಆರ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ರೇಣುಕಾ ಪಿ ಎನ್ ನಿರ್ಮಿಸ್ತಿದ್ದಾರೆ. ಆರ ರೋಹಿತ್ ನಿರ್ದೆಶನದ ಜೊತೆಗೆ ನಟನೆ ಮಾಡುತ್ತಿದ್ದಾರೆ. ವಿಲಿಯಲ್ ಡೇವಿಡ್ ಸಹಾಯಕ ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಮಾಡ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಹಾಯಕ ನವನಾಥ್ ವಾಸುದೇವ್ ಸಂಗೀತ ಸಂಯೋಜಿಸ್ತಿದ್ದಾರೆ.

ತಾಂತ್ರಿಕವಾಗಿ ನಿಪುಣರ ತಂಡ ಕಟ್ಟಿಕೊಂಡಿರುವ ರೋಹಿತ್ ಪ್ರಸ್ತುತ ಉದ್ಯಮದ ಸ್ಥಿತಿಗತಿ ಅಧ್ಯಾಯನ ಮಾಡಿ ಸಹ್ಯಾದ್ರಿ ಚಿತ್ರವನ್ನ ಮಾಡೋದಕ್ಕೆ ಕೈ ಹಾಕಿದ್ದು, ಈ ತಂಡದ ನಡೆ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.

