“ಠಾಣೆ” ಚಿತ್ರದ ಟ್ರೇಲರ್ ಬಿಡುಗಡೆ: ಮೇ 30ಕ್ಕೆ ಚಿತ್ರ ತೆರೆಗೆ
ಗಾಯತ್ರಿ ಎಂ ನಿರ್ಮಿಸಿ, ಎಸ್.ಭಗತ್ ರಾಜ್ ನಿರ್ದೇಶನದ ಹಾಗೂ ಪ್ರವೀಣ್ ನಾಯಕನಾಗಿ ನಟಿಸಿರುವ “ಠಾಣೆ” ಚಿತ್ರದ ಟ್ರೇಲರ್ ಅನ್ನು ಹಿರಿಯ ಕಲಾವಿದೆ ಮಾಲತಿ ಸುಧೀರ್ ಬಿಡುಗಡೆ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಮಾನಸ ಹೊಳ್ಳ ಸಂಗೀತ ನೀಡಿರುವ ಚಿತ್ರ ಕುತೂಹಲ ಕೆರಳಿಸಿದೆ

ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯದರ್ಶಿ ಸಂತೋಷ್ ಹಾನಗಲ್ ಮತ್ತಿತರು ಈ ವೇಳೆ ಹಾಜರಿದ್ದು, ಚಿತ್ರ ಮೇ 30 ರಂದು ತೆರೆಗೆ ಬರಲಿದೆ
ನಿರ್ದೇಶಕ ಭಗತ್ ರಾಜ್ ಮಾತನಾಡಿ “ಠಾಣೆ” ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ. “ಠಾಣೆ” ಎಂದರೆ ಪೆÇಲೀಸ್ ಸ್ಟೇಷನ್. ಪೊಲೀಸ್ ಠಾಣೆಯ ಕೇಸ್ ಕುರಿತು ನಾಲ್ಕು ಪ್ರಮುಖ ಪಾತ್ರಗಳ ಕುರಿತು ನಡೆಯುವ ಕಥಾಹಂದರ ಹೊಂದಿರುವ ಚಿತ್ರ. ತಂದೆ – ಮಗನ, ಅಣ್ಣ – ತಂಗಿಯ ಸೆಂಟಿಮೆಂಟ್ ಇದೆ. ಲವ್ ಸ್ಟೋರಿ ಕೂಡ. ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳ್ಳುಳ ಈ ಚಿತ್ರಕ್ಕ “ಕೇರ್ ಆಫ್ ಶ್ರೀರಾಮಪುರ” ಎಂಬ ಅಡಿಬರಹವಿದೆ. ಚಿತ್ರಕ್ಕೆ ಪ್ರೋತ್ಸಾಹವರಲಿ ಎಂದು ಕೇಳಿಕೊಂಡರು

ನಾಯಕ ಪ್ರವೀಣ್ ಮಾತನಾಡಿ, ರಂಗಭೂಮಿ ಕಲಾವಿದ.ನಾಯಕನಾಗಿ ನಟಿಸಿರುವ ಮೊದಲ ಚಿತ್ರ “ಠಾಣೆ”. ಚಿತ್ರದ ಟ್ರೇಲರ್ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾಲತಿ ಸುಧೀರ್ ಅನಾವರಣವಾಗಿದ್ದು ತುಂಬಾ ಸಂತೋಷವಾಗಿದೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕಾಳಿ ಎಂದು ಮಾಹಿತಿ ನೀಡಿದರು.
ನಿರ್ಮಾಪಕಿ ಗಾಯತ್ರಿ ಮಾತನಾಡಿ ಇಡೀ ತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ಧನ್ಯವಾದ ಹೇಳಿದರು.
ಚಿತ್ರದಲ್ಲಿ ನಟಿಸಿರುವ ರೋಹಿತ್ ನಾಗೇಶ್, ಪಿ.ಡಿ.ಸತೀಶ್ ಚಂದ್ರ, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ ಹಾಗೂ ವಿತರಕ ವಿಜಯ್ ಸೇರಿದಂತೆ ಚಿತ್ರತಂಡದ ಸದಸ್ಯರು “ಠಾಣೆ” ಚಿತ್ರದ ಕುರಿತು ಮಾತನಾಡಿದರು.

ಪ್ರಶಾಂತ್ ಸಾಗರ್ ಛಾಯಾಗ್ರಹಣ ಹಾಗೂ ಹೆಸರಾಂತ ಸಂಕಲನಕಾರ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ.

