ರೋನಿ ಚಿತ್ರದ ಟ್ರೇಲರ್, ಹಾಡು ಬಿಡುಗಡೆ: ಕುತೂಹಲ ಹೆಚ್ಚಳ
ವಿಭಿನ್ನ ಕಥಾಹಂದರ ಹೊಂದಿರುವ ‘ರೋನಿ’ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.ಕುತೂಹಲ ಹೆಚ್ಚಳವಾಗುವಂತೆ ಮಾಡಿದೆ.
ಮುಂಬೈನಲ್ಲಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುತ್ತಿದ್ದ ಹಿರಿಯ ಸಿನಿಪಂಡಿತ ಎಂ.ರಮೇಶ್ ಹಾಗೂ ಪವನ್‍ಕುಮಾರ್ ಮೊದಲಬಾರಿ ಕನ್ನಡ ಚಿತ್ರಕ್ಕೆ ಲಕ್ಷೀ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‍ಪ್ರೈಸಸ್ ಮೂಲಕ ಬಂಡವಾಳ ಹೂಡಿದ್ದಾರೆ. ‘ದ ಹಂಟರ್’ ಎಂಬುದಾಗಿ ಅಡಿಬರಹದಲ್ಲಿ ಹೇಳಲಾಗಿದೆ.
ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕಿರಣ್.ಆರ್.ಕೆ ಹೇಳುವಂತೆ ಸಿನಿಮಾವು ಥ್ರಿಲ್ಲರ್, ಸೆಸ್ಪೆನ್ಸ್ ಹಾಗೂ ತಿರುವುಗಳಿಂದ ಕೂಡಿದೆ. ಉನ್ನತ ಮಟ್ಟದ ಕೇಸ್ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿ ಒದಗಿ ಬಂದು ವರ್ಗಾವಣೆಗೊಳ್ಳುತ್ತಾರೆ. ನಂತರ ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು ಇದಕ್ಕೆ ಸಂಬಂದವೇನು ಈಕೆಗೆ ನ್ಯಾಯ ಸಿಗುತ್ತದಾ ನಾಲ್ಕು ಪಾತ್ರಗಳು ಇರಲಿದ್ದು ರೋನಿ ಯಾರು ಎನ್ನುವುದು ಕ್ಲೈಮಾಕ್ಸ್‍ದಲ್ಲಿ ತಿಳಿಯುತ್ತದೆ ಅಂತ ಚಿಕ್ಕದಾಗಿ ಮಾಹಿತಿ ನೀಡಿದರು.
ನಾಯಕ ಧರ್ಮಕೀರ್ತಿರಾಜ್ ಮಾತನಾಡಿ ಕುಂಗುಫು ಚಂದ್ರು ಅದ್ಬುತವಾಗಿ ಸಾಹಸ ಮಾಡಿಸಿದ್ದಾರೆ. ಇತ್ತೀಚೆಗೆ ನನ್ನ ಚಿತ್ರಗಳು ಹಾಗೆ ಬಂದು ಹೋಗುತ್ತಿದೆ. ಪ್ರಚಾರದ ಕೊರತೆ ಇರಬಹುದು. ನಾವುಗಳು ಯಾವುದೇ ನಿರ್ಮಾಪಕರಿಗೆ ತೊಂದರೆ ಕೊಡುತ್ತಿಲ್ಲ. ಜನ ಚಿತ್ರ ನೋಡಿ ಚೆನ್ನಾಗಿದೆ ಅಂತ ಹೇಳಿದರೂ, ಒಮ್ಮೋಮ್ಮೆ ಈ ರೀತಿ ಆಗುತ್ತದೆ. ಇದರಲ್ಲಿ ಎಲ್ಲರ ಶ್ರಮ ಬೇರೆ ತರಹ ಇದೆ. ಚಿರಂಜೀವಿಸರ್ಜಾ ಅವರ ಸಿನಿಮಾವು ಅದೇ ದಿನದಂದು ತೆರೆಗೆ ಬರುತ್ತಿದೆ. ಅವರಿಗೆ ಗೌರವ ಸೂಚಿಸಲು ಯಾವುದೇ ಚಿತ್ರಗಳು ಬಾರದೆ ಇದ್ದರೆ ಚೆನ್ನಾಗಿರುತ್ತಿತ್ತು ಎಂದರು.
ರಾ’ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಈ ಚಿತ್ರದ ಮೂಲಕ ನನ್ನ ಇಮೇಜ್ ಬದಲಾಗುವ ನಿರೀಕ್ಷೆ ಇದೆ. ಆಕ್ಷನ್, ಲವ್ ಸ್ಟೋರಿ ಇಂದ ಕ್ರೈಂ ಥ್ರಿಲ್ಲರ್ ಚಿತ್ರ ಮಾಡಿದ್ದೇನೆ. ಪ್ರಚಾರದ ಕೊರತೆಯಿಂದ ಚಿತ್ರ ತೆರೆಗೆ ಬಂದಿದ್ದೇ ಗೊತ್ತಾಗುವುದಿಲ್ಲ. ಪ್ರಚಾರ ಮಾಡಿ ಎಂದು ನಿರ್ಮಾಪಕರಿಗೆ ಮನವಿ ಮಾಡಿದರು.
ಮನೆಯಿಂದ ದುಡ್ಡು ಹಾಕಿ ಪ್ರಚಾರ ಮಾಡುವ ಶಕ್ತಿ ಇಲ್ಲ. ಚಿತ್ರ ತಂಡ ಎಲ್ಲಿಗೆ ಬೇಕಾದರೂ ಹೋಗಿ ಪ್ರಚಾರ ಮಾಡಲು ಸಿದ್ದ. ಸಿನಿಮಾಕ್ಕೆ ಬಂದ ನಂತರ ಚಿತ್ರ ಚೆನ್ನಾಗಿದೆ ಅಥವಾ ಇಲ್ಲ ಎನ್ನುವುದನ್ನು ಪ್ರೇಕ್ಷಕರು ನಿರ್ದರಿಸಲಿ ಎಂದರು. ಇದಕ್ಕೆ ಮತ್ತೊಬ್ಬ ನಟಿ ತಿಲಕ್ ಕೂಡ ಇದೇ ವಿಷಯಕ್ಕೆ ಧ್ವನಿಗೂಡಿಸಿ ಪೆÇಲೀಸ್ ಅಧಿಕಾರಿ ಪಾತ್ರ ಎಂದರು.
ನಾಯಕಿ ಋತ್ವಿ ಪಟೇಲ್,ಸಿನಿಮಾದಲ್ಲಿ ನಟಿಸುವ ಕನಸು ನಸಾಗಿದೆ. ನಟ ಧರ್ಮ ಚಿತ್ರೀಕರಣದ ವೇಳೆ ಸಹಕಾರ ನೀಡಿದ್ದಾರೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಚಿತ್ರದಲ್ಲಿ ನಟಿಸಿರುವ ವರ್ಧನ್, ನಾಯಿ ಜೊತೆ ಪೈಟು ಮಾಡಿದ್ದೇನೆ ಕೊಲೆಗಾರ ನಾವಲ್ಲ. ಬೇರೆ ಇದ್ದಾರೆ ಅವರು ಯಾರು ಎನ್ನುವುದನ್ನು ಚಿತ್ರದಲ್ಲಿ ನೋಡಿ.ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ ಎಂದರು
ವಿತರಕ ಕಮರ್ ಮಾತನಾಡಿ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಸಾಹಿತಿ ಕಿನ್ನಾಳ್‍ರಾಜ್, ಸಂಗೀತ ಸಂಯೋಜಕ ಆಕಾಶ್‍ಪರ್ವ, ಕಲರಿಸ್ಟ್ ಕಿಶೋರ್ ಹಾಜರಿದ್ದು ಅನುಭವಗಳನ್ನು ಹಂಚಿಕೊಂಡರು.
ತಾರಾಗಣದಲ್ಲಿ ಕೀರ್ತಿರಾಜ್, ರಘುಪಾಂಡೇಶ್ವರ್, ಬಲರಾಜವಾಡಿ, ರತನ್‍ಕರತಮಾಡ ಮುಂತಾದವರು ನಟಿಸಿದ್ದಾರೆ. ಹಾಗೂ ಲಿಯೋ ಎನ್ನುವ ನಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸಿದೆ. ಛಾಯಾಗ್ರಹಣ ವೀನಸ್‍ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ತಾಂತ್ರಿಕ ಮುಖ್ಯಸ್ಥ ಧರಂ.ಕೆ.ಸವ್‍ಲಾನಿ ಅವರದಾಗಿದೆ.
ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ.