Samyukta Horanada as a lawyer in "Love Birds".
“ಲವ್ ಬರ್ಡ್ಸ್” ಚಿತ್ರದಲ್ಲಿ ಲಾಯರ್ ಆದ ಸಂಯುಕ್ತ ಹೊರನಾಡು
ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲಾ ಕೇಸ್ ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ಲಾಯರ್ ಆಗಿ ಅಭಿನಯಿಸಿರುವ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಈಕೆ ನಾಯಕ ಹಾಗೂ ನಾಯಕಿ ದೀಪಕ್ – ಪೂಜಾ ಇಬ್ಬರಿಗೂ ಗೆಳತಿ ಕೂಡ.
ಯಂಗ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಅವರ ಪಾತ್ರಕ್ಕೆ ಸರಿಹೊಂದುವ ಕಾಸ್ಟ್ಯೂಮ್ಸ್ ಗಳನ್ನು ಬಳಸಿಕೊಳ್ಳಲಾಗಿದೆ ಹಾಗೂ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಮೊದಲ ಹಾಡು ಜನವರಿ 22 ರಂದು ಬಿಡುಗಡೆಯಾಗಲಿದೆ.