Renuka is an online teacher through "Zoom Call".
“ಜೂಮ್ ಕಾಲ್” ಮೂಲಕ ಆನ್ ಲೈನ್ ಶಿಕ್ಷಕಿಯಾದ ರೇಣುಕಾ
“ಜೂಮ್ ಕಾಲ್” ಮೂಲಕ ಆನ್ ಲೈನ್ ಶಿಕ್ಷಕಿಯಾದ ರೇಣುಕಾ
ಹೊಸಬರು ಸೇರಿಕೊಂಡು ಮಾಡುತ್ತಿರುವ “ಜೂಮ್ ಕಾಲ್” ಚಿತ್ರದಲ್ಲಿ ಆನ್ ಲೈನ್ ಶಿಕ್ಷಕಿಯಾಗಿ ರೇಣುಕಾ ಅಭಿನಯಿಸಿದ್ದಾರೆ.ವಿಷ್ಣುವರ್ಧನ್, ಗಣೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಲ್ಲಿ ನಟಿಸಿರುವ ರೇಣುಕಾ ಈಗ ಹೊಸಬರ ಈ ಚಿತ್ರದಲ್ಲಿ ನಟಿಸಿದ್ದಾರೆ.
ಮಹೇಶ್ ಹೆಚ್ ಎಂ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಚಿತ್ರೀಕರಣ ಮುಕ್ತಾಯವಾಗಿದೆ.
ಶ್ರೀವಾರಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಕೊಪ್ಪಳ್ ಛಾಯಾಗ್ರಹಣ ಹಾಗೂ ಸಂಕಲನ, ವಿಜಯ್ ರಾಜ್ ಅವರ ಸಂಗೀತ ನಿರ್ದೇಶನವಿದೆ.
ರೇಣುಕಾ, ಲಕ್ಷ್ಮೀ ಅರಸ್, ರೂಪ ಮನಕೂರ್, ಅರ್ಜುನ್, ಮಹೇಂದ್ರ, ಪರಮ್ ಮುಂತಾದವರು “ಜೂಮ್ ಕಾಲ್” ನಲ್ಲಿ ಅಭಿನಯಿಸಿದ್ದಾರೆ.