ಬೆಂಗಳೂರಿಗೆ ಬದಲಾದ ಕನ್ನಡ ಚಲನಚಿತ್ರ ಕಪ್
ಕನ್ನಡದ ನಟರ ಜೊತೆ ಕ್ರಿಕೆಟಿಗರು ಭಾಗಿ
ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇವಲ ನಟರಷ್ಟೇ ಆಡುವುದಿಲ್ಲ, ಸಿನಿಮಾ ರಂಗಕ್ಕೆ ಸೇರಿದ ಪ್ರತಿಯೊಬ್ಬ ತಂತ್ರಜ್ಞ ಇದರ ಭಾಗವಾರಿರಲಿದ್ದಾರೆ. ಇದೇ 26 ರಂದು ತಂಡಗಳಿಗೆ ಆಟಗಾರರನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕನ್ನಡ ಪ್ರತಿಯೊಬ್ಬ ಮಂದಿಗೆ ಕ್ರಿಕೆಟ್ ಆಡುವ ಹಂಬಲವಿರಲಿದೆ. ಎಲ್ಲರನ್ನೂ ಸೇರಿಸಿಕೊಳ್ಳಲಾಗುವುದಿಲ್ಲ. ಇದೇ ಕಾರಣಕ್ಕೆ ಯಾರಿಗೂ ಪಕ್ಷಪಾತವಾಗದಂತೆ ನೋಡಿಕೊಳ್ಳಲು ಲಕ್ಕಿ ಡಿಪ್ ಮೂಲಕ ಆಟಗಾರರನು ಆಯ್ಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
26 ರಂದು ನಡೆಯಲಿರುವ ಲಕ್ಕಿ ಡಿಪ್‍ನಲ್ಲಿ 6 ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಪ್ರತಿ ತಂಡಕ್ಕೆ 16 ಆಟಗಾರರು ಇರಲಿದ್ದಾರೆ. ಅವರಲ್ಲಿ ಯಾರು ನಾಯಕ ಆಗಬೇಕು ಎನ್ನುವುದನ್ನು ಆಯಾ ತಂಡದ ಮೆಂಟರ್ ನಿರ್ಧಾರ ಮಾಡಲಿದ್ಧಾರೆ ಎಂದು ತಿಳಿಸಿದ್ದಾರೆ.
ಕನ್ನಡ ಚಲನಚಿತ್ರ ಕಪ್ ಎಲ್ಲರನ್ನೂ ಒಳಗೊಂಡ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಪಿಎಲ್ ಆಟಗಾರರು ಭಾಗಿಯಾಗಲಿದ್ದಾರೆ. ಅಭಿಮಾನಿಗಳಿಗೆ ಹಬ್ಬದ ಸಂಬ್ರಮ ಸೃಷ್ಠಿಸುವ ಉದ್ದೇಶವಿದೆ ಎಂದರು.
ಮೈಸೂರಿನಲ್ಲಿ ಕ್ರಿಕೆಟ್
ಮೈಸೂರಿನ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಕ್ರಿಕೆಟ್ ನಡೆಯಲಿದ್ದು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಭಾಗಿಯಾಗಲಿದ್ದಾರೆ. ಯಾರೆಲ್ಲಾ ಭಾಗಲಿದ್ದಾರೆ ಎನ್ನುವುದು ಸದ್ಯದಲ್ಲಿಯೇ ತಿಳಿಯಲಿದೆ ಎಂದರು.
ಇದೇ 26 ರಂದು ನಡೆಯಲಿರುವ ಲಕ್ಕಿಡಿಪ್ ನಲ್ಲಿ ಕೆಲವು ಅಂತರಾಷ್ಟ್ರೀಯ ಆಟಗಾರರು ದೈಹಿಕವಾಗಿ ಮತ್ತೆ ಕೆಲವರು ವರ್ಚುವಲ್ ಮೂಲಕ ಭಾಗಿಯಾಗಲಿದ್ದಾರೆ, ಅವರ ಘನತೆಗೆ ಕುಂದು ಬರದೆ ರೀತಿ ಆಯೋಜನೆ ಮಾಡಲಾಗುತ್ತಿದೆ ಇದೇ ವೇಳೆ ನಟಿಯರು ಕೂಡ ಆಡಬೇಕು ಎಂದು ಬಯಸಿದ್ದಾರೆ. ಯಾರಿಗೆಲ್ಲಾ ಅವಕಾಶ ನೀಡಬೇಕು, ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಹಿರಿಯ ನಟ ಶಿವರಾಜ್ ಕುಮಾರ್ ಅವರಿಗೆ ಕುಟುಂಬದ ಮದುವೆ ಕಾರ್ಯಕ್ರಮ ಇರುವುದರಿಂದ ಅವರಿನ್ನೂ ಖಚಿತ ಪಡಿಸಿಲ್ಲ. ಬಂದರೆ ಕಂಡಿತ ಅವರೂ ಆಡುತ್ತಾರೆ ಎಂದರು.