Sandalwood Salaga Vijay Kumar New Movie Poster Unveiled

ಸ್ಯಾಂಡಲ್‍ ವುಡ್ ಸಲಗ ವಿಜಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್ ಅನಾವರಣ - CineNewsKannada.com

ಸ್ಯಾಂಡಲ್‍ ವುಡ್ ಸಲಗ ವಿಜಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್ ಅನಾವರಣ

ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್ ಅವರಿಗೆ 50ನೇ ಹುಟ್ಟುಹಬ್ಬದ ಸಂಭ್ರಮ ಒಂದೆಡೆಯಾದರೆ ಹಿರಿಯ ಪುತ್ರಿ ಮೋನಿಕಾ ಅವರನ್ನು ಕನ್ನಡ ಚಿತ್ರರಂದಕ್ಕೆ ಪರಿಚಯಿಸುತ್ತಿದ್ದಾರೆ. ಮಗಳ ಬಣ್ಣದ ಬದುಕಿನ ರಂಗ ಪ್ರವೇಶ,ತಂದೆಯಾಗಿ ವಿಜಯ್ ಕುಮಾರ್ ಅವರಿಗೆ ವಿಶೇಷತೆಯೂ ಕೂಡ.

50ನೇ ಹುಟ್ಟುಹಬ್ಬವನ್ನು ತಂದೆ-ತಾಯಿಯ ಪುಣ್ಯಭೂಮಿ ಇರುವ ಕುಂಬಾರಹಳ್ಳಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ಇದೇ ವೇಳೆ ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್ ಅಭಿನಯದ 29ನೇ ಚಿತ್ರದ ಪೋಸ್ಟರ್ ಅನಾವರಣ ಮಾಡಲಾಗಿದೆ.

ಇದು ಆಳಿದವರ ಕಥೆಯಲ್ಲ.. ಅಳಿದು ಉಳಿದವರ ಕಥೆ.. ಅನ್ನೋ ಅಡಿ ಬರಹ ಕೊಟ್ಟಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮತ್ತು ನಿರೀಕ್ಷೆಯನ್ನು ಆರಂಭದಲ್ಲಿಯೇ ಹುಟ್ಟುಹಾಕಿದೆ.

ಒಂದು ಕಡೆ ಹುಲಿ ಮತ್ತೊಂದು ಕಡೆ ಮುಧೋಳ ನಾಯಿ ಮುಖಾಮುಖಿಯಾಗುವ ಚಿತ್ರಣ ಈ ಪೋಸ್ಟರ್‍ನಲ್ಲಿ ಇದೆ. ಕಾಟೇರ ಚಿತ್ರಕ್ಕೆ ಕಥೆ ಬರೆದು ಯಶಸ್ಸಿನಲ್ಲಿರುವ ಜಡೇಶ್ ಹಂಪಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಭೀಮ ಚಿತ್ರ ನಿರ್ಮಾಣದಲ್ಲಿ ಭಾಗಿದಾರರು ಆಗಿರು ವಿತರಕ ಜಗದೀಶ್ ಗೌಡ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ

ಈ ಸಿನಿಮಾದಲ್ಲಿ ವಿಜಯ್ ಕುಮಾರ ಅವರ ಹಿರಿಯ ಮಗಳು ಮೋನಿಕಾ ತಂದೆಯ ಜೊತೆಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ವಿಶೇಷ.ಈ ಚಿತ್ರದ ಕುರಿತ ಇನ್ನಷ್ಟು ವಿಶೇಷ ವಿಚಾರಗಳನ್ನ ಭೀಮ ಚಿತ್ರ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin