“ಜಸ್ಟ್ ಪಾಸ್” ಚಿತ್ರದ ಟೀಸರ್ , ಹಾಡು ಬಿಡುಗಡೆ: ನಿರೀಕ್ಷೆ ಹೆಚ್ಚಳ

ಪ್ರತಿಭಾನ್ವಿತ ನಿರ್ದೇಶಕ ಕೆ.ಎಂ ರಘು ಆಕ್ಷನ್ ಕಟ್ ಹೇಳಿರುವ “ಜಸ್ಟ್ ಪಾಸ್ ” ಚಿತ್ರದ ಟೀಸರ್ ಹಾಗು ಹಾಡು ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಶಾಸಕ ಪ್ರದೀಪ್ ಈಶ್ವರ್ ಮತ್ತಿತರರು ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಕೆ.ಎಂ ರಘು,, ಸಿನಿಮಾ ಮಾಡಿದಾಗ ಪ್ರಚಾರವೂ ಬೇಕು, ಜಸ್ಟ್ ಪಾಸ್ ಆದವರಿಗೆ ಪ್ರಿನ್ಸಿಪಾಲ್,ಕಾಲೇಜು ಆರಂಭ ಮಾಡಿದ ಕಥೆಯನ್ನು ಆಧರಿಸಿ ಚಿತ್ರ ಮಾಡಲಾಗಿದೆ. ತಮ್ಮ ಜೀವನದಲ್ಲಿ ಸ್ಪೂರ್ತಿಗಾಗಿ ಶಾಸಕ ಪ್ರದೀಪ್ ಈಶ್ವರ್ ಮತ್ತು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ ಎಂದರು.
ವಿಶ್ವೇಶ್ವರ ಭಟ್ ಮಾತನಾಡಿ, ನಿರ್ದೇಶಕ ರಘು ಅವರು ಚಿತ್ರದ ಹಾಡು ತೋರಿಸಿ ಕಥೆ ಹೇಳಿದರು, ಚೆನ್ನಾಗಿ ಮೂಡಿ ಬಂದಿದೆ ಎನ್ನುವ ವಿಶ್ವಾಸವಿದೆ. ಒಳ್ಳೆಯ ಕಥೆಗಳ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಬೇಕು. ಜಸ್ಟ್ ಪಾಸ್ ಆದ ಮಂದಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ, ಜೀವನದಲ್ಲಿ ಮುಂದೆ ಬಂದವರು ಅವರೇ,ಅದಕ್ಕೆ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಮಾಡಿದ ಕೆಲಸದ ಬಗ್ಗೆ ಜನರಿಗೆ ಹೇಳಿಕೊಳ್ಳಬೇಕು. ನಮ್ಮ ಕೆಲಸದ ಬಗ್ಗೆ ನಾವೇ ಹೇಳಿಕೊಳ್ಳದಿದ್ದರೆ ನಮ್ಮ ಬಗ್ಗೆ ಬೇರೆ ಯಾರು ಹೇಳಲು ಸಾಧ್ಯ. ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದೀರ, ನಿಮ್ಮ ಚಿತ್ರದ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ಜನರಿಗೆ ಮಾಡಿದ ಕೆಲಸ ಹೇಳಿ, ಜನರನ್ನು ಚಿತ್ರಮಂದಿರಕ್ಕೆ ಕರೆ ತರುವ ಕೆಲಸ ಮಾಡಿ ಎಂದರು

ನಿರ್ಮಾಪಕ ಕೆ.ವಿ ಶಶಿಧರ್, , ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ.ಹೆಸರಷ್ಟೇ ಜಸ್ಟ್ ಪಾಸ್, ಚಿತ್ರ ಫಸ್ಟ್ ಕ್ಲಾಸ್, ವಿದ್ಯಾರ್ಥಿಗಳು ಚಿತ್ರ ನೋಡಿದರೆ ಅನುಕೂಲವಾಗಲಿದೆ ಎಂದರು
ಹಿರಿಯ ಕಲಾವಿದ ಸುರೇಂದ್ರ ಪ್ರಸಾದ್ ಮಾತನಾಡಿ ಯಾರು ತಂದೆ ತಾಯಿ ಗುರುಗಳಿಗೆ ಗೌರವ ಕೊಟ್ಟವರು ಮುಂದೆ ಬರ್ತಾರೆ, ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಅವಕಾಶ ಮತ್ತು ಹಣ ನೀಡಿದ ಇಬ್ಬರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು

ನಾಯಕ ಶ್ರೀ ಮಾತನಾಡಿ,ಹಾಡು ಚೆನ್ನಾಗಿ ಬಂದಿದೆ. ನಾಲ್ಕನೇ ಸಿನಿಮಾದಲ್ಲಿ ಡಾನ್ಸ್ ನಂಬರ್ ಸಿನಿಮಾದಲ್ಲಿಯೂ ಸಿಗುತ್ತೆ. ಚಿತ್ರ ಚೆನ್ನಾಗಿ ಬಂದಿದೆ ಎಂದರು
ನಾಯಕಿ ಪ್ರಣತಿ, ಅವಕಾಶ ಕೊಟ್ಟಿದ್ಖಕ್ಕೆ ಇಡೀ ತಂಡಕ್ಕೆ ಧನ್ಯವಾದ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಪ್ರೀತಿ ಪ್ರೋತ್ಸಾಹ ಇಡೀ ತಂಡದ ಮೇಲಿರಲಿ ಎಂದು ಕೇಳಿಕೊಂಡರು.

ಜಸ್ಟ್ ಪಾಸ್ ಚಿತ್ರದ ಇಡೀ ಬಳಗ ಹಾಜರಿತ್ತು