Sanjana Anand is the female lead for the Yuvraj Kumar starrer 'Ekka'

ಯುವರಾಜ್ ಕುಮಾರ್ ನಟನೆಗೆ ‘ಎಕ್ಕ’ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ - CineNewsKannada.com

ಯುವರಾಜ್ ಕುಮಾರ್ ನಟನೆಗೆ ‘ಎಕ್ಕ’ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ

ಯುವ ರಾಜ್ ಕುಮಾರ್ ನಟನೆಯಲ್ಲಿ ಮೂಡಿ ಬರುತ್ತಿರುವ ರೋಹಿತ್ ಪದಕಿ ಸಾರಥ್ಯದ ಎಕ್ಕ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಜೂನ್ 6ಕ್ಕೆ ಸಿನಿಮಾವನ್ನು ತೆರೆಗೆ ತರುವ ತಯಾರಿಯಲ್ಲಿರುವ ಚಿತ್ರತಂಡಕ್ಕೆ ನಾಯಕಿ ಸಂಜನಾ ಆನಂದ್ ಸೇರ್ಪಡೆಯಾಗಿದ್ದಾರೆ.

ಪಿ ಅರ್ ಕೆ ಪ್ರೊಡಕ್ಷನ್ಸ್ ಕೆ ಆರ್ ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‍ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಎಕ್ಕ’ ಸಿನಿಮಾದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಇದೀಗ ಚಿತ್ರತಂಡ ಮತ್ತೊಬ್ಬ ನಾಯಕಿ ಪರಿಚಯಿಸಿದೆ.

ಸಲಗ ಸಿನಿಮಾದ ಸುಂದರಿ ಸಂಜನಾ ಆನಂದ್ ಎಕ್ಕ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ತೊದಲು ಪ್ರೀತಿಯ ಮೊದಲ ಪರಿಚಯವಾಗಿ ಚಿತ್ರತಂಡ ಸಂಜನಾ ಆನಂದ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ.

ಪುನೀತ್ ರುದ್ರನಾಗ್ ‘ಎಕ್ಕ’ ತಂಡ ಸೇರಿಕೊಂಡಿದ್ದರು. ಸಂಜನಾ ಆನಂದ್ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಟಿಸಲಿದ್ದಾರೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದ ಸಂಜನಾ ನಂತರ ದುನಿಯಾ ವಿಜಯ್ ಕುಮಾರ್ ಅವರೊಂದಿಗೆ ಸಲಗ ಚಿತ್ರದಲ್ಲಿ ನಟಿಸಿದರು. ಸದ್ಯ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ಎಕ್ಕ ಚಿತ್ರತಂಡ ಸೇರ್ಪಡೆಯಾಗಿದ್ದಾರೆ.

ಟೈಟಲ್‍ಗೆ ತಕ್ಕಂತೆ ಎಕ್ಕ ಪಕ್ಕಾ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ವಿಕ್ರಂ ಹತ್ವಾರ್ ಕಥೆ ಆಧರಿಸಿ ಚಿತ್ರಕ್ಕೆ ರೋಹಿತ್ ಪದಕಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸತ್ಯ ಹೆಗಡೆ ಸಿನಿಮಾಟೋಗ್ರಫಿ, ದೀಪು.ಎಸ್. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ಅಮರ್ ಪ್ರೊಡಕ್ಷನ್ಸ್ ವಿನ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin