“ಗಜರಾಮ” ಚಿತ್ರದ “ಸಾರಾಯಿ ಶಾಂತಮ್ಮ” ಲಿರಿಕಲ್ ವಿಡಿಯೋ ಬಿಡುಗಡೆ

ಪ್ರತಿಭಾನ್ವಿತ ನಟ ರಾಜವರ್ಧನ್ ಮತ್ತು ತಪಸ್ವಿನಿಪೂಣಚ್ಚ ನಾಯಕ,ನಾಯಕಿಯಾಗಿ ಕಾಣಿಸಿಕೊಂಡಿರುವ ” ಗಜರಾಮ” ಚಿತ್ರದ ಸಾರಾಯಿ ಶಾಂತಮ್ಮ ಲಿರಿಕಲ್ ಹಾಡು ಬಿಡುಗಡೆಯಾಗಿದೆ.ಈ ಹಾಡಿನ ತುಪ್ಪದ ಬೆಡಗಿ ರಾಗಿನಿ ದ್ವಿವೇದಿ ಮೈ ಚಳಿ ಬಿಟ್ಟು ಕುಣಿದಿದ್ದಾರೆ.

ಈ ಹಾಡಿನಲ್ಲಿ ರಾಜವರ್ಧನ್ ಮತ್ತು ತುಪ್ಪದಬೆಡಗಿ ರಾಗಿಣಿ ಹೆಜ್ಜೆಹಾಕಿದ್ದಾರೆ. ಮಾದಕ ಕಂಠದ ಗಾಯಕಿ ಮಂಗ್ಲಿ ಮತ್ತು ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲ ಹಾಡಿಗೆ ಧ್ವನಿಯಾಗಿದ್ದಾರೆ. ಮನೋ ಮೂರ್ತಿ ಅವರ ಸಂಗೀತ ಚಿತ್ರಕ್ಕಿದೆ. ಚಿನ್ಮಯಿ ಬಾವಿಕರೆ ಬರೆದಿರುವ ಸಾಹಿತ್ಯಕ್ಕೆ ನೃತ್ಯ ನಿರ್ದೇಶಕ ಧನಂಜಯ ಹಾಡಿಗೆ ನಾಯಕ ನಾಯಕಿಯರನ್ನು ಕುಣಿಸಿದ್ದಾರೆ
“ಗಜರಾಮ” ಚಿತ್ರದ ಟೀಸರ್‍ಗೆ ಸಿಕ್ಕ ಅಭೂತಪೂರ್ವ ಯಶಸ್ವಿನಬಳಿಕ “ಸಾರಾಯಿ ಶಾಂತಮ್ಮ” ಲಿರಿಕಲ್ ಹಾಡನನ್ನು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮತ್ತಿತರರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಗಜರಾಮ ಚಿತ್ರ ಡಿಸೆಂಬರ್ 27 ರಂದು ತೆರೆಗೆ ಬರಲಿದೆ ಎನ್ನುವುದನ್ನು ತಂಡ ಪ್ರಕಟಿಸಿದೆ. ಈ ವೇಳೆ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು
ನಟಿ ರಾಗಿಣಿ ಮಾತನಾಡಿ, ತುಂಬಾ ಖುಷಿಯಾಗುತ್ತಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ. 1 ವರ್ಷದಿಂದ ಈ ಚಿತ್ರದಲ್ಲಿ ಜರ್ನಿ ಮಾಡಿಕೊಂಡು ಬರುತ್ತಿದ್ದೇವೆ. ಹಾಡಿನಲ್ಲಿ ರಾಜ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ. ಮನೋಮಮೂರ್ತಿ ಸರ್ ಇಷ್ಟು ಒಳ್ಳೆ ಮ್ಯೂಸಿಕ್ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಈ ಹಾಡು ಕೇಳಿ ಎಲ್ಲರಿಗೂ ಒಂದೊಳ್ಳೆ ಪಾಸಿಟಿವ್ ಬಂದಿದೆ ಎಂದುಕೊಳ್ಳುತ್ತೇನೆ. ಸಿನಿಮಾ ಮಾಡೋದು ತುಂಬಾ ಕಷ್ಟವಾಗಿದೆ. ಬಹಳ ತಾಳ್ಮೆಯಿಂದ, ಹಾರ್ಡವರ್ಕ್ ಮಾಡಿದ್ದಾರೆ.,ವರ್ಷದ ಸೂಪರ್ ಹಿಟ್ ಅಗಲಿದೆ. ಇಡೀ ಡ್ಯಾನ್ಸ್ ರ್ ಕಷ್ಟಪಟ್ಟಿದ್ದಾರೆ. ನಾಯಕ ರಾಜ್ ವರ್ಧನ್ ಚಿತ್ರಕ್ಕಾಗಿ ಶ್ರಮಪಟ್ಟಿದ್ದಾರೆ ಎಂದರು

ರಾಜವರ್ಧನ್ ಮಾತನಾಡಿ, ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೇವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಗಜರಾಮ ಸಿನಿಮಾ ಒಂದು ಕಡೆಯಾದರೆ, ಈ ಸಾಂಗ್ ಒಂದು ಕಡೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ. ಸಾಮಾನ್ಯವಾಗಿ ಈ ರೀತಿ ಹಾಡನ್ನು ಮಾಡಲು ಕಷ್ಟ ಆಗುತ್ತದೆ. ಸಾಂಗ್ ತುಂಬಾ ಅದ್ಭುತವಾಗಿ ಬಂದಿದೆ. ಚಿನ್ಮಯಿ ಸರ್ ಒಳ್ಳೆ ಲಿರಿಕ್ಸ್ ಬರೆದುಕೊಟ್ಟರು. ಧನು ಮಾಸ್ಟರ್ ಅದ್ಭುತ ಕೊರಿಯೋಗ್ರಫಿ ಮಾಡಿದ್ದಾರೆ. ನಿರ್ದೇಶಕರು ಸಿನಿಮಾಗಾಗಿ ಸಾಕಷ್ಟು ದುಡಿದಿದ್ದಾರೆ, ಇಡೀ ತಂಡ ಸಾಕಷ್ಟು ಎಫರ್ಟ್ ಹಾಕಿ ಚಿತ್ರವನ್ನು ಚೆನ್ನಾಗಿ ಮಾಡಿದ್ದೇವೆ ಎಂದು ಹೇಳಿದರು.

ನಟಿ ತಪಸ್ವಿನಿ ಪೂಣಚ್ಚ ಮಾತನಾಡಿ, ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ, ನಾಲ್ಕು ಹಾಡುಗಳಿವೆ, ಇಬ್ಬರು ನಾಯಕರು ಯಾರ ಜೊತೆಗೆ ನನ್ನ ಪಾತ್ರ ಎನ್ನುವುದು ಕುತೂಹಲಸ ಸಂಗತಿ, ಚಿತ್ರದ ಪಾತ್ರದ ಬಗ್ಗೆ ಹೆಚ್ಚು ವಿವರ ನೀಡುವಂತಿಲ್ಲ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದರು
ನಟ ದೀಪಕ್ ಮಾತನಾಡಿ, ಗಜರಾಮ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಇದರಲ್ಲಿ ಎಸಿಪಿ ಪಾತ್ರ. ಇತ್ತೀಚೆಗೆ ತೆಲುಗು ಮಲೆಯಾಳಂನಲ್ಲಿ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಮುಂದೆ ಕನ್ನಡದಲ್ಲಿಯೂ ಒಳ್ಳೆಯ ಪಾತ್ರ ಸಿಗಬಹುದು ಎನ್ನುವ ವಿಶ್ವಾಸ ಹೊರಹಾಕಿದರು
ನಿರ್ದೇಶಕ ಸುನೀಲ್ ಕುಮಾರ್ ಮಾತನಾಡಿ, ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ, ಡಿಸೆಂಬರ್ 27ಕ್ಕೆ ಚಿತ್ರವನ್ನು ತೆರೆಗೆ ತರಲಾಗುತ್ತಿದೆ, ಇನ್ನೂ ಟ್ರೈಲರ್ ಮತ್ತು ಪ್ರೀ ರಿಲೀಸ್ ದಿನದ ಕಾರ್ಯಕ್ರಮಗಳಲ್ಲಿ ಚಿತ್ರದ ಬಗ್ಗೆ ಹಂತ ಹಂತವಾಗಿ ಮಾಹಿತಿ ನೀಡುತ್ತೇವೆ. ನಿರ್ಮಾಪಕರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಹಾಡಿನ ಚಿತ್ರೀಕರಣ ಸಮಯದಲ್ಲಿ ಇಡೀ ತಂಡ ಮಾಸ್ಕ್ ಹಾಕಿಕೊಂಡು ಕೆಲಸ ಮಾಡಿದೆವು. ಅದರೆ ನಾಯಕ ರಾಜವರ್ಧನ್ ಮತ್ತು ನಟಿ ರಾಗಿಣಿ ಮಾಸ್ಕ್ ಇಲ್ಲದೆ ಧೂಳಿನಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಎಂದು ಹೇಳಿದರು.

ನಿರ್ಮಾಪಕರದ ನರಸಿಂಹಮೂರ್ತಿ ಮಾತನಾಡಿ, ಹಾಡಿಗೆ 50 ಲಕ್ಷ ಖರ್ಚಾಗಿದೆ. ನಟ ರಾಜವರ್ದನ್ ಮತ್ತು ನಟಿ ರಾಗಿಣಿ ಬೆಂಕಿ ಇದ್ದ ಹಾಗೆ.ನಾಲ್ಕು ಬಾರಿ ಬದಲಾಗಿದೆ. ಅಂತಿಮವಾಗಿ ಹಾಡು ಮಾಡಿದ್ದೇವೆ. ಎರಡು ಹಾಡಿನಲ್ಲಿ ಎರಡು ಮೂರು ಬಾರಿ ಬದಲಾವಣೆ ಮಾಡಿದ್ದೇವೆ. ಹಾಡು ಚಿತ್ರಕ್ಕೆ ಆಹ್ವಾನ ಪತ್ರಿಕೆ ಇದ್ದ ಹಾಗೆ, ಡಿಸೆಂಬರ್ 27ಕ್ಕೆ ಬಿಡುಗಡೆ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ ಎಂದರು.
ಮಲ್ಲಿಕಾರ್ಜುನ ಕಾಶಿ ಹಾಗು ಕ್ಸೇವಿಯರ್ ಫರ್ನಾಂಡೀಸ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ
ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ,ಹಾಡು ಬರೆದಿರುವ ಚಿನ್ಮಯ್ ಬಾವಿಕರೆ , ನೃತ್ಯ ನಿರ್ದೇಶಕ ಧನಂಜಯ ಅವರು ಚಿತ್ರ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಂಡರು