ಗಂಡು ಗರ್ಭಿಣಿ ಗೆ ಸೀಮಂತ : ” ನಿಮಗೊಂದು ಸಿಹಿಸುದ್ದಿ” ಫೆಬ್ರವರಿ 21 ಕ್ಕೆ ತೆರೆಗೆ
ಕನ್ನಡ ಚಿತ್ರರಂಗದಲ್ಲಿ ತೀರಾ ವಿಭಿನ್ನ ಮತ್ತು ವಿಶೇಷತೆಯಿಂದ ಕೂಡಿರುವ ಕಥಾ ವಸ್ತುಗಳು ಕನ್ನಡ ಚಿತ್ರರಂಗದಲ್ಲಿ ಆಗಾಗ ಬರುತ್ತಿವೆ. ಅದರಲ್ಲಿ ಹಿಂದೆಂದೂ ಯೋಚಿಸಿದ ಹೊಸತನದ ಕಥೆಯೊಂದಿಗೆ ” ನಿಮಗೊಂದು ಸಿಹಿ ಸುದ್ದಿ ” ಹೆಸರಲ್ಲಿ ಚಿತ್ರ ಇದೇ ಫೆಬ್ರವರಿ 21 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
ಗಂಡಸು ಗರ್ಭಿಣಿ ಆಗುವ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ರಘು ಭಟ್, ನಿರ್ದೇಶನ ಮಾಡುವ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಚಿತ್ರ ಪೆಬ್ರವರಿ 21ಕ್ಕೆ ತೆರೆಗೆ ಬರಲಿದೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಗರ್ಭಿಣಿ ಆಗಿರುವ ಗಂಡಸಿಗೆ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗಂಡು ಗರ್ಭಿಣಿಗೆ ಗಂಡಸರೇ ಹೆಚ್ಚಾಗಿ ಶಾಸ್ತ್ರ ಮಾಡಿದ್ದು ವಿಶೇಷವಾಗಿತ್ತು
ಚಿತ್ರದ ಟ್ರೈಲರ್ ಬಿಡುಗಡೆ ಬಳಿಕ ಮಾಹಿತಿ ಹಂಚಿಕೊಂಡ ನಟ ನಿರ್ದೇಶಕ ರಘು ಭಟ್, ಇದೇ ತಿಂಗಳ 21 ಕ್ಕೆ ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರದಲ್ಲಿ ನಾನೊಬ್ಬ ಛೆಫ್, ಅವನ ಲೈಫ್ ಸ್ಟೈಲ್, ಬೇರೆ ಆಗಿರುತ್ತದೆ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಂಡವನು ಗರ್ಭಿಣಿ ಆಗ್ತಾನೆ. ಅದು ಹೇಗೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.ನಾವಂತೂ ಕಾತುರನಾಗಿದ್ದೇನೆ ಎಂದರು
ಚಿತ್ರಕ್ಕೆ ಯು/ ಎ ಸರ್ಟಿಫಿಕೇಟ್ ಸಿಕ್ಕಿದೆ. ಹೆರಿಗೆ ಸಮಯದಲ್ಲಿ ತಾಯಿ ಅನುಭಬಮವಿಸುವ ನೋವನ್ನು ಚಿತ್ರದ ಕಥೆಯ ಹಂತದಲ್ಲಿ ನಾನು ಅನುಭವಿಸಿದ್ದೇನೆ. ಚಿತ್ರವನ್ನು ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ. ಗಂಡಸು ಹೇಗೆ ಗರ್ಬಿಣಿ ಆದ ಎನ್ನುವುದನ್ನು ಚಿತ್ರದಲ್ಲಿ ನೋಡಿ ಎಂದು ಹೇಳಿದರು.
ಹಾಡು ಬರೆದಿರುವ ಪ್ರಮೋದ್ ಮರವಂತೆ ಮಾತನಾಡಿ
ಮಾಯಗಾರ ಇಷ್ಡವಾದ ಹಾಡು ಮತ್ತು ಮಗುವೇ ಭಾವನಾತ್ಮಕ ಹಾಡು, ಕೆಲವರು ಸಾಲು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೆಮ್ಮೆಯ ಸಂಗತಿ, ನಿರ್ಮಾಪಜ ಹರೀಶ್ ಗೌಡ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರತಂಡಕ್ಕೆ ಸಿಹಿ ಸುದ್ದಿ ಆಗಲಿ ಎಂದು ಹಾರೈಸಿದರು.
ನಿರ್ಮಾಪಕ ಹರೀಶ್ ಎನ್ ಗೌಡ ಮಾತನಾಡಿ, ಸಿನಿಮಾ ಹೇಗೆ ಆಯ್ತು ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು.ಜಿಮ್ ನಲ್ಲಿ ಒಮ್ಮೆ ರಘು ಭಟ್ ಕಥೆ ಹೇಳಿದರು. ಮೊದಲು ಒಪ್ಪಿಕೊಂಡಿರಲಿಲ್ಲ.ಪೋಷಕರು ಕೂಡ ಬೇಡ ಎಂದರು. ಎರಡು ಮೂರು ಬಾರಿ ಕಥೆ ಕೇಳಿ ಇಡೀ ಕಥೆ ಬದಲಾಯಿಸಿದ ನಂತರ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡೆ. 2 ಗಂಟೆ 13 ಸಿನಿಮಾ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಲಿದೆ. ನಾನು ಪುನೀತ್ ರಾಜ್ ಕುಮಾರ್ ಕಟ್ಟಾ ಅಭಿಮಾನಿ ಎಂದರು.

