ಬಿಡುಗಡೆಗೆ ಸಜ್ಜಾದ “ಶೋಷಿತೆ” ಚಿತ್ರ : ಡಾ. ಜಾನ್ವಿ ರಾಯಲ ನಾಯಕಿ
ಪ್ರಸ್ತುತ ಸಮಾಜದಲ್ಲಿ ಪ್ರತಿ ಐದು ಮಹಿಳೆಯರಲ್ಲಿ ಒಬ್ಬರು ಗರ್ಭಧಾರಣೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ‘ಶೋಷಿತೆ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಬೆಂಗಳೂರು ಮೂಲದ ಇಂಜಿನಿಯರ್ ಶಶಿಧರ್ ಸಿನಿಮಾಕ್ಕೆ ರಚನೆ, ಚಿತ್ರಕಥೆ,ಸಂಭಾಷಣೆ, ಸಂಕಲನ ಹಾಗೂ ಆಕ್ಷನ್ ಕಟ್ ಹೇಳಿದ್ದಾರೆ.
ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡುವ ಜೊತೆಗೆ ನಿರೂಪಕಿಯಾಗಿರುವ ಡಾ.ಜಾನ್ವಿ ರಾಯಲ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್’ದಲ್ಲಿ ಅಭಿನಯಿಸಿರುವ ರೂಪರಾಯಪ್ಪ ಖಳನಾಯಕಿ ಪಾತ್ರ, ಇವರೊಂದಿಗೆ ವೆಂಕ್ಷ, ಪ್ರಶಾಂತ್, ದರ್ಶನ್ ಹಾಗೂ ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸದೆ ‘ಯು’ ಪ್ರಮಾಣಪತ್ರ ನೀಡಿದೆ. ‘ಎ ನೇಚರ್ ವ್ಯೂ ಔಟ್‍ಡೋರ್ ಕಾರ್ನಿವಲ್ ಪ್ರೊಡಕ್ಷನ್ಸ್ ಮೂಲಕ ಶಿರೀಷಆಳ್ಳ ನಿರ್ಮಾಣ ಮಾಡಿರುವುದು ಹೊಸ ಅನುಭವ.
2015ರಲ್ಲಿ ನಡೆದಂತ ಘಟನೆಯು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದರ ಒಂದು ಏಳೆ ತೆಗೆದುಕೊಂಡು ಕಥೆ ರೂಪಿಸಲಾಗಿದೆ. ನೊಂದ ಮಹಿಳೆಯ ಅಡೆತಡೆಗಳನ್ನು ನಿವಾರಿಸಲು, ಆಕೆಗೆ ಅಗತ್ಯವಾದ ಭಾವನಾತ್ಮಕ ಬೆಂಬಲ ನೀಡುವ ಬದಲು, ಸ್ವಂತ ಕುಟುಂಬದ ಸದಸ್ಯರು ಅವಳಿಗೆ ತೊಂದರೆಗೊಳಿಸುತ್ತಿರುತ್ತಾರೆ.
ಅಜಾಗರೂಕತೆಯಿಂದ ಕುರುಡು ನಂಬಿಕೆ ಮತ್ತು ಅನಗತ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತದೆ. ಕಷ್ಟದ ಸಮಯದಲ್ಲಿ ಒಬ್ಬರ ಕುಟುಂಬವನ್ನು ನೋಯಿಸದಿರುವ ಮಹತ್ವ ಒತ್ತಿ ಹೇಳುತ್ತದೆ. ಸಮಾಜದ ನೈಜತೆ ಪ್ರತಿಬಿಂಬಿಸಲಿದ್ದು, ಜಾಗೃತರಾಗಬೇಕೆಂದು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ.
ಹಾಡಿಗೆ ಕೆವಿನ್.ಎಂ. ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರವಿವರ್ಮ.ಕೆ, ಸಾಹಿತ್ಯ ಮತ್ತು ಗಾಯನ ಅನುಷಾ ಅವರದಾಗಿದೆ. ಬೆಂಗಳೂರು, ಹೊಸಕೋಟೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರವು ಡಿಸೆಂಬರ್ ಮೊದಲ ವಾರದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.