ಪ್ಯಾನ್ ಇಂಡಿಯಾ ಅನಿಮಲ್ ಚಿತ್ರ : ಇದೇ ಶುಕ್ರವಾರ ತೆರೆಗೆ

ಟಿ ಸೀರೀಸ್ ನ ಮುಖ್ಯಸ್ಥ ಭೂಷಣ್ ಕುಮಾರ್ ನಿರ್ಮಾಣ ಮಾಡಿರುವ ” ಅನಿಮಲ್ ” ಪ್ಯಾನ್ ಇಂಡಿಯಾ ಸಿನಿಮಾ ಇದೇ ಶುಕ್ರವಾರ ತೆರಗೆ ಬರಲಿದೆ.ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಯಲ್ಲಿ ಚಿತ್ರ ತೆರೆಗೆ ಬರುತ್ತಿದೆ

” ಅನಿಮಲ್ ” ಚಿತ್ರದ ಮೂಲಕ ಕನ್ನಡದ ಹುಡುಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ.ಹೀಗಾಗಿ ರಶ್ಮಿಕಾ ಅವರನ್ನು ಹಿಂದಿ ಚಿತ್ರದಲ್ಲಿ ನೋಡಬೇಕು ಎನ್ಮುವ ಅವರ ಅಭಿಮಾನಿಗಳ ಆಸೆ ಈಡೇರಿದೆ.
ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿತ್ತು. ಈ ವೇಳೆ ಮಾದ್ಯಮದೊಂದಿಗೆ ತಂಡ ಮಾಹಿತಿ ಹಂಚಿಕೊಂಡಿತು

ನಟ ರಣಬೀರ್ ಕಪೂರ್ ಮಾತನಾಡಿ, ವಿಭಿನ್ನವಾದ ಸಿನಿಮಾ ತಂದೆ ಮಗನ ಬಾಂಧವ್ಯದ ಜೊತೆ ಜೊತೆ ಹಿಂಸೆ ಮತ್ತು ಕ್ರೌರ್ಯಕ್ಕೆ ಒತ್ತು ನೀಡಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಸೆಂಟೆಮೆಂಟ್ ಅಥವಾ ಹಿಂಸೆಗೆ ಎಷ್ಡ ಪ್ರಾಧಾನ್ಯತೆ ನೀಡಲಾಗಿದೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದರು.
ಹಿರಿಯ ನಟರಾದ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ ಜೊತೆ ನಟನೆ ಮಾಡಿದ್ದು ಒಳ್ಳೆಯ ಅನುಭವ. ಜೊತೆಗೆ ರಶ್ಮಿಕಾ ಮಂದಣ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದು ಹೇಳಿಕೊಂಡರು
.

ನಟಿ ರಶ್ಮಿಕಾ ಮಂದಣ್ಣ ಮಾತನಾಡಿ, ಚಿತ್ರದಲ್ಲಿ ರಣಬೀರ್ ಕಪೂರ್ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ವಿಭಿನ್ನವಾದ ಪಾತ್ರ ಎಂದರು.ಇದೇ ವೇಳೆ ಚಿತ್ರದಲ್ಲಿ ಲಿಪ್ ಲಾಕ್ ಬಗ್ಗೆ ಮಾಹಿತಿ ನೀಡಿಅದು ನಿರ್ದೇಶಕರ ಕಲ್ಪನೆ ಅವರು ಹೇಳಿದಂತೆ ಮಾಡುವುದು ನಟಿಯ ಕೆಲಸ ಎಂದು ಮಾಹಿತಿ ಹಂಚಿಕೊಂಡರು

ಹಿರಿಯ ನಟ ಬಾಬ್ಬಿ ಡಿಯೋಲ್ ಮಾತನಾಡಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ.ಚಿತ್ರಕ್ಕಾಗಿ ಸಾಕಷ್ಟು ಪ್ರಯತ್ನ ಮತ್ತು ಎಫರ್ಟ್ ಹಾಕಿದ್ದೇನೆ ಎಂದರು

ವಿತರಕ ಕೆವಿಎನ್ ವೆಂಕಟ್ ಮಾತನಾಡಿ ಇದೇ ಶುಕ್ರವಾರ ರಾಜ್ಯಾದ್ಯಂತ ಚಿತ್ರವನ್ನು ತೆರೆಗೆ ತರಲಾಗುವುದು. ಬೆಳಗಿನ ಶೋ ನೇ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು
ನಿರ್ಮಾಪಕ ಭೂಷಣ್ ಕುಮಾರ್ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು