“ಮಾರಿಗೋಲ್ಡ್” ಚಿತ್ರದ “ಸಿಹಿ ಜೇನ ಮಳೆ” ಲಿರಿಕಲ್ ಹಾಡು ಅನಾವರಣ: ನಿರೀಕ್ಷೆ ಹೆಚ್ಚಳ
ಬಿಗ್‍ಬಾಸ್ ಖ್ಯಾತಿಯ ನಟಿ ಸಂಗೀತ ಶೃಂಗೇರಿ ಮತ್ತು ನಟ ದಿಗಂತ್ ಮಂಚಾಲೆ ಅಭಿನಯದ
ಮಾರಿಗೋಲ್ಡ್'' ಚಿತ್ರದ ಲಿರಿಕಲ್ ಹಾಡು
ಸಿಹಿ ಜೇನ ಮಳೆ “ ಹಾಡು ಬಿಡುಗಡೆಯಾಗಿದೆ. ಹಾಡಿನ ಮೆಚ್ಚುಗೆ ವ್ಯಕ್ತವಾಗಿದ್ದು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಳವಾಗಿದೆ.
ಯೋಗರಾಜ್ ಭಟ್ ಬರೆದಿರುವ ಈ ಗೀತೆಯನ್ನು ಅನುರಾಧ ಭಟ್ ಹಾಡಿದ್ದಾರೆ. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ವೀಕ್ಷಣೆ ದಾಟಿ ಮುನ್ನುಗ್ಗುತ್ತಿದ್ದು ಹಾಡು ಯಶಸ್ವಿಯಾಗುವ ಎಲ್ಲಾ ಲಕ್ಷಣ ತೋರಿದೆ.
ದಿಗಂತ್ ಹಾಗು ಸಂಗೀತ ಶೃಂಗೇರಿ ಕಾಣಿಸಿಕೊಂಡಿರುವ ಈ ಹಾಡು ಇಬ್ಬರೂ ಅಭಿಮಾನಿಗಳಿಗೆ ಮೋಡಿ ಮಾಡಿದೆ. ಇದುವರೆಗೂ ರೋಮಾಂಟಿಕ್ ಹಿರೋ ಆಗಿ ಕಾಣಿಸಿಕೊಂಡಿದ್ದ ನಟ ದಿಗಂತ್, ಈ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಬಡ್ತಿ ಪಡೆದಿದ್ದಾರೆ. ಮತ್ತೊಂದೆಡೆ ಸಂಗೀತ ಶೃಂಗೇರಿ ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ. ಹೀಗಾಗಿ ಅವರ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಚಿತ್ರ ಮಾಡಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕ ರಘುವರ್ಧನ್, “ಮಾರಿಗೋಲ್ಡ್” ಆಕ್ಷನ್ ಥ್ರಿಲ್ಲರ್ ಜಾನರ್ ಚಿತ್ರ ಇದಾಗಿದೆ. ಚಿನ್ನದ ಬಿಸ್ಕತ್ತು ಮಾರಲು ಹೊರಟ ನಾಲ್ವರು ಹುಡುಗರ ಕಥೆ ಆಧರಿಸಿದೆ. ಚಿತ್ರವನ್ನು ಬೆಂಗಳೂರು, ಸಕಲೇಶಪುರ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ ಎಂದರು
ನಟಿ ಸಂಗೀತ ಶೃಂಗೇರಿ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ಸೃಷ್ಠಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ, ಜೊತೆಗೆ ನಟ ದಿಗಂತ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲಾಗುತ್ತಿದೆ, ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಲಿರಿಕಲ್ ಹಾಡು ಬಿಡುಗಡೆ ಮಾಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕ್ರೈಮ್ ಥ್ರಿಲ್ಲರ್ ಜಾನರ್ ಸಿನಿಮಾ, ಒಳ್ಳೆಯ ಕಂಟೆಂಟ್ ಇದೆ. ದಿಗಂತ್ ಬಾಡಿ ಲಾಂಗ್ವೇಜ್, ಸಂಪೂರ್ಣ ಬದಲಾಗಿದೆ. ಜೊತೆಗೆ ನಟಿ ಸಂಗೀತಾ ಶೃಂಗೇರಿ ಅವರ ಲಕ್ಷಾಂತರ ಅಭಿಮಾನಿಗಳಿಗೆ ಚಿತ್ರ ಇಷ್ಟವಾಗಲಿದೆ, ಚಿತ್ರದಲ್ಲಿ ಸಂಗೀತ ಪಾತ್ರ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ಡ್ಯಾನ್ಸರ್ ಪಾತ್ರ ಮಾಡಿದ್ದಾರೆ. ಬದುಕು ಕಟ್ಟಿಕೊಳ್ಳುವ ಪರದಾಡುವ ಪಾತ್ರ ಅವರದು ಎಂದರು
ಜೀವನ ಕಟ್ಟಿಕೊಳ್ಳಲು ಕನಸು ಕಂಡ ನಾಲ್ವರ ಹುಡುಗರು ಸಮಾಜದಲ್ಲಿ ಹಣ ಸಂಪಾದಿಸಲು ಮುಂದಾಗುತ್ತಾರೆ, ಇಂತಹ ಸಮಯದಲ್ಲಿ ಒಂದು ಕಡೆ ಸಿಕ್ಕಿ ಹಾಕಿಕೊಳ್ತಾರೆ.ಅದರಿಂದ ಹೊರ ಬರ್ತಾರ ಅಂದುಕೊಂಡ ಕೆಲಸ ಸಾಧಿಸುತ್ತಾರೆ ಎನ್ನುವುದು ರೋಚಕವಾಗಿ ಮೂಡಿ ಬಂದಿದೆ. ನಟಿ ಸಂಗೀತ ಶೃಂಗೇರಿ, ನಾಲ್ವರು ಹುಡುಗರ ಜೊತೆ ಸೇರಿದಾಗ ಅವರನ್ನು ಬದಲಾಯಿತ್ತಾರೆ. ಅಥವಾ ಬದಲಾಯಿಸುವ ಪ್ರಯತ್ನದಲ್ಲಿ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ಕುತೂಹಲದ ಸಂಗತಿ ಎಂದು ವಿವರ ನೀಡಿದರು
ಚಿತ್ರಕ್ಕೆ ರಾಘವೇಂದ್ರ ಎಂ, ನಾಯ್ಕ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ವಜ್ರಾಂಗ್ ಶೆಟ್ಟಿ, ಬಲರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ, ಭಜರಂಗ ಶೆಟ್ಟಿ, ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆಚಿತ್ರಕ್ಕೆ ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ರಘು ನಿಡವಳ್ಳಿ ಸಂಭಾಷಣೆ, ವೀರ್ ಸಮರ್ಥ್ ಸಂಗೀತವಿದೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ ಹಾಡು ಬರೆದಿದ್ಧಾರೆ.