Simple Suni introduced the hero and heroine to the film industry through the film “Lambodara 2.0”.

“ಲಂಬೋದರ 2.0” ಚಿತ್ರದ ಮೂಲಕ ನಾಯಕ-ನಾಯಕಿ ಚಿತ್ರರಂಗಕ್ಕೆ ಪರಿಚಯಿಸಿದ ಸಿಂಪಲ್ ಸುನಿ - CineNewsKannada.com

“ಲಂಬೋದರ 2.0” ಚಿತ್ರದ ಮೂಲಕ ನಾಯಕ-ನಾಯಕಿ ಚಿತ್ರರಂಗಕ್ಕೆ ಪರಿಚಯಿಸಿದ ಸಿಂಪಲ್ ಸುನಿ

ಕನ್ನಡ ಚಿತ್ರರಂಗಕ್ಕೆ ಸಧಭಿರುಚಿತ್ರ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿರುವ ಭರವಸೆಯ ನಿರ್ದೇಶಕ ಸಿಂಪಲ್ ಸುನಿ ಒಂದರ ಒಂದು ಒಂದು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಮಂದಿ ನಾಯಕ ನಾಯಕಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಮೆ ಇರುವ ಸುನಿ ಈಗ ಕನ್ನಡ ಚಿತ್ರರಂಗಕ್ಕೆ ಇಬ್ಬರು ಹೊಸ ಮುಖಗಳನ್ನು ಪರಿಚಯ ಮಾಡುತ್ತಿದ್ದಾರೆ

ಹೊಸ ಚಿತ್ರ ಲಂಬೋದರ-2.0 ಚಿತ್ರದ ಮೂಲಕ ಅನಿಲ್ ಶೆಟ್ಟಿ ಮತ್ತು ಬಾಲಿವುಡ್ ನಟಿ ಸಾಚಿ ಬಿಂದ್ರಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ಸಿಂಪಲ್ ಸುನಿ ಅವರ ಮತ್ತಿಬ್ಬರು ಕಲಾವಿದರಿಗೆ ಬಣ್ಣದ ಬದುಕಿಗೆ ಅದ್ದೂರಿ ಪ್ರವೇಶ ಕೊಡಿಸಿದ್ದಾರೆ.

ಕೃತಕ ಬುದ್ದಿಮತ್ತೆ ಆಧಾರಿತ ಸಾಮಾಜಿಕ ಥ್ರಿಲ್ಲರ್ “ಲಂಬೋದರ 2.0” ಚಿತ್ರದ ಮೂಲಕ ಯುವ ಕಲಾವಿದರನ್ನು ಪರಿಚಯ ಮಾಡುತ್ತಿದ್ದಾರೆ ಸುನಿ.

ಕೃತಕ ಬುದ್ಧಿಮತ್ತೆ , ಯುವಜನತೆ ಮತ್ತು ವೇಗವಾಗಿ ರೂಪಾಂತರಗೊಳ್ಳುತ್ತಿರುವ ಡಿಜಿಟಲ್ ಪರಿಸರದಂತಹ ಸಮಕಾಲೀನ ವಿಷಯಗಳನ್ನು ಅನ್ವೇಷಿಸುತ್ತದೆ. ಡಿಜಿಟಲ್ ಸಂಪರ್ಕಿತ ತಲೆಮಾರಿಗೆ ಸ್ಪಂದಿಸುವಂತೆ, ಸಾಮಾಜಿಕವಾಗಿ ಪ್ರಸ್ತುತವಾಗಿರುವ ಹೈ-ಕಾನ್ಸೆಪ್ಟ್ ಥ್ರಿಲ್ಲರ್ ಆಗಿ ಈಚಿತ್ರವನ್ನು ರೂಪಿಸಲಾಗಿದೆ.

ಚಿತ್ರದ ಮುಹೂರ್ತ ಸಮಾರಂಭವು ಇತ್ತೀಚೆಗೆ ಕಲಾವಿದರು ಮತ್ತು ತಾಂತ್ರಿಕ ತಂಡದ ಸಮ್ಮುಖದಲ್ಲಿ ನಡೆಯಿತು. ಮುಖ್ಯ ಚಿತ್ರೀಕರಣ ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ನಿರೀಕ್ಷೆಯಿದ್ದು, ನಿರ್ದೇಶಕ ಸಿಂಪಲ್ ಸುನಿ ಅವರು ತಮ್ಮ ತಂಡದೊಂದಿಗೆ ಪ್ರೀ- ಪ್ರೊಡಕ್ಷನ್ಸ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ಡಿಜಿಟಲ್ ಯುಗದಲ್ಲಿನ ಇಂದಿನ ಯುವಜನರ ಜೀವನದಿಂದ ಪ್ರೇರಿತವಾದ ಸಂಪೂರ್ಣ ಮೂಲ ಕಥೆ. ಕೃತಕ ಬುದ್ದಿಮತ್ತೆ ಆಧಾರಿತ ಸಾಮಾಜಿಕ ಥ್ರಿಲ್ಲರ್ ಆಗಿರುವ ಈ ಚಿತ್ರ ಬೆಂಗಳೂರಿನ ಯುವಕನ ಪ್ರಯಾಣವನ್ನು ಅನುಸರಿಸಿ, ನಿಜಜಗತ್ತು ಮತ್ತು ಡಿಜಿಟಲ್ ಜಗತ್ತಿನ ನಡುವಿನ ಸಂಘರ್ಷವನ್ನು ಹಂತ ಹಂತವಾಗಿ ಅನಾವರಣಗೊಳಿಸುತ್ತದೆ ಎಂದು ಹೇಳಿದ್ದಾರೆ

ನಾಯಕಿ ಸಾಚಿ ಬಿಂದ್ರಾ ಮಾತನಾಡಿ ಸಮಕಾಲೀನತೆ ಮತ್ತು ಭಾವನಾತ್ಮಕ ಆಳ. ಡಿಜಿಟಲ್ ಜೀವನದ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿದ್ದರೂ, ಮಾನವೀಯತೆ ಕಳೆದುಕೊಳ್ಳುವುದಿಲ್ಲ. ಸಿಂಪಲ್ ಸುನಿ ಅವರೊಂದಿಗೆ ಕೆಲಸ ಮಾಡುವುದೂ, ಅನಿಲ್ ಶೆಟ್ಟಿ ಅವರೊಂದಿಗೆ ತೆರೆ ಹಂಚಿಕೊಳ್ಳುವುದೂ ಖುಷಿಕೊಟ್ಟಿದೆ ಎಂದಿದ್ದಾರೆ

ನಾಯಕ ಅನಿಲ್ ಶೆಟ್ಟಿ ಮಾತನಾಡಿ ಬದುಕುತ್ತಿರುವ ಜಗತ್ತನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಕಥೆ. ತಂತ್ರಜ್ಞಾನ ನಮ್ಮ ಭಾವನೆಗಳು ಮತ್ತು ನಿರ್ಧಾರಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಇದು ಬಲವಾಗಿ ತೋರಿಸುತ್ತದೆ. ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಈ ರೀತಿಯ ಚಿತ್ರದೊಂದಿಗೆ ನನ್ನ ಪದಾರ್ಪಣೆ ನಿಜಕ್ಕೂ ವಿಶೇಷ ಎಂದು ಹೇಳಿದ್ದಾರೆ

ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕಾಗಿ ಖ್ಯಾತ ಬಾಲಿವುಡ್ ನಟರೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಜೊತೆಗೆ, ಜನಪ್ರಿಯ ಇನ್‍ಫ್ಲೂಯೆನ್ಸರ್ ಮ್ಯಾಕ್ ಮಚ್ಚಾ ಕೂಡ ಪ್ರಮುಖ ಪಾತ್ರದಲ್ಲಿ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಚಿತ್ರದ ತಾಂತ್ರಿಕ ತಂಡದಲ್ಲಿ ಸಂಗೀತ ನಿರ್ದೇಶಕರಾಗಿ ವೀರ್ ಸಮರ್ಥ್, ಛಾಯಾಗ್ರಹಣ ವಿಭಾಗದಲ್ಲಿ ಸಂತೋಷ್ ರೈ ಪಠಾಜೆ ಹಾಗೂ ನಿರ್ಮಾಣ ವಿನ್ಯಾಸಕರಾಗಿ ಉಲ್ಲಾಸ್ ಹೈದೂರ್ ಕಾರ್ಯನಿರ್ವಹಿಸುತ್ತಿದ್ದಾರೆ.

ತಂತ್ರಜ್ಞಾನ, ಭಾವನೆ ಮತ್ತು ಸಾಮಾಜಿಕ ಪ್ರಸ್ತುತತೆಯನ್ನು ರೋಚಕ ಥ್ರಿಲ್ಲರ್ ಕಥನದ ಮೂಲಕ ಒಗ್ಗೂಡಿಸುವ ಲಂಬೋದರ 2.0 ಒಂದು ಚಿಂತನೆಗೆ ಒಯ್ಯುವ ಸಿನೆಮಾಟಿಕ್ ಅನುಭವವಾಗಲಿದೆ ಎಂದು ಚಿತ್ರದ ಲೇಖಕರಾದ ಅನಿಲ್ ಶೆಟ್ಟಿ ಮತ್ತು ಅಭಿಜಿತ್ ಮಹೇಶ್ ಭರವಸೆ ನೀಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin