“ಧೈರ್ಯಂ” ಚಿತ್ರದ ಬಳಿಕ ಅಜಯ್ ರಾವ್‍ಗೆ ಶಿವತೇಜಸ್ ಮತ್ತೊಂದು ಚಿತ್ರ

“ಧೈರ್ಯಂ” ಚಿತ್ರದಲ್ಲಿ ನಾಯಕ ಅಜಯ್ ರಾವ್ ಅವರಿಗೆ ಆಕ್ಷನ್ ಕಟ್ ಹೇಳಿ ನಿರ್ದೇಶಕರಾಗಿ ಬಡ್ತಿ ಪಡೆದಿದ್ದ ಶಿವತೇಜಸ್. ಇದೀಗ ಮತ್ತೊಮ್ಮೆ ಅಜಯ್ ರಾವ್ ಅವರಿಗೆ “ದಿಲ್ ಪಸಂದ್ ಚಿತ್ರದಲ್ಲಿ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಇದೀಗ ಮೂರನೇ ಭಾರಿಗೆ ಅಜಯ್ ರಾವ್‍ಗೆ ಆಕ್ಷನ್ ಕಟ್ ಹೇಳು ಸಜ್ಜಾಗಿದ್ಧಾರೆ

ಹರೀಶ್ ದೇವಿತಂದ್ರೆ ನಿರ್ಮಾಣದ ಚಿತ್ರಕ್ಕೆ ಶಿವತೇಜಸ್ ನಿರ್ದೇಶನ ಮಾಡುತ್ತಿದ್ದಾರೆ ನಾಯಕ ಅಜಯ್ ರಾವ್ ಹುಟ್ಟುಹಬ್ಬದ ಸಮಯದಲ್ಲಿ ಚಿತ್ರ ಘೋಷಣೆಯಾಗಿದೆ.
ಹೆಚ್ ಪಿ ಆರ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಹರೀಶ್ ದೇವಿತಂದ್ರೆ ನಿರ್ಮಿಸುತ್ತಿರುವ ಈ ಚೊಚ್ಚಲ ಚಿತ್ರವನ್ನು “ಮಳೆ” ಚಿತ್ರದ ಖ್ಯಾತಿಯ ಶಿವತೇಜಸ್ ನಿರ್ದೇಶಿಸುತ್ತಿದ್ದಾರೆ.

ನಿರ್ದೇಶಕ ಶಿವತೇಜಸ್ ಮಾಹಿತಿ ನೀಡಿ ಈ ಹಿಂದೆ ನಾನು ನಿರ್ದೇಶಿಸಿದ “ಧೈರ್ಯಂ” ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ನಟಿಸಿದ್ದರು ಹಾಗೂ “ದಿಲ್ ಪಸಂದ್” ಚಿತ್ರದಲ್ಲಿ ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಹೊಸ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ. . ಚಿತ್ರದ ಶೀರ್ಷಿಕೆ ಹಾಗೂ ಇತರ ಮಾಹಿತಿಯನ್ನು ಸದ್ಯದಲ್ಲೇ ನೀಡುವುದಾಗಿ ತಿಳಿಸಿದ್ದಾರೆ.