Skanda's Ustad Ram Pothineni..Released on September 15

ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ: ಸೆ.15ಕ್ಕೆ ರಿಲೀಸ್ - CineNewsKannada.com

ಸ್ಕಂದ’ನಾದ ಉಸ್ತಾದ್ ರಾಮ್ ಪೋತಿನೇನಿ: ಸೆ.15ಕ್ಕೆ ರಿಲೀಸ್

ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬೋದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಸ್ಕಂದನಾಗಿ ರಾಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಸಣ್ಣ ಗ್ಲಿಂಪ್ಸ್ ಮೂಲಕ ಚಿತ್ರತಂಡ ಪವರ್ ಫುಲ್ ಟೈಟಲ್ ರಿವೀಲ್ ರಿವೀಲ್ ಮಾಡಿದೆ. ಕಾರ್ತಿಕೇಯ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಇನ್ನೊಂದು ಹೆಸರೇ ಸ್ಕಂದ..ಪಂಚಿಂಗ್ ಡೈಲಾಗ್ ಮೂಲಕ ಮಾಸ್ ಅವತಾರದಲ್ಲಿ ರಾಮ್ ಪೋತಿನೇನಿ ಧಗಧಗಿಸಿದ್ದಾರೆ.

ದಸರಾಗೆ ಸ್ಕಂದ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದ್ರೆ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸ್ಕಂದ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಮಾಸ್ ಅವತಾರ, ಪವರ್ ಫುಲ್ ಟೈಟಲ್ ಸ್ಕಂದ ಅಬ್ಬರ ಜೋರಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin