Son Ajith in the role of Father Jayaraj : Jaunty Son of Jayaraj Teaser Released

ಅಪ್ಪ ಜಯರಾಯ್ ಪಾತ್ರದಲ್ಲಿ ಮಗ ಅಜಿತ್ ನಟನೆ : ಜಾಂಟಿ ಸನ್ ಆಫ್ ಜಯರಾಜ್ ಟೀಸರ್ ಬಿಡುಗಡೆ - CineNewsKannada.com

ಅಪ್ಪ ಜಯರಾಯ್ ಪಾತ್ರದಲ್ಲಿ ಮಗ ಅಜಿತ್ ನಟನೆ : ಜಾಂಟಿ ಸನ್ ಆಫ್ ಜಯರಾಜ್ ಟೀಸರ್ ಬಿಡುಗಡೆ

ಪ್ರತಿಭಾನವಿತ ನಟ ಅಜಿತ್ ಜಯರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು. ನಟ ವಿನೋಧ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ತಂಡಕ್ಕೆ ಶುಭಹಾರೈಸಿದರು.

ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಪ್ರಚಾರ ಕಾರ್ಯದಲ್ಲಿ ಅನುಭವ ಹೊಂದಿರುವ ಸುಗೂರುಕುಮಾರ್ ನಿರ್ಮಾಣ ಮಾಡಿದ್ದಾರೆ.ಕತೆ ಬರೆದು ನಿರ್ದೇಶನ ಮಾಡಿರುವ ಆನಂದರಾಜ್ ನಿರ್ದೇಶನ ಮಾಡುತ್ತಿದ್ದಾರೆ

ನಿರ್ದೇಶಕ ಆನಂದರಾಜ್ ಮಾತನಾಡಿ, ಜಯರಾಜ್ ನಂತರದ ದಿನಗಳ ಸಂದರ್ಭದಲ್ಲಿ ಹಣಕಾಸು ವ್ಯವಹಾರ, ಮಾರ್ಕೆಟ್ ದಂಧೆ ಎಲ್ಲವು ರಾರಾಜಿಸುತ್ತಿತ್ತು. ಇಂತಹ ವಿಷಯಗಳನ್ನು ಕೇಳಿದ್ದು, ನೋಡಿದ್ದು, ಓದಿದ್ದು ಎಲ್ಲವನ್ನು ಬಳಸಿಕೊಂಡು ಚಿತ್ರಕಥೆ ಬರೆಯಲಾಗಿದೆ. ಜಯರಾಜ್ ಮಗನೇ ಪಾತ್ರವಾಗಿ ಬರುತ್ತಾರೆ. ಆತನ ಸಾವಿಗೆ ಕಾರಣರಾದಂತ ಪಾತ್ರಗಳು ಬಂದು ಹೋಗುತ್ತವೆ. ಆಗಿನ ಕಾಲಘಟ್ಟದಲ್ಲಿ ಇದ್ದಂತ ರೋಲ್‍ಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ ಎಂದರು.

ಜತೆಗೆ ತಾಯಿ ಸೆಂಟಿಮೆಂಟ್, ನವಿರಾದ ಪ್ರೀತಿ ಸನ್ನಿವೇಶಗಳು ಅಲ್ಲದೆ ಗೆಳತನದ ಸಾರವನ್ನು ಹೇಳಲಾಗಿದೆ. ಹಳೇ ಬೆಂಗಳೂರು ಹೇಗಿತ್ತು ಅಂತ ನೋಡಬೇಕಾದರೆ, ನಮ್ಮ ಸಿನಿಮಾ ನೋಡಿ. 1989 ಅವಧಿ ಕಟ್ ಮಾಡಿದರೆ ಈಗಿನ ಜಮಾನದಲ್ಲಿ ಏನೇನು ನಡೆಯುತ್ತಿದೆ ಎಂಬುದು ಇರಲಿದೆ. ಕಲಾವಿದರುಗಳಾದ ರಾಜವರ್ಧನ್, ಶರತ್‍ಲೋಹಿತಾಶ್ವ, ಪಟ್ರೋಲ್‍ಪ್ರಸನ್ನ, ಕಿಶನ್, ಸೋನುಪಾಟೀಲ್, ಸಚ್ಚಿನ್‍ಪುರೋಹಿತ್, ಮೈಕೋ ನಾಗರಾಜ್ ಇವರೆಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು.

ನಾಯಕ ಅಜಿತ್‍ಜಯರಾಜ್ ಮಾತನಾಡಿ ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ. ನಿರ್ದೇಶಕರು ಹೇಳಿದಾಗ ಓಕೆ ಅಂತ ಹೇಳಿದ್ದೆ. ಕ್ಯಾಮಾರ ಮುಂದೆ ನಿಂತಾಗ ನಡುಕ ಬಂತು. ಅಂತ ಪವರ್‍ಫುಲ್ ರೋಲ್‍ನ್ನು ಹೇಗೆ ಮಾಡುವುದು. ಕೊನೆ ಒಂದು ದೃಶ್ಯದಲ್ಲಿ ನಟಿಸಿದಾಗ ಧೈರ್ಯ ಬಂತು. ಅಪ್ಪನ ಕಾಲ, ಮಗನಾಗಿ ಹೀಗೆ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು

ನಾಯಕಿ ನಿವಿಷ್ಕ ಪಾಟೀಲ್ ಚಿತ್ರೀಕರಣ ಅನುಭವಗಳನ್ನು ಮೆಲುಕು ಹಾಕಿದರು. ಛಾಯಾಗ್ರಹಣ ಅರ್ಜುನ್ ಆಕೋಟ್, ಸಂಗೀತ ವಿಜೇತಮಂಜೇಹ, ಹಿನ್ನಲೆ ಶಬ್ದ ಅಲೆಕ್ಸ್ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin