“ಅಂದೊಂದಿತ್ತು ಕಾಲ” ಚಿತ್ರದ ಮುಂಗಾರುಮಳೆಯಲ್ಲಿ ಹಾಡು ಬಿಡುಗಡೆ
“ಅಂದೊಂದಿತ್ತು ಕಾಲ” ಚಿತ್ರದ ಮುಂಗಾರು ಮಳೆಯಲ್ಲಿ ಹಾಡನ್ನು ಮುಂಗಾರು ಮಳೆ ಚಿತ್ರದ ಜೋಡಿ ನಟ ಗಣೇಶ್ ಮತ್ತು ನಟಿ ಪೂಜಾಗಾಂಧಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ
2006ರ ಮುಂಗಾರು ಮಳೆಯಂತೆ 2025ರಲ್ಲಿ ಅಂದೊಂದಿತ್ತು ಕಾಲ ಚಿತ್ರ ಆಗಲಿದೆ. ಅದಕ್ಕೆ ಸಾಕ್ಷಿ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲ್ಲಿ ಹಾಡು ಎಂದು ಹೇಳಲಾಗಿದೆ
ವಿನಯ್ ರಾಜ್‍ಕುಮಾರ್ ಅದಿತಿ ಪ್ರಭುದೇವ ಜೋಡಿಯ ಈ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾಗಾಂಧಿ ರಿಲೀಸ್ ಮಾಡಿ ಕೊಂಡಾಡಿದ್ದಾರೆ.. ಸಿದ್ದ್ ಶ್ರೀರಾಮ್ ಹಾಡಿರುವ ರಾಘವೇಂದ್ರ ಸಂಗೀತ ಧನಂಜಯ ರಂಜನ್ ಸಾಹಿತ್ಯವಿದೆ. ಕೇಳೋದಕ್ಕೆ ಇಂಪುನೋಡದಕ್ಕೂ ತಂಪು ಅನ್ನಿಸೋ ಈ ನವಿರಾದ ಮೆಲೋಡಿ ಹಾಡು ಸುಧೀರ್ಘ ಕಾಲ ಕೇಳುವ ನೋಡುವ ಹಾಗಿದೆ..ಚಿತ್ರವನ್ನು ಭುವನ್ ಸುರೇಶ್ ನಿರ್ಮಾಣ ಮಾಡಿದ್ದಾರೆ.
ಕೀರ್ತಿ ಕುಚೇಲ ನಿರ್ದೇಶನ ಮಾಡಿದ್ದು ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ,ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಎ ಆರ್ ಕೃಷ್ಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ, ತಾರಾಗಣದಲ್ಲಿ ವಿನಯ್ ರಾಜಕುಮಾರ್, ಅದಿತಿ ಪ್ರಭುದೇವ, ನಿಶಾ ರವಿ ಕೃಷ್ಣನ್,ಜಗ್ಗಪ್ಪ, ಗೋವಿಂದೇ ಗೌಡ,ಇನ್ನೂ ಮುಂತಾದವರು ಇದ್ದಾರೆ.
ನಟ ಗಣೇಶ್ ಮಾತನಾಡಿ ಮುಂಗಾರು ಮಳೆಯಲಿ ಹಾಡು ಸಖತ್ ಆಗಿದೆ, ಟೇಕ್ ಆಫ್ ಬ್ರಿಲಿಯಂಟ್,ಇತ್ತೀಚಿಗೆ ಕನ್ನಡದಲ್ಲಿ ಬಹಳಷ್ಟು ಅದ್ಭುತವಾದ ಹಾಡುಗಳು ಬರ್ತಾ ಇವೆ,ತುಂಬಾ ಹಾಡುಗಳನ್ನ ಕೇಳಿದ್ದೇನೆ,ಆದ್ರೆ ಅಂದೊಂದಿತ್ತು ಕಾಲ ಚಿತ್ರದ ಈ ಹಾಡು ತುಂಬಾ ಒಳ್ಳೆಯ ಹಾಡು ಅನ್ನೋದು ನನ್ನ ಅನಿಸಿಕೆ,ರಾಘವೇಂದ್ರ ಮಾಡಿರೋ ಮ್ಯೂಸಿಕ್ ಕೋಪೊಸಿಶಷನ್ ಮಸ್ತ್ ಆಗಿದೆ, ಸಿದ್ ಶ್ರೀರಾಮ್ ಧ್ವನಿ ಕೇಳೋದಕ್ಕೆ ಇಂಪಾಗಿದೆ, ಸುರೇಶ್ ನಿರ್ಮಾಣ ಮಾಡಿರೋ,ಕೀರ್ತಿ ಡೈರೆಕ್ಷನ್ ಚೆನ್ನಾಗ್ ಬಂದಿದೆ ಅನ್ನೋ ತರಹ ಭರವಸೆ ಕಾಣ್ತಾ ಇದೆ ಎಂದು ಹಾರೈಸಿದ್ದಾರೆ

ನಟಿ ಪೂಜಾಗಾಂಧಿ ಮಾತನಾಡಿ 2006ರಲ್ಲಿ ನಾವು ಮಾಡಿದ್ದ ಮುಂಗಾರು ಮಳೆ ಚಿತ್ರ,ಅದರ ಸಕ್ಸಸ್‍ನ್ನ ನೆನಪು ಮಾಡ್ಕೋತಾನೇ ಇರ್ತೀನಿ. ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವ ಜೊತೆಯಾಗಿ ನಟಿಸಿರುವ ಅಂದೊಂದಿತ್ತು ಕಾಲ ಚಿತ್ರದ ಮುಂಗಾರು ಮಳೆಯಲಿ ಅನ್ನೋ ಹಾಡು ಚೆನ್ನಾಗ್ ಮೂಡಿ ಬಂದಿದೆ ಚಿತ್ರ ಯಶಸ್ಸು ಕಾಣಲಿ ಎಂದು ಶುಭಕೋರಿದ್ದಾರೆ.

