Song released from the movie "Kuladali Keelyavudo"

“ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಹಾಡು ಬಿಡುಗಡೆ - CineNewsKannada.com

“ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಹಾಡು ಬಿಡುಗಡೆ

ಕನ್ನಡದ ಚಿತ್ರರಂಗದಲ್ಲಿ ಮೊದಲ ಬಾರಿಗೆ ಆನೆಯೊಂದು ಚಿತ್ರದ ಹಾಡಿ ಅನಾವರಣ ಮಾಡಿದೆ. ಆ ಸುಂದರ ಯುಗಳಗೀತೆ ಮನೋಮೂರ್ತಿ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ.

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ನಿರ್ಮಿಸುತ್ತಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ಹಾಗೂ ಮೌನ ಗುಡ್ಡೆಮನೆ ನಾಯಕ ನಾಯಕಿಯಾಗಿ ನಟಿಸಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿರುವ “ಮನಸು ಹಾಡ್ತಿದೆ ವಯಸ್ಸು ಕಾಡ್ತದೆ” ಎಂಬ ಹಾಡು ತನ್ನ ಗಾಂಭೀರ್ಯದಿಂದಲೇ ಎಲ್ಲರ ಗಮನ ಸೆಳೆದಿರುವ ಗಜರಾಜನಿಂದ ಬಿಡುಗಡೆಯಾಗಿದೆ.

ಮನೋಮೂರ್ತಿ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಸೋನು ನಿಗಂ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಟೀಸರ್ ಹಾಗೂ ಚಿತ್ರದ ಮೊದಲ ಹಾಡು “ನಮ್ ಪೈಕಿ ಒಬ್ಬ ಹೋಗ್ಬುಟ್ನಾ” ಜನರ ಮನ ತಲುಪಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin