ಜಾತಿ ಸಂಘರ್ಷದ ಕಥೆಯ “ಕರ್ಕಿ” ಚಿತ್ರದ ಹಾಡು ಬಿಡುಗಡೆ

ಜಾತಿ ಸಂಘರ್ಷದಲ್ಲಿ ನಲುಗಿದ ವ್ಯಕ್ತಿಯ ಕಥೆಯ ಜೊತೆ ಜೊತೆಗೆ ಶಿಕ್ಷಣದ ಮಹತ್ವ ಸಾರುವ “ಕರ್ಕಿ” ನಾನು ಬಿಎ ಎಲ್ ಎಲ್ ಬಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಹಾಡು ಬಿಡುಡಗೆಯಾಗಿದ್ದು ಗಮನ ಸೆಳೆದಿದೆ.

ಚಿತ್ರದ ಹಾಡು ಬಿಡುಗಡೆ ವೇಳೆ ಚಿತ್ರ ಸಾಹಿತಿ ಕವಿರಾಜ್, ನಿರ್ದೇಶಕ ಪವಿತ್ರನ್, ನಿರ್ಮಾಪಕ ಪಳನಿ ಪ್ರಕಾಶ್, ನಟ ಜೆಪಿ ರೆಡ್ಡಿ, ನಟಿ ಮೀನಾಕ್ಷಿ ದಿನೇಶ್, ಕಲಾವಿದಾರ ಸಾಧುಕೋಕಿಲ, ಬಾಲರಾಜ ವಾಡಿ, ಯತಿರಾಜ್, ವಾಲೆ ಮಂಜುನಾಥ್ ಸೇರಿದಂತೆ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಮೊದಲಿಗೆ ಮಾತಿಗಿಳಿದ ಚಿತ್ರ ಸಾಹಿತಿ ಕವಿರಾಜ್, ಶತಮಾನಗಳಿಂದ ನೊಂದು ಬೆಂದ ತಳ ಸಮುದಾಯಗಳ ಆಕ್ರೋಶ , ಶೋಷಿತ ಸಮುದಾಯದವರ ಕಥೆ ಕರ್ಕಿಯಲ್ಲಿದೆ. ಸಿನಿಮಾ ಬೆಚ್ಚಿ ಬೀಳಿಸುವಂತಿದೆ. ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಚಿತ್ರ ನಿರ್ದೇಶನ ಮಾಡಿದ್ದು 6 ಹಾಡುಗಳಿವೆ ಎಲ್ಲಾ ಹಾಡುಗಳನ್ನು ತಾವೇ ಬರೆದಿದ್ದೇನೆ. ಪ್ರತಿಯೊಂದು ಹಾಡು ಕೂಡ ಸಮಾಜವನ್ನು ಪ್ರಶ್ನೆ ಮಾಡುವಂತಿದೆ. ಸಿನಿಮಾಗೆ ದೊಡ್ಡ ಗೆಲುವಾಗಲಿ. ತಳಮಟ್ಟದ ಭಾವನೆಗಳನ್ನು ರಾಕ್ ಶೈಲಿಯಲ್ಲಿ ಹೇಳಲಾಗಿದೆ ಎಂದರು
ನಾಯಕ ಜೆಪಿ ಮಾತನಾಡಿ, ಜಗತ್ತು ಇಷ್ಟು ಮುಂದುವರಿದೂ ಜನ ಇನ್ನೂ ಯಾಕೆ ಜಾತಿಯ ಹಿಂದೆ ಬಿದ್ದಿದ್ದಾರೋ ಅರ್ಥವಾಗದ ಸಂಗತಿ, ಚಂದ್ರನ ಅಂಗಳಕ್ಕೂ ಹೋಗಿ ಬಂದಿದ್ದೇವೆ. ಆದರೆ ಜಾತಿಯ ಸಂಘರ್ಷದಿಂದ ಸಮಾಜ ಇನ್ನೂ ಮುಕ್ತವಾಗಿಲ್ಲ,. ಅಂತಹ ಕತೆಯನ್ನು ಕರ್ಕಿ ಹೊಂದಿದೆ. ಶೋಷಣೆಗೆ ಒಳಗಾದ ಹುಡುಗನ ಕತೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.ಎಲ್ಲರ ಸಹಕಾರ ಮತ್ತು ಬೆಂಬಲ ಚಿತ್ರಕ್ಕಿರಲಿ ಎಂದರು.

ನಟಿ ಮೀನಾಕ್ಷಿ ದಿನೇಶ್, ಒಳ್ಳೆಯ ಪಾತ್ರ ಸಿಕ್ಕಿದೆ. ಕನ್ನಡದಲ್ಲಿ ಮೊದಲ ಚಿತ್ರ, ಬೇರೆ ಬೇರೆ ಭಾಷೆಯಿಂದ ಅವಕಾಶ ಬರುತ್ತಿವೆ ಎಂದು ಹೇಳಿದರು
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲರಾಜ ವಾಡಿ ಮಾತನಾಡಿ, ಚಿತ್ರದಲ್ಲಿ ಪವರ್ ಫುಲ್ ಪಾತ್ರ, ನನ್ನ ಮತ್ತಯ ನಾಯಕನ ಸುತ್ತ ಕಥೆ ಸಾಗಲಿದೆ, ಶೋಷಿತ ಸಮುದಾಗಳ ಕಥೆ ಎಂದರು.
ಮತ್ತೊಬ್ಬ ಕಲಾವಿದ ಯತಿರಾಜ್ ಮಾತನಾಡಿ, ಶೋಷಿತ ಮತ್ತು ತಳ ಸಮುದಾಯಗಳ ಕಥೆಯ ಜೊತೆ ಶಿಕ್ಷಣದ ಮಹತ್ವ ಸಾರುವ ಕತೆ ಚಿತ್ರದಲ್ಲಿ ನಾಯಕನ್ನು ರೇಗಿಸುವ ಮತ್ತು ಆತನನ್ನು ಕೆದಕುವ ಪ್ರಾದ್ಯಾಪಕನ ಪಾತ್ರ ಎಂದರು ಮಾಹಿತಿ ನೀಡಿದರು

ತಮಿಳಿನ ಹಿರಿಯ ನಿರ್ದೇಶಕ ಪವಿತ್ರನ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಪಳನಿ ಪ್ರಕಾಶ್ ಬಂಡವಾಳ ಹಾಕಿದ್ದಾರೆ. ವಾಲೆ ಮಂಜು ಸೇರಿದಂತೆ ಅನೇಕರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.