Sudhir Attavar at the Jaipur International Film Festival Indian Panorama "Best Film" Award for Mrathiorma

ಜೈಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಧೀರ್ ಅತ್ತಾವರ್ ರ ಮ್ರತ್ಯೋರ್ಮ ಕ್ಕೆ ಇಂಡಿಯನ್ ಪನೋರಮ “ಅತ್ಯುತ್ತಮ ಚಿತ್ರ” ಪ್ರಶಸ್ತಿ. - CineNewsKannada.com

ಜೈಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಧೀರ್ ಅತ್ತಾವರ್ ರ ಮ್ರತ್ಯೋರ್ಮ ಕ್ಕೆ ಇಂಡಿಯನ್ ಪನೋರಮ “ಅತ್ಯುತ್ತಮ ಚಿತ್ರ” ಪ್ರಶಸ್ತಿ.

ಜೈಪುರದಲ್ಲಿ ಫೆ 9 ರಿಂದ13ರ ವರೆಗೆ ನಡೆಯುವ ಜೈಪುರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಧೀರ್ ಅತ್ತಾವರ ನಿರ್ದೇಶನದ ಮ್ರತ್ಯೋರ್ಮ ಚಿತ್ರ ಇಂಡಿಯನ್ ಪನೋರಮಕ್ಕೆ ಆಯ್ಕೆ ಗೊಂಡು, ಅತ್ಯುತ್ತಮ ಚಿತ್ರ ಜ್ಯೂರಿ ಪ್ರಶಸ್ತಿಗೆ ಭಾಜನವಾಗಿದೆ.

ಸುಮಾರು 67 ದೇಶಗಳಿಂದ 329 ಚಿತ್ರಗಳು ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 101 ಚಲನಚಿತ್ರಗಳು ಸ್ಪರ್ಧಾ ಕಣದಲ್ಲಿತ್ತು.ತ್ರಿವಿಕ್ರಮ ಸಪಲ್ಯ ರವರು ದ್ರತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಿಸಿರುವ ಈ ಚಿತ್ರ ಇತ್ತೀಚೆಗೆ ಮೂನ್ ವೈಟ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಸೇರಿ 4 ಪ್ರಶಸ್ತಿಗಳನ್ನು ಬಾಚಿಕೊಂಡು ಮಹಾರಾಷ್ಟ್ರ ಗವರ್ನರ್ ರಮೇಶ್ ಬಯಾಸ್ ರಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದ್ದರು.

ಮಹರಾಷ್ಟ್ರ ಗವರ್ನರ್ ವಿಶೇಷವಾಗಿ ಚಿತ್ರವನ್ನು ಹೊಗಳಿದ್ದು, ರಾಜ್ಯಪಾಲರ ಅಧಿಕ್ರತ ವೆಬ್ಸೈಟ್ ನಲ್ಲೂ ಇದನ್ನು ದಾಖಲಿಸಿರುವುದು ವಿಶೇಷ. “ಮ್ರತ್ಯೋರ್ಮ” ಚಿತ್ರವು ಈಗಾಗಲೇ ಅಮೇರಿಕ, ಯುರೋಪ್, ಕೆನ್ಯಾ ದೇಶಗಳ ಹಲವಾರು ಚಿತ್ರೋತ್ಸವಗಳಲ್ಲೂ ಭಾಗವಹಿಸುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin