Suspense thriller movie "Fear" first look poster released

ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ “ಫಿಯರ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ - CineNewsKannada.com

ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ “ಫಿಯರ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ನಟಿ ವೇದಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ
“ಫಿಯರ್ ” ಚಿತ್ರದ ಫಸ್ಟ್‌ಲುಕ್ ಅನ್ನು ನೃತ್ಯ ನಿರ್ದೇಶಕ ನಟ,ನಿರ್ದೇಶಕ. ಪ್ರಭುದೇವ ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ.

ಫಿಯರ್ ಚಿತ್ರದಲ್ಲಿ ವೇದಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ದತ್ತಾತ್ರೇಯ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಎ.ಆರ್ ಅಭಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಜಾತಾ ರೆಡ್ಡಿ ಸಹ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ನಿರ್ದೇಶಕ ಡಾ. ಹರಿತಾ ಗೋಗಿನೇನಿ ಫಿಯರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ಅರವಿಂದ್ ಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ , ತೆಲುಗು, ತಮಿಳು ,ಮಲಯಾಳಂ,ಹಿಂದಿ ಭಾಷೆಯಲ್ಲಿ ಫಿಯರ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ ಶ್ವೇತಾ ಶೆಟ್ಟಿ ಡಬ್ಬಿಂಗ್ ಹೊಣೆ ನಿಭಾಯಿಸಿದ್ದಾರೆ .ಫಿಯರ್ ಚಿತ್ರ” ಬಿಡುಗಡೆಗೂ ಮುನ್ನವೇ ವಿವಿಧ ಅಂತಾರಾಷ್ಟ್ರೀಯ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಹೊಸ ದಾಖಲೆ ಸೃಷ್ಟಿಸಿದೆ.

ಸ್ಟಾರ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಇಂದು “ಭಯ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕತ್ತಲ ಕೋಣೆಯಲ್ಲಿ ನಾಯಕಿ ಭಯಭೀತರಾಗಿ ಕಾಣುತ್ತಿರುವ ಸ್ಟಿಲ್‌ನೊಂದಿಗೆ ಡಿಸೈನ್ ಮಾಡಿರುವ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸುತ್ತಿದೆ. ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ “ಫಿಯರ್ “ಚಿತ್ರ ಶೀಘ್ರದಲ್ಲೇ ಚಿತ್ರಮಂದಿರಕ್ಕರ ಬರಲು ಸಜ್ಜಾಗಿದೆ..

ಚಿತ್ರದ ತಾರಾಗಣದಲ್ಲಿ ವೇದಿಕಾ, ಅರವಿಂದ್ ಕೃಷ್ಣ, ಜೆಪಿ- ಜಯಪ್ರಕಾಶ್ ,ಪವಿತ್ರ ಲೋಕೇಶ್, ಅನೀಶ್ ಕುರುವಿಲ್ಲ, ಸಯಾಜಿ ಶಿಂಧೆ, ಸತ್ಯ ಕೃಷ್ಣ, ಸಾಹಿತಿ ದಾಸರಿ, ಶಾನಿ ಮುಂತಾದವರಿದ್ದಾರೆ.

ಚಿತ್ರಕ್ಕೆ ಅನುಪ್ ರೂಬೆನ್ಸ್ ಸಂಗೀತ, ಐ ಆಂಡ್ರ್ಯೂ ಛಾಯಾಗ್ರಾಹಣವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin