Talented actor Rishi celebrates 7 years of his debut film "Operation Alamelamma".

ಪ್ರತಿಭಾನ್ವಿತ ನಟ ರಿಷಿ ಚೊಚ್ಚಲ ಚಿತ್ರ “ಆಪರೇಷನ್ ಅಲಮೇಲಮ್ಮ” ಗೆ 7 ವರ್ಷದ ಸಂಭ್ರಮ - CineNewsKannada.com

ಪ್ರತಿಭಾನ್ವಿತ ನಟ ರಿಷಿ ಚೊಚ್ಚಲ ಚಿತ್ರ “ಆಪರೇಷನ್ ಅಲಮೇಲಮ್ಮ” ಗೆ 7 ವರ್ಷದ ಸಂಭ್ರಮ

ಯುವ ಪ್ರತಿಭಾನ್ವಿತ ನಟ ರಿಷಿ ನಟನೆಯ ಚೊಚ್ಚಲ ಚಿತ್ರ “ ಅಪರೇಷನ್ ಅಲಮೇಲಮ್ಮ” ಬಿಡುಗಡೆಯಾಗಿ ಏಳು ವರ್ಷದ ಸಂಭ್ರಮ, ನಿರ್ದೇಶಕ ಸುನಿ ಮತ್ತು ರಿಷಿ ಜೋಡಿಯ ಚಿತ್ರ ತೆರೆಗೆ ಬಂದು ಏಳು ವರ್ಷ ಪೂರ್ಣಗೊಂಡಿದೆ.

Rishi

ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ರಿಷಿ ಚಿತ್ರರಂಕ್ಕೆ ಪಾದಾರ್ಪಣೆ ಮಾಡಿ ಏಳು ವರ್ಷಗಳಾಗಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ರಿಷಿ ನಾಯಕನಾಗಿ ನಟಿಸಿದ್ದ ಮೊದಲ ಚಿತ್ರ “ಆಪರೇಷನ್ ಅಲಮೇಲಮ್ಮ” ತೆರೆಕಂಡು ಏಳ ವಸಂತಗಳು ಕಳೆದಿದೆ. ಮೊದಲ ಚಿತ್ರದಲ್ಲೇ ರಿಷಿ ನಾಯಕನಾಗಿ ಕನ್ನಡಿಗರ ಮನ ಗೆದ್ದಿದ್ದರು. ಆನಂತರ ವಾಹಿನಿಯಲ್ಲೂ ಅಧಿಕ ಬಾರಿ ಪ್ರಸಾರಗೊಂಡ ಎಲ್ಲರ ಮನೆ ಹಾಗೂ ಮನ ತಲುಪಿದೆ.

Rishi

ಅಮರೇಶ್ ಸೂರ್ಯಕಾಂತಿ ಅವರು ನಿರ್ಮಾಣ ಮಾಡಿದ್ದ ಈ ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನವಿತ್ತು. ಈ ಚಿತ್ರದ ಹಾಡುಗಳು ಸಹ ಎಲ್ಲರ ಗಮನ ಸೆಳೆದಿತ್ತು. ಅಷ್ಟೇ ಅಲ್ಲದೆ ಜನಪ್ರಿಯ ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡಿದ ಮೊದಲ ಚಿತ್ರ ಕೂಡ “ಆಪರೇಷನ್ ಅಲಮೇಲಮ್ಮ”.

ಈ ಚಿತ್ರದಲ್ಲಿ ರಿಷಿ ಅವರಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದರು. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸುಮುಖ ಮುಂತಾದವರು ತಾರಾಬಳಗದಲ್ಲಿದ್ದರು. ಚಿತ್ರ 2017ರಲ್ಲಿ ತೆರೆಗೆ ಬಂದಿತ್ತು

ತಮ್ಮ ಮೊದಲ ಚಿತ್ರ ಬಿಡುಗಡೆಯಾಗಿ ಏಳು ವರ್ಷಗಳು ಪೂರೈಸಿರುವ ಈ ಸಮಯದಲ್ಲಿ ನಟ ರಿಷಿ ಕನ್ನಡ ಕಲಾಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin