Teaser release of 'Aadhunika Shravanakumara'

ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್ - CineNewsKannada.com

ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್

‘ಆಧುನಿಕ ಶ್ರವಣಕುಮಾರ’ ಟೀಸರ್ ರಿಲೀಸ್ – ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಚಿತ್ರ. ಕೃಷ್ಣ ಕೆ.ಎಸ್ ಚೊಚ್ಚಲ ನಿರ್ದೇಶನದಲ್ಲಿ ರಾಘವೇಂದ್ರ ರಾಜ್ ಕುಮಾರ್, ಸ್ಪರ್ಶ ರೇಖಾ ಮುಖ್ಯ ಭೂಮಿಕೆಯ ‘ಆಧುನಿಕ ಶ್ರವಣಕುಮಾರ’ ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಹಿರಿಯ ಹಾಗೂ ಅನುಭವಿ ಕಲಾವಿದರ ತಾರಾಬಳಗ ಇರುವ ಈ ಚಿತ್ರತಂಡ ಟೀಸರ್ ಮೂಲಕ ಸಿನಮಾ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.

ಸರ್ಕಾರಿ ಶಾಲೆ ಉಳಿಸಬೇಕು ಎಂದು ಪಣ ತೊಡುವ ಹಾಗೂ ಸ್ನೇಹಿತರ ಜೊತೆಗಿನ ಬಾಂದವ್ಯವನ್ನು ಸಾರುವ ಫ್ಯಾಮಿಲಿ ಎಂಟಟೈನ್ಮೆಂಟ್ ಸಿನಿಮಾ ಆಧುನಿಕ ಶ್ರವಣಕುಮಾರ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಕೃಷ್ಣ.ಕೆ.ಎಸ್ ಚಂದನವನಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ.

ನಿರ್ದೇಶಕ ಕೃಷ್ಣ. ಕೆ. ಎಸ್ ಮಾತನಾಡಿ ಇದು ನನ್ನ ಮೊದಲ ಸಿನಿಮಾ. ಕೋವಿಡ್ ಗೂ ಮೊದಲೇ ಅಪ್ಪು ಸರ್ ಇದ್ದಾಗಲೇ ರಾಘಣ್ಣ ಅವರಿಗೆ ಕಥೆ ಹೇಳಿದ್ದೆ. ತುಂಬಾ ಖುಷಿಯಿಂದ ಒಪ್ಪಿಕೊಂಡ್ರು. ಹಲವು ಹಿರಿಯ ನಟರು ಚಿತ್ರದ ತಾರಾಬಳಗದಲ್ಲಿದ್ದಾರೆ. ಫ್ಯಾಮಿಲಿ ಎಂಟಟೈನ್ಮೆಂಟ್ ಜೊತೆಗೆ ಸರ್ಕಾರಿ ಶಾಲೆ ಉಳಿವಿನ ವಿಚಾರವೂ ಚಿತ್ರದಲ್ಲಿದೆ. ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ಈ ಚಿತ್ರ ನೀಡಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಮಾರ್ಚ್ ನಲ್ಲಿ ಸಿನಿಮಾ ತೆರೆಗೆ ತರುವ ತಯಾರಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಇದು ನನ್ನ ಸಿನಿಮಾ ಅಲ್ಲ ಈ ಚಿತ್ರದಲ್ಲಿ ನಾನು ಒಂದು ಪಾತ್ರ ಅಷ್ಟೇ. ನಾಲ್ಕು ಜನ ಸ್ನೇಹಿತರು ಇರ್ತಾರೆ. ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತೆ. ಅವರಿಗೆ ಸ್ನೇಹಿತನೇ ಸಮಸ್ಯೆ ಆದಾಗ ಹೇಗೆ ಅದನ್ನು ಸರಿ ಹೊಂದಿಸಿಕೊಳ್ಳುತ್ತಾರೆ ಅನ್ನೋದು ಈ ಚಿತ್ರದ ಎಳೆ. ತುಂಬಾ ಇಷ್ಟವಾದ ಪಾತ್ರ ಮಾಡಿದ್ದೇನೆ. ಅಪ್ಪು ಬಿಟ್ಟು ಹೋದ ಮೇಲೆ ಮಾಡಿದ ಮೊದಲ ಸಿನಿಮಾವಿದು. ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.

ನಿರ್ಮಾಪಕ ಎನ್. ಭರತ್ ಬಾಬು ಮಾತನಾಡಿ ದಿ ನಾಗ್ಸ್ ಫಿಲಂಸ್ ಮತ್ತು ಮೀಡಿಯಾ ಬ್ಯಾನರ್ ಮೊದಲ ಸಿನಿಮಾವಿದು. ತುಂಬಾ ಜನ ಸೀನಿಯರ್ ಆರ್ಟಿಸ್ಟ್ ಈ ಚಿತ್ರದಲ್ಲಿ ನಟಿಸಿದ್ದಾರೆ. ನಮ್ಮ ನಿರ್ಮಾಣದ ಮೊದಲ ಸಿನಿಮಾ ಹಾಗೆಯೇ ನಿರ್ದೇಶಕರಿಗೂ ಇದು ಮೊದಲ ಪ್ರಯತ್ನ ಹಾಗಿದ್ದೂ ಕೂಡ ಎಲ್ಲಾ ಹಿರಿಯ ಕಲಾವಿದರು ನಮಗೆ ಸಪೋರ್ಟ್ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ತಿಳಿಸಿದ್ರು.

ಹಿರಿಯ ಹಾಗೂ ಅನುಭವಿ ಕಲಾವಿದರ ಸಮಾಗಮ ಇರುವ ಈ ಚಿತ್ರದಲ್ಲಿ ಬಾಲ ರಾಜ್ವಾಡಿ. ದಿಲೀಪ್ ಪೈ, ಮಿಮಿಕ್ರಿ ದಯಾನಂದ್, ಗೋವಿಂದೇ ಗೌಡ, ಟಿ ಎಸ್. ನಾಗಭರಣ, ರಮೇಶ್ ಭಟ್, ಗಿರಿಜಾ ಲೋಕೇಶ್, ಸ್ಪರ್ಶ ರೇಖಾ, ಸುಧಾ ಬೆಳವಾಡಿ, ರಘು ರಮಣಕೊಪ್ಪ, ಗಿಲ್ಲಿ ನಟ ಒಳಗೊಂಡ ತಾರಾಬಳಗವಿದೆ. ಅರುಣ್ ಶ್ರೀನಿವಾಸ್ ಸಂಗೀತ ನಿರ್ದೇಶನ, ಸಿದ್ದು.ಕೆ.ಎಸ್.ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin