Teaser release of Lambani Samudya's movie "Gore Gad".

ಲಂಬಾಣಿ ಸಮುದಯದ “ಗೋರ್ ಗಡ್” ಚಿತ್ರದ ಟೀಸರ್ ಬಿಡುಗಡೆ - CineNewsKannada.com

ಲಂಬಾಣಿ ಸಮುದಯದ “ಗೋರ್ ಗಡ್” ಚಿತ್ರದ ಟೀಸರ್ ಬಿಡುಗಡೆ

ಬಂಜಾರ ಜನಾಂಗದ ಆಚರಣೆ, ಆಚಾರ ವಿಚಾರ, ಲಂಬಾಣಿಗಳ ಉಡುಗೆ ತೊಡುಗೆ, ಪೂಜಿಸುವ ವಿಧಾನ, ಎಲ್ಲೂ ಸಿಗದಂತ ಆಭರಣವನ್ನು ತೊಡುತ್ತಾರೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಇವೆಲ್ಲವೂ ನಶಿಸಿ ಹೋಗುತ್ತಿದೆ. ವಿದ್ಯಾವಂತರು ಸಿಟಿಗೆ ಬರುತ್ತಿದ್ದಾರೆ ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ಮಾಡಿರುವ ಸಿನಿಮಾ “ಗೋರ್ ಗಡ್”.

ಗೋರ್ ಅಂದರೆ ಸಮುದಾಯ. ಅವರು ಸತ್ಯ, ನ್ಯಾಯ, ನೀತಿಗೆ ತಲೆ ಬಾಗುತ್ತಾರೆ. ಗಡ್ ಎನ್ನುವುದು ಸಾಮ್ರಾಜ್ಯ ಎಂದು ಚಿತ್ರದ ಶೀರ್ಷಿಕೆಯ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕ, ಗಾಯಕ, ಸಾಹಿತಿ ದಾವಣಗೆರೆಯ ಶಶಿಕುಮಾರ್.ಜೆ.ಕೆ.

ಚಿತ್ರದ ಎಲ್ಲಾ ಕೆಲಸ ಮುಗಿಸಿದ ನಂತರ ಮಾಧ್ಯಮದ ಮುಂದೆ ಬರುವುದು. ಪ್ರಾರಂಭದಿಂದಲೂ ಸದಾ ಸುದ್ದಿಯಲ್ಲಿರುವುದು. ಅದೇ ರೀತಿಯಲ್ಲಿ ‘ಗೋರ್ ಗಡ್’ ಚಿತ್ರ ಎರಡನೇ ಸಾಲಿಗೆ ಸೇರಿಕೊಳ್ಳುತ್ತದೆ. ಶೂಟಿಂಗ್‍ಗೆ ಹೋಗುತ್ತಿದ್ದೇವೆಂದು ಹೇಳಿಕೊಳ್ಳಲೆಂದು ಟೀಸರ್ ಬಿಡುಗಡೆ ಏರ್ಪಾಟು ಮಾಡಿದ್ದರು.

ಮಾತನಾಡಿದ ನಿರ್ದೇಶಕ ಶಶಿಕುಮಾರ್ ಮಾತನಾಡಿ ಮೂಲತ: ಗಾಯಕ. ಹಾಡು ಬರೆಯುವ ಹವ್ಯಾಸ ಇದೆ. ಕಳೆದ ವರ್ಷ ಪುನೀತ್‍ರಾಜ್‍ಕುಮಾರ್ ಆಲ್ಬಂಗೆ ಧ್ವನಿಯಾಗಿದ್ದೆ, ಇದೀಗ ನಾಲ್ಕನೇ ಬಾರಿಗೆ ನಿರ್ದೇಶನ ಮಾಡುತ್ತಿದ್ದೇನೆ ಎಂದರು

ಕರ್ನಾಟಕದಲ್ಲಿ 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ಪ್ರಯೋಜನವಾಗುತ್ತಿಲ್ಲ. ಲಂಬಾಣಿ ಸಮುದಾಯದ ಜಾತಿ, ಸಂಸ್ಕ್ರತಿ ಉಳಿಬೇಕು. ಇದನ್ನು ಎಲ್ಲರಿಗೂ ಅರಿವು ಮೂಡಿಸುವಂತೆ ಹೋರಾಟ ಮಾಡಬೇಕು. ಅವನತಿಗೆ ಹೋಗುತ್ತಿರುವ ಜನಾಂಗವನ್ನು ಹೇಗೆ ಮುನ್ನಲೆಗೆ ತರಬೇಕು ಎನ್ನುವ ಅಂಶಗಳನ್ನು ತೋರಿಸಲಾಗುತ್ತಿದೆ ಎಂದು ಹೇಳಿದರು

ಹೂವಿನ ಹಡಗಲಿ, ದಾವಣಗೆರೆ, ಚಿತ್ರದುರ್ಗ, ಹೊಸದುರ್ಗ, ಹೊಸೂರು ಕಡೆಗಳಲ್ಲಿ ಜನವರಿ ಎರಡನೇ ವಾರದಿಂದ ಚಿತ್ರೀಕರಣ ಶುರು ಮಾಡಲು ಯೋಜನೆ ರೂಪಿಸಲಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಲಂಬಾಣಿ, ಮರಾಠಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ನಿಮ್ಮಗಳ ಪ್ರೋತ್ಸಾಹ ಬೇಕೆಂದು ಕೋರಿದರು.

ನಾಯಕ ಧನುಷ್ ನಾಯ್ಡು,ಹೊಸೂರುನಲ್ಲಿ ಅಪ್ಪ ಕಾರು ಚಾಲಕರಾಗಿದ್ದರು. ಡಿಎಸ್‍ಕೆ ಗ್ರೂಪ್ ಶುರು ಮಾಡಿ ಉದ್ಯಮದಲ್ಲಿ ಯಶಸ್ಸು ಕಂಡಿದ್ದರಿಂದ ಸಮಾಜ ಸೇವೆಯಲ್ಲಿ ನಿರತನಾಗಿದ್ದೇನೆ. ಏನಾದರೂ ಮಾಡಬೇಕೆಂಬ ಬಯಕೆಯಿಂದ ಡಿಎಸ್‍ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಬಂಡವಾಳ ಹೂಡುವ ಜತೆಗೆ ನಾಯಕನಾಗಿ ಅಭಿನಯಿಸುತ್ತಿದ್ದೇನೆ ಎಮದರು

ತನು ನಾಯಕಿ. ಉಳಿದಂತೆ ಗೀತಾಮಿಲನ್, ಭವ್ಯಪ್ರವೀಣ್, ವಿಜಯ್‍ಕುಮಾರ್, ಸೂಪರ್ ಕಮಲ್, ನಾರಾಯಣ್ ಮುಂತಾದವರು ನಟಿಸುತ್ತಿದ್ದಾರೆ. ಐದು ಹಾಡುಗಳಿಗೆ ಸಾಹಿತ್ಯ, ಕಥೆ ಮತ್ತು ಸಂಗೀತ ಸಂಯೋಜಿಸುತ್ತಿರುವುದು ಕುಬೇರ ನಾಯಕ್.ಎಲ್. ಛಾಯಾಗ್ರಹಣ ಧನ್‍ಪಾಲ್, ಸಂಕಲನ ರವಿರಾಥೋಡ್.ಸಿಕೆ ನಿರ್ವಹಿಸುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin