Thalaiva Kamal in 'Lal Salaam': Rajinikanth as Mohiddin Bhai

‘ಲಾಲ್ ಸಲಾಂ’ ಚಿತ್ರದಲ್ಲಿ ತಲೈವಾ ಕಮಾಲ್: ಮೊಹಿದ್ದೀನ್ ಭಾಯ್ ಆಗಿ ರಜನಿಕಾಂತ್ - CineNewsKannada.com

‘ಲಾಲ್ ಸಲಾಂ’  ಚಿತ್ರದಲ್ಲಿ ತಲೈವಾ ಕಮಾಲ್: ಮೊಹಿದ್ದೀನ್ ಭಾಯ್ ಆಗಿ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಸಿನಿಮಾ ಲಾಲ್ ಸಲಾಂ. ಈ ಚಿತ್ರದಲ್ಲಿ ತಲೈವ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅವರ ಫಸ್ಟ್ ಲುಕ್ ಪೆÇೀಸ್ಟರ್ ರಿಲೀಸ್ ಆಗಿದ್ದು, ರಜನಿಯ ಹೊಸ ಅವತಾರ ನೋಡಿ ಫ್ಯಾನ್ ಫಿದಾ ಆಗಿದ್ದಾರೆ.

ಮಗಳು ಐಶ್ವರ್ಯ ನಿರ್ದೇಶನದ ಲಾಲ್ ಸಲಾಂ ಚಿತ್ರದಲ್ಲಿ ರಜನಿಕಾಂತ್ ಮೊಹಿದ್ದೀನ್ ಭಾಯ್ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶೇರ್ವಾನಿ ಉಡುಪು ಧರಿಸಿ ಸನ್‍ಗ್ಲಾಸ್ ತೊಟ್ಟು ತಲೆಗೆ ಟೋಪಿ ಹಾಕಿ ಎಂಟ್ರಿಕೊಟ್ಟಿರುವ ಸೂಪರ್ ಸ್ಟಾರ್ ಗೆಟಪ್ ನೋಡುಗರ ಗಮನಸೆಳೆಯುತ್ತಿದೆ.

ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಜೀವಿತಾ ರಾಜಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತ, ವಿಷ್ಣು ರಂಗಸ್ವಾಮಿ ಛಾಯಾಗ್ರಹಣ ಚಿತ್ರಕ್ಕಿದೆ. ಲಾಲ್ ಸಲಾಂ’ ಸ್ಪೋಟ್ರ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಇಂಡಿಯನ್, ಕೈದಿ ನಂಬರ್-150, 2.0, ದರ್ಬಾರ್, ಪೆÇನ್ನಿಯಿನ್ ಸೆಲ್ವನ್ ಸರಣಿ ಸಿನಿಮಾ ನಿರ್ಮಿಸಿರುವ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೋಡಕ್ಷನ್ ಹೌಸ್ ಲಾಲ್ ಸಲಾಂ ಚಿತ್ರ ನಿರ್ಮಾಣ ಮಾಡುತ್ತಿದೆ. ಸದ್ಯ ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin